ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ.. ಮುಖ್ಯಾಧಿಕಾರಿ ಜಗರೆಡ್ಡಿ ಪ್ರಶಂಸೆ.
ಪಾವಗಡ..ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಅವಿಸ್ಮರಣೀಯ ಎಂದು, ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪುರಸಭೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌರ ಕಾರ್ಮಿಕರು ಸ್ವಚ್ಚ ಹಾಗೂ ಸುಂದರವಾದ ಪಟ್ಟಣದ ನಿರ್ಮಾಣದೊಂದಿಗೆ ಜನತೆಯ ಆರೋಗ್ಯ ಕಾಪಾಡುವ ಜೀವನಾಡಿಗಳಾಗಿದ್ದಾರೆ ಎಂದರು.
ಪಟ್ಟಣದ 23 ವಾರ್ಡ್ ಗಳಲ್ಲಿ ಪ್ರತಿ ದಿನ ಚಳಿ ಗಾಳಿ ಎನ್ನದೆ ದಿನನಿತ್ಯ ತಮಗೆ ನೀಡಲಾದ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು, ಪಟ್ಟಣದ ಸ್ವಚ್ಛತೆ ಮತ್ತು ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪೌರಕಾರ್ಮಿಕರ ಪಾತ್ರ ಶ್ಲಾಘನೀಯ ಎಂದರು.
ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ ಮಾತನಾಡಿ , ಪೌರ ಕಾರ್ಮಿಕರು ಪಟ್ಟಣದಲ್ಲಿ ರೋಗ ರುಜಿನಗಳು ಹರಡದಂತೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪ್ರತಿ ಕುಟುಂಬದ ಮೊದಲ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಉಪಾಧಕ್ಷೆ ಶಶಿಕಳಾ, ಸದಸ್ಯರಾದ ಗೊರ್ತಿ ನಾಗರಾಜು, ಮಹಮ್ಮದ್ ಇಮ್ರಾನ್, ರಾಜೇಶ್ ಮಾತನಾಡಿ ಪೌರ ಕಾರ್ಮಿಕರಿಗೆ ದಿನಾಚರಣೆಯ ಶುಭಾಷಯಗಳನ್ನು ಕೋರಿ ಸಮವಸ್ತ್ರಗಳನ್ನು ವಿತರಿಸಿದರು.
ಇದೇ ವೇಳೆ ಪೌರ ಕಾರ್ಮಿಕರು ಹಾಗೂ ಪುರಸಭೆ ಸದಸ್ಯರಿಗೆ ಏರ್ಪಡಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನಗಳೊಂದಿಗೆ ಸತ್ಕರಿಸಲಾಗಿತು.
ಕಾರ್ಯಕ್ರಮದಲ್ಲಿ ಕಾಯಂ ಪೌರ ಕಾರ್ಮಿಕರಿಗೆ ತಲಾ ಏಳು ಸಾವಿರ ರೂಪಾಯಿ ವಿಶೇಷ ಭತ್ಯೆಯ ಚೆಕ್‍ನ್ನು ಪುರಸಭೆ ಅದ್ಯಕ್ಷೆ ಧನಲಕ್ಷ್ಮಿ ವಿತರಿಸಿದರು. ನೀರುಗಂಟಿ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಗಿತು, ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರಿಗೂ ಬಹುಮಾನಗಳನ್ನು ವಿತರಿಸಲಾಗಿತು.
ಈ ಸಂದರ್ಬದಲ್ಲಿ ಪುರಸಭೆ ಉಪಾಧಕ್ಷೆ ಶಶಿಕಳಾ ಬಾಲಾಜಿ, ಮಾಜಿ ಅದ್ಯಕ್ಷರಾದ ವೇಲುರಾಜು, ರಾಮಾಂಜಿನಪ್ಪ, ಗಂಗಮ್ಮ, ಸುದೇಶ್ ಬಾಬು, ನಾಗಭೂಷಣರೆಡ್ಡಿ, ಸುಜಾತ, ವಿಜಯ ಕುಮಾರ್, ಮುಖಂಡರಾದ ಬಾಲಾಜಿ, ಕಿರಣ್, ಅವಿನಾಶ್, ಆಲಿ, ಆರೋಗ್ಯ ನಿರೀಕ್ಷಕ ಷಂಶುದ್ದೀನ್, ಜಗನ್ನಾಥ್ ಸೇರಿದಂತೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.
ವರದಿ:: ಶ್ರೀನಿವಾಸಲು ಎ