28 4 21 8

ಪಾವಗಡ: ಕೋವಿಡ್‍ ರೋಗಿಗಳಿಗೆ ಊಟದ ವ್ಯವಸ್ಥೆ…!

DISTRICT NEWS ತುಮಕೂರು
ಪ್ರತಿ ದಿನ 100 ಜನರಿಗೆ ಊಟದ ವ್ಯವಸ್ಥೆ
ಕಫ್ರ್ಯೂ ಪ್ರಯುಕ್ತ ಯಾವುದೇ ಹೋಟೆಲ್ ಮತ್ತು ಆಹಾರದ ಅಂಗಡಿಗಳು ತೆರೆದಿಲ್ಲದ ಕಾರಣ ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಬಳಲುತ್ತಾ ದಾಖಲಾಗಿರುವ ರೋಗಿಗಳ ಕುಟುಂಬ ವರ್ಗದವರಿಗೆ ಎಲ್ಲಿಯೂ ಆಹಾರ ಸಿಗದ ಕಾರಣ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರ ಮಾರ್ಗದರ್ಶನದಲ್ಲಿ ಸರಿಸುಮಾರು 100 ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.
  ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಸುಮಾರು 100 ಜನರಿಗೆ ಊಟದ ವ್ಯವಸ್ಥೆ ಮಾಡಲು ಪೂಜ್ಯ ಸ್ವಾಮಿ ಜಪಾನಂದಜಿ ರವರು ನಿರ್ಧರಿಸಿರುತ್ತಾರೆ.
ಇಂದು ಆರಂಭದ ದಿನ ಆದ್ದರಿಂದ ಸ್ವತಃ ಸ್ವಾಮೀಜಿಯವರೇ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರಿಗೆ ಒಂದು ನೂರು ಊಟದ ಪೊಟ್ಟಣಗಳನ್ನು ಹಸ್ತಾಂತರಿಸಿದರು. ಇದರ ಜೊತೆಯಲ್ಲಿಯೇ ಒಂದು ನೂರು ಕುಡಿಯುವ ನೀರಿನ ಪ್ಯಾಕೇಟುಗಳನ್ನು ಸಹ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಪಾವಗಡ ಬಸ್ ನಿಲ್ದಾಣದಲ್ಲಿ ಎಂದಿನಂತೆ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ನೀರು, ಆಹಾರ ದೊರೆಯದೆ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಊಟವನ್ನು ವಿತರಿಸಲಾಯಿತು. ಇದರೊಂದಿಗೆ ಶುದ್ಧ ಕುಡಿಯುವ ನೀರಿನ ಪ್ಯಾಕೇಟುಗಳನ್ನು ನೀಡಲಾಯಿತು. ಇಂದು ಸರಿಸುಮಾರು 300 ಜನರಿಗೆ ಊಟವನ್ನು ವಿತರಿಸಲಾಯಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರು ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಈ ವ್ಯವಸ್ಥೆ ಮುಂದುವರೆಯುತ್ತದೆ ಎಂದು ತಿಳಿಸಿದರು.28 4 21 3
ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ರವರ ಸಮಯೋಚಿತ ಸಹಕಾರವನ್ನು ಪೂಜ್ಯ ಸ್ವಾಮೀಜಿಯವರು ಕೊಂಡಾಡಿದರು. ಒಟ್ಟಿನಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಜನರ ಸಂಕಟ ಮತ್ತು ನೋವಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಸಂತೋಷಕರವಾದ ಹಾಗೂ ಶ್ಲಾಘನೀಯವಾದ ಸೇವಾ ಕಾರ್ಯ ಎನ್ನಬಹುದು. ಈ ಕಾರ್ಯಕ್ರಮದಲ್ಲಿ ಹಿಂದೂಪುರ, ಅರಸೀಕೆರೆ, ಅಮರಾಪುರ, ಪಳವಳ್ಳಿ, ತಿರುಮಣಿ, ಮಂಗಳವಾಡ, ಚಳ್ಳಕೆರೆ ಪ್ರದೇಶಗಳಿಂದ ಸಿಲುಕಿ ಹಾಕಿಕೊಂಡಿರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಆಹಾರವನ್ನು ವಿತರಿಸಲಾಯಿತು.
ವಿವೇಕ ಬ್ರಿಗೇಡಿನ ಸದಸ್ಯರುಗಳಾದ ಶ್ರೀ ಭರತ್ ರಾಮಮೂರ್ತಿ, ಶ್ರೀ ವೇಣುಗೋಪಾಲರೆಡ್ಡಿ,  ಶ್ರೀ ರವಿ (ಆಟೋಮೊಬೈಲ್ಸ್), ಶ್ರೀ ನಾಗರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷರು, ಮುಂತಾದವರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.