IMG 20220917 WA00391

ಪಾವಗಡ:ಅಕ್ರಮ ಮಧ್ಯ ಮಾರಾಟ ವನ್ನು ತಡೆಯುವಂತೆ ಮನವಿ…!

DISTRICT NEWS ತುಮಕೂರು

ಅಕ್ರಮ ಮಧ್ಯ ಮಾರಾಟ ವನ್ನು ತಡೆಯುವಂತೆ ಶಾಸಕ ವೆಂಕಟರಮಣಪ್ಪನವರಿಗೆ ಮಹಿಳೆಯರು ಮನವಿ.               

ಪಾವಗಡ:   ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಧ್ಯವು ಎಗ್ಗಿಲ್ಲದೆ ಎಲ್ಲಂದರಲ್ಲಿ ಮಾರಾಟವಾಗುತ್ತಿದ್ದು,   ಗ್ರಾಮೀಣ ಭಾಗದ ಜನತೆ ಮಧ್ಯ ವ್ಯಸನಿಗಳಾಗಿ  ಮಹಿಳೆಯರ ಮೇಲೆ ಕುಡಿದ ಅಮಲಿನಲ್ಲಿ , ಕಿರುಕುಳ, ದೌರ್ಜನ್ಯ, ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ಕರೆಕ್ಯಾತನಹಳ್ಳಿ, ,  ಗ್ರಾಮದ ಮಹಿಳೆಯರು ಶಾಸಕ ವೆಂಕಟರವಣಪ್ಪ ಅವರಿಗೆ ದೂರು ನೀಡಿದರು.

 ಕರ್ನಾಟಕ ಸರ್ಕಾರದ  ಪ್ರತಿಷ್ಠಿತ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಎಂಬ ಕಾರ್ಯಕ್ರಮ ತಾಲ್ಲೂಕಿನ ನಿಡಗಲ್ ಹೋಬಳಿ ಕರೆಕ್ಯಾತನಹಳ್ಳಿಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ  ಗ್ರಾಮಸ್ಥರು  ತಮ್ಮ ಗ್ರಾಮಗಳ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು

ಮಧ್ಯ ವ್ಯಸನಿಗಳಾದ  ಪುರುಷರಿಂದ ಮಹಿಳೆಯರು, ಕೂಲಿ ಕೆಲಸಕ್ಕೆ ಹೋದವರು, ಜಮೀನುಗಳಿಗೆ ಕೆಲಸಕ್ಕೆ ಹೋದವರ ಮೇಲೆ   ಇತ್ತೀಚೆಗೆ ದೌರ್ಜನ್ಯ ಎಸಗುತ್ತಿದ್ದಾರೆ. ಮಧ್ಯಕ್ಕೆ ವ್ಯಸನಿಗಳಾದ ವ್ಯಕ್ತಿಗಳು ಕಳ್ಳತನ, ದರೋಡೆ, ಇತರೆ ದುಷ್ಕೃತ್ಯಗಳಿಗೆ ಒಳಗುತ್ತಿದ್ದಾರೆಂದು, . ಈಗಾಗಲೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ವೆಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು.ಕೂಡಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಯಾವುದೇ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದರೂ ಗ್ರಾಮಗಳಲ್ಲಿ ತಿಂಗಳಾದರೂ  ಕೆಲಸ ಆಗುವುದಿಲ್ಲ. ಅರ್ಹರಿಗೆ ಪಡಿತರ ಚೀಟಿ ಸಿಗುತ್ತಿಲ್ಲ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸುಲಭವಾಗಿ ಜನರಿಗೆ ಸಿಗುವುದಿಲ್ಲ ಎಂದು ಕೋಟೆ ಪ್ರಭಾಕರ್, ಇತರ ಮುಖಂಡರು ಆರೋಪಿಸಿದರು. 

ಶಾಸಕ ವೆಂಕಟರವಣಪ್ಪ ಮಾತನಾಡಿ, ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ, ಪೊಲೀಸ್ ಅಧಿಕಾರಿಗಳು ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು. 

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್ ವರದರಾಜು, ಕರೇಕ್ಯಾತನಹಳ್ಳಿ ಸ್ಮಶಾಣಕ್ಕಾಗಿ ಸ್ಥಳ ಮಂಜೂರು ಮಾಡಿ ಸ್ಮಶಾನದ ಸಮಸ್ಯೆ ಬಗೆಹರಿಸಲಾಗುವುದು ಎಂದರು. 

    ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ಶಿರಸ್ತೇದಾರ್ ಎನ್.ಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಕಾಂತರೆಡ್ಡಿ, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು, ಅಬಕಾರಿ ಸಬ್ ಇನ್ ಸ್ಪೆಕ್ಟರ್ ಪೃಥ್ವಿಿರಾಜು, ಬಿಇಒ ಅಶ್ವಥ್ ನಾರಾಯಣ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ಪಿ ಡಬ್ಲ್ಯುಡಿ ಎಇಇ ಅನಿಲ್ ಕುಮಾರ್, ಮಾಜಿ ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಸ್ವಾರಣ್ಣ, ತಿಪ್ಪೇಸ್ವಾಮಿ, ಕೊಂಡಪ್ಪ, ಸಣ್ಣ ತಿಮ್ಮಣ್ಣ, ಆನಂದ್, ಪ್ರಕಾಶ್, ಪ್ರೇಮ, ಶಿವಮ್ಮ, ಕರಿಯಣ್ಣ, ರಂಗೇಗೌಡ್ರು ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ