IMG 20220902 WA0059

ಪಾವಗಡ:ಚಿಣ್ಣರ ವನ ದರ್ಶನ’ ಕಾರ್ಯಕ್ರಮ.         

DISTRICT NEWS ತುಮಕೂರು

ಚಿಣ್ಣರ ವನ ದರ್ಶನ’ ಕಾರ್ಯಕ್ರಮ.         

ಪಾವಗಡ:     ವಿದ್ಯಾರ್ಥಿ ಜೀವನದಿಂದಲೇ ಅರಣ್ಯ, ವನ್ಯಜೀವಿಗಳ ಬಗ್ಗೆ  ಮಕ್ಕಳಲ್ಲಿ ಕಾಳಜಿ ಮೂಡಿಸಬೇಕು , ಅರಣ್ಯದ ಮಹತ್ವವನ್ನು ಮಕ್ಕಳು ತಿಳಿದು ಇತರರಿಗೆ ತಿಳಿಯಪಡಿಸಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಶಾಸಕ ವೆಂಕಟರಮಣಪ್ಪ , ತಾಲ್ಲೂಕಿನ ವೀರ್ಲಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ  ಚಿಣ್ಣರ ವನ ದರ್ಶನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಾತನಾಡಿ  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಉತ್ತಮ ಪರಿಸರ ಉತ್ತಮವಾದ ಆರೋಗ್ಯ ನೀಡುತ್ತದೆ, ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು . ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ  ಪರಿಸರದ ಬಗ್ಗೆ ,ಪ್ರಾಣಿ ಪಕ್ಷಿಗಳ  ಬಗ್ಗೆ ಪ್ರಾಣಿ ಸಂಕುಲದಿಂದ ಪರಿಸರ ಸಮತೋಲನಕ್ಕೆ ಸಹಾಯವಾಗುವ ರೀತಿ, ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲವನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು. 

  ತಾಲ್ಲೂಕಿನ ಪರಿಸರಕ್ಕೆ ಹೊಂದಿಕೊಂಡು ಜೀವಿಸುವ ವನ್ಯ ಜೀವಿಗಳಾದ ಚಿರತೆ, ಕರಡಿ, ಕಾಡು ಹಂದಿ ಇತ್ಯಾದಿ ಪ್ರಾಣಿಗಳ ಮಾಹಿತಿಯನ್ನು ತಿಳಿಸಲಾಗುವುದು ಎಂದರು.

ಬಿಇಒ ಅಶ್ವಥನಾರಾಯಣ, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮುಖ್ಯ ಶಿಕ್ಷಕ ವೆಂಕಟೇಶುಲು, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು,  ಎ ಪಿ ಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ,  ಅಶ್ವಥಗೌಡ, ಗೋಪಾಲಪ್ಪ, ನಾಗರಾಜು, ಬೋರಣ್ಣ, ಗಂಗಾಧರ್ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ