ಪಾವಗಡ ತಾಲ್ಲೂಕು ಕ ರ ವೇ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಉಪಹಾರ ಮತ್ತು ಶುದ್ಧ ಕುಡಿಯುವ ನೀರು ವಿತರಣೆ ಮಾಡಲಾಯಿತು
ಕರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶ ರಾಜ್ಯ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ಆಸ್ಪತ್ರೆ ಯಲ್ಲಿನ ರೋಗಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಕಡು ಬಡವರಿಗೆ ಉಪಹಾರ ವಿತರಣೆ ಮಾಡಿದರು .
ತಾಲ್ಲೂಕು ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್ಡೊನ್ ಹಿನ್ನೆಲೆಯಲ್ಲಿ ನಿರ್ಗತಿಕರಿಗೆ ಆಟೋ ಚಾಲಕರಿಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಮ್ಮ ಸಂಘಟನೆ ವತಿಯಿಂದ. ಹದಿನಾಲ್ಕು ದಿನಗಳ ಕಾಲ ಉಪಹಾರ ಮತ್ತು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.
ಯಾವುದೇ ಹೋಟೆಲ್ ಮತ್ತು ಟಿ ಸ್ಟಾಲ್ ಗಳು ತೆರೆಯದ ಕಾರಣ ಜನ ಸಾಮಾನ್ಯರ ಹಸಿವು ಮತ್ತು ನೀರಿನ ದಾಹ ತೀರಿಸಲು ನಮ್ಮ ಸಂಘಟನೆ ಮುಂದಾಗಿದೆ ಅದನ್ನು ಸಾರ್ವಜನಿಕರು ಸದುಯುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅನವಶ್ಯಕ ತಿರುಗಾಟ ಬೇಡ ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ದೇಶದ ರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮಹಾಮಾರಿ ಕರೋನ ನಿಯಂತ್ರಣ ಮಾಡಲು ದೇಶದ ಪ್ರತಿಯೊಬ್ಬ ನಾಗರಿಕನು ಸಹಕರಿಸಬೇಕು ಎಂದು ತಿಳಿಸಿದರು
ಪ್ರತಿಯೊಬ್ಬರು ಮಾಸ್ಕ್ ಖಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೈ ಶುದ್ಧವಾಗಿರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಯಿತು
ಈ ಸಂದರ್ಭದಲ್ಲಿ ಕ ರ ವೇ ಅಧ್ಯಕ್ಷ ಲಕ್ಷೀ ನಾರಾಯಣ
ಉಪಾಧ್ಯಕ್ಷ ನರಸಿ ಪಾಟೀಲ್ ನರಸಿಂಹ ಅನಿಲ್ ಕುಮಾರ್ ಯಾದವ್ ಪ್ರಶಾಂತ್ ನಾಯಕ ನಾಗರಾಜ ನಾಯಕ ರಂಗನಾಯಕ ಅಶೋಕ ನಾಯಕ ಮಂಜುನಾಥ್ ಅಗ್ನಿಶಾಮಕ ಸಿಬ್ಬಂದಿ ಮಂಜುನಾಥ್ ಮಹಿಳಾ ಅಧ್ಯಕ್ಷೆ ಶಶಿಕಲಾ ನಾಗರಾಜು ಮೂರ್ತಿ ಹಾಗೂ ಇನ್ನಿತರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ವರದಿ: ಬುಲೆಟ್ ವೀರಸೇನಯಾದವ್.