ಸರ್ಕಾರದ ಸೌಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ಶಾಸಕ ವೆಂಕಟರಮಣಪ್ಪ .
ಪಾವಗಡ: ತಾಲೂಕಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ಅನೇಕ ಹಳ್ಳಿಗಳ ರಸ್ತೆಗಳು ಸಂಪೂರ್ಣವಾಗಿ ಜಲಮಯವಾಗಿ ಓಡಾಡುವುದಕ್ಕೆ ತುಂಬಾ ಕಷ್ಟವಾಗಿದೆ ಎಂದು ತಾಲ್ಲೂಕಿನ ನಾಗಲಮಡಿಕೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಢರು.. ನಾಗಲಮಡಿಕೆಯಿಂದ ಗ್ಯಾದಿಗುಂಟೆ, ಪೆಂಡ್ಲಿಜೀವಿ, ಶ್ರೀರಂಗಪುರ, ಶ್ರೀರಂಗಪುರ ತಾಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಗಳು ಕೆಸರುಗದ್ದೆಗಳಾಗಿ ಪರಿಣಮಿಸಿದ್ದು ಓಡಾಡುವುದಕ್ಕೆ ತುಂಬಾ ಅನಾನುಕೂಲವಾಗಿದೆ, ಶೀಘ್ರವೇ ರಸ್ತೆ ಸರಿಪಡಿಸುವ ಕಾರ್ಯ ಮಾಡಬೇಕೆಂದು ಜನರು ಆಗ್ರಹಿಸಿದರು.
ರಸ್ತೆಗಳು ಜಲಮಯವಾಗಿರುವುದರಿಂದ ಕಟಾವು ಮಾಡಿದ ಬೆಳೆಗಳನ್ನು ಸಾಗಣೆ ಮಾಡುವುದು ಕಷ್ಟವಾಗಿದೆ ಎಂದು ಸಮಸ್ಯೆ ಬಗ್ಗೆ ವಿವರಿಸಿದರು.
ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆಂದೇ ಮೀಸಲಿರುವ ಸೋಲಾರ್ ಪಾರ್ಕ್ ನ ಸಿ. ಎಸ್. ಆರ್ ಅನುದಾನದಲ್ಲಿ , ವೆಂಕಟಮ್ಮನಹಳ್ಳಿ, ಕ್ಯಾತಗಾನಚೆರ್ಲು, ಇಂಟೂರಾಯನಹಳ್ಳಿ, ಬಳಸಮುದ್ರ, ಗ್ರಾಮಗಳಿಗೆ .ಸಮುದಾಯ ಭವನ ನಿರ್ಮಿಸಿಕೊಡಬೇಕು ವಳ್ಳೂರು ಗ್ರಾಮಕ್ಕೆ ಗ್ರಂಥಾಲಯ ಕಟ್ಟಡ, ಇಂಟೂರಾಯನಹಳ್ಳಿಗೆ ಅಂನವಾಡಿ ಕಟ್ಟಡದ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸರ್ಕಾರದ ಪ್ರಮುಖ ಯೋಚನೆಗಳಾದ ವೃದ್ದಾಪ್ಯ ವೇತನ, ಪಿಂಚಣಿ, ನಿವೇಶನ, ಮಂಜೂರುಮಾಡಿ ಕೊಡುವಂತೆ ಫಲಾನುಭವಿಗಳು ಅರ್ಜಿ ನೀಡಿದರು.
ನಂತರ ಶಾಸಕ ವೆಂಕಟರವಣಪ್ಪ ಮಾತನಾಡಿ, ಸರ್ಕಾರ ಬಡಜನರಿಗಾಗಿ ನೀಡುವಂತಹ ಸೌಲತ್ತುಗಳನ್ನು ಬಡ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು…
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಗುತ್ತಿದೆ. ಅರ್ಹರಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಗುತ್ತಿದೆ ಇದರಿಂದ ಜನರು ಕಚೇರಿಗಳ ಬಳಿ ಸುತ್ತುವುದು ತಪ್ಪುತ್ತದೆ ಎಂದರು
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜು, ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ,. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಾ ಮೂರ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಂಕರಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ .
ಶಿರಸ್ತೇದಾರ್ ಎನ್.ಮೂರ್ತಿ, ಕಂದಾಯ ನಿರೀಕ್ಷಕ ಸುದರ್ಶನ್, ಬಿಇಒ ಅಶ್ವಥನಾರಾಯಣ, ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಶರತ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಕೃಷ್ಣರಾವ್, ನಾಗಭೂಷಣ್ ರಡ್ಡಿ, ಕೆ ಒ ಎಫ್ ಬಾಲಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷ ನರಸಿಂಹಪ್ಪ ಉಪಸ್ಥಿತರಿದ್ದರು.