ಕೊಡಿಗೆನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಕೆರೆ ಹಾಗೂ ಮೈದನಹಳ್ಳಿ ಕೆರೆ ಗಳಿಗೆ ಬಾಗಿನ ಅರ್ಪಿಸಿದ ಎಂ ಎಲ್ ಸಿ. ಆರ್ ರಾಜೇಂದ್ರ…….
ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ದೊಡ್ಡ ಮಾಲೂರು ಕೆರೆಯ ತುಂಬಿ ಸುಮಾರು 25 ವರ್ಷಗಳಾಗಿದೆ ಹಾಗೂ ಮೈದನಹಳ್ಳಿ ಕೆರೆಯು ಸಹ ತುಂಬಿ 35 ವರ್ಷಗಳಾಗಿದೆ ಇಂದು ಎರಡು ಕೆರೆಗಳು ತುಂಬಾ ಕೋಡಿ ಹೋಗುತ್ತಿರುವುದರಿಂದ ಸಾಂಪ್ರದಾಯದಂತೆ ಆರ್ ರಾಜೇಂದ್ರಅಭಿಮಾನಿ ಬಳಗ ಕೆ ಎನ್ ಆರ್ ಅಭಿಮಾನಿ ಬಳಗದ ವತಿಯಿಂದ ಕೆರೆಗಳಿಗೆ ಬಾಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಧಾರಾಕಾರ ಮಳೆಯಿಂದ ಕೆರೆಗಳು ಮೈದುಂಬಿ ಹರಿಯುತ್ತಿರುವುದಾದಿಂದ ಬಾಗಿನ ಅರ್ಪಿಸಿ ಮೈದನ ಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯ ಕಾರ್ಯಕ್ರಮ ಆ ಯೋಜನೆ ಮಾಡಲಾಗಿತ್ತು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ ರವರು ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ನಂತರ ಇಡೀ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಮಧುಗಿರಿ ತಾಲೂಕಿನಲ್ಲಿ ಜಯಮಂಗಲಿ ನದಿ ಹಾಗೂ ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ ನಾನು ನನ್ನ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಮತ್ತು ಈಗಾಗಲೇ ಕೊಚ್ಚಿ ಹೋಗಿರುವ ಸೇತುವೆಗಳನ್ನು ಹಾಗೂ ಮನೆಗಳಿಗೆ ನೀರು ನುಗ್ಗಿರುವ ತಾಯಂದಿರಿಗೆ ಅಣ್ಣ ತಮ್ಮಂದಿರಿಗೆ ಭಯ ಪಡಬೇಡಿ ಸರ್ಕಾರದಿಂದ ಏನು ಸವಲತ್ತುಗಳು ನಿಮಗೆ ಸಿಗಬೇಕು ಅವುಗಳನ್ನು ನೇರವಾಗಿ ನಿಮಗೆ ತಲುಪುವಂತೆ ಮಾಡುತ್ತೇನೆ ಹಾಗೂ ಲೋಕಸಭಾ ಸದಸ್ಯರಾದ ಜಿಎಸ್ ಬಸವರಾಜ್ ಅವರೊಂದಿಗೆ ಮಾತನಾಡಿ ಆದಷ್ಟು ಬೇಗನೆ ಯಾವ ಯಾವ ಹಳ್ಳಿಗಳ ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿವೆ. ಅವುಗಳನ್ನು ಅಭಿವೃದ್ಧಿಪಡಿಸಲು ಸಂಸದರಲ್ಲಿ ಮನವಿ ಮಾಡುತ್ತಾ ಅತಿ ತುರ್ತಾಗಿ ಈ ಕೆಲಸಗಳನ್ನು ಮಾಡಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಮತ್ತು ದೊಡ್ಡ ಮಾಲೂರು ಕೆರೆ ಹಾಗೂ ಮೈದನಳ್ಳಿ ಕೆರೆಗೆ ಬಾಗಿನ ಅರ್ಪಿಸಲು ಕಾರಣಕರ್ತರಾದ ಎಲ್ಲಾ ನನ್ನ ನೆಚ್ಚಿನ ಕಾರ್ಯಕರ್ತ ಮುಖಂಡರುಗಳಿಗೆ ಹಾಗೂ ಯುವಕ ಸ್ನೇಹಿತರಿಗೆ ನನ್ನ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರೆ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಮಲ್ಲಿಕಾರ್ಜುನಯ್ಯ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಜಿ ಜೆ ರಾಜಣ್ಣ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಬಿಎನ್ ನಾಗೇಶ್ ಬಾಬು ಆದಿ ನಾರಾಯಣ ರೆಡ್ಡಿ ಕೋಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಶ್ರೀನ್ ತಾಜ್ ಉಪಾಧ್ಯಕ್ಷರಾದ ಟಿ ವಿ ಮಂಜುನಾಥ್ ಸುವರ್ಣಮ್ಮ ಇಂದಿರಾ ದೇನ ನಾಯಕ್ ಸಂಜೀವ ಗೌಡ ಜೆ .ಡಿ . ವೆಂಕಟೇಶ್. ಶಾಮೀರ್ ಕೆ ವಿ ವೆಂಕಟೇಶ್ ಮಕ್ತಿಯಾಾರ್ ತಿಮ್ಮರಾಜು ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು