ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ಯಾಗಡದೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮವನ್ನು ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕೆ ಮುನಿರೆಡ್ಡಿ ಉದ್ಘಾಟನೆ ಮಾಡಿದರು ದೊಡ್ಡ ಹಾಗಡೆ ಹರೀಶ್ ತಿಲಕ್ ಗೌಡ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ರತ್ನಮ್ಮ ರಾಜಪ್ಪ ಇದ್ದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಬಿಜೆಪಿ ಹಿರಿಯ ಮುಖಂಡರಾದ ಯಂಗಾರೆಡ್ಡಿ ಕಥೆಗಳಿಗೆ ರಾಷ್ಟ್ರ ಕಟ್ಟುವ ಶಕ್ತಿಯಿದೆ ಇದನ್ನ ಎಲ್ಲ ತಾಯಂದಿರು ಬಳಸಿಕೊಂಡು ಸದೃಢ ರಾಷ್ಟ್ರವನ್ನ ಕಟ್ಟುವಲ್ಲಿ ಯೋಚಿಸಬೇಕಾಗಿದೆ ಎಂದು ಹೇಳಿದರು.
ಇತಿಹಾಸದ ಪುಟಗಳಲ್ಲಿ ಅನೇಕ ಮಹನೀಯರು ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡು ಅಮರರಾಗಿದ್ದಾರೆ ಅಂತವರ ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಆಶಯ ಭಾಷಣವನ್ನು ಆಡಿದ ದೊಡ್ಡ ಹಾಗಡೆ ಹರೀಶ್ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಪ್ರತಿಭಾ ಕಣಜವಾಗಿದೆ ಕ್ರೀಡೆ ನಾಟಕ ಸಂಗೀತ ಸಾಹಿತ್ಯ ಎಲ್ಲವನ್ನು ಕಲಿತ ಮಕ್ಕಳು ಸಮಾಜದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುತ್ತಾರೆ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಸೊಪ್ಪಳ್ಳಿ ವೆಂಕಟಪ್ಪ ಮಾತನಾಡಿ ಮಕ್ಕಳ ಮನಸ್ಸಿನ ಅರ್ಥಮಾಡಿಕೊಳ್ಳುವ ಸಮಾಜವನ್ನು ಸೃಷ್ಟಿ ಮಾಡಿದರೆ ಮಕ್ಕಳು ದೇಶದ ಅಡಿಪಾಯವಾಗಿ ಬೆಳೆಯುತ್ತಾರೆ ಇದಕ್ಕೆ ಮೊದಲ ಪ್ರೇರಣೆಯೇ ತಂದೆ ತಾಯಿ ಹಾಗೂ ಶಿಕ್ಷಕರು ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಆದೂರು ಪ್ರಕಾಶ್ ವಹಿಸಿದ್ದರು
ಸನ್ಮಾನಿತರಾಗಿಯಂಗಾರೆಡ್ಡಿ ಬೈರೇಗೌಡ ವೆಂಕಟಪ್ಪ ಶಾಮರೆಡ್ಡಿ ಎಬಿಸಿ ಯಲ್ಲಪ್ಪ ವೆಂಕಟಸ್ವಾಮಿ ಮಂಜಣ್ಣ ಶಿವಣ್ಣ ಆಗಮಿಸಿದ್ದರು – ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರತ್ನಮ್ಮ ರಾಜಪ್ಪ ಬಿ ಕೆ ಶಾಂತಮ್ಮ ಗೀತಾ ರೇಣುಕಾ ಕವಿತಾ ಚೈತ್ರ ಭಾವನ ತಿಲಕ್ ರತೀಶ್ ಕುಮಾರ್ ಸತೀಶ್ ಎಂ ಚಂದ್ರಶೇಖರ್ ದೊಡ್ಡಹಾಗಡೆ ಕೃಷ್ಣಪ್ಪ ಶಾಲೆಯ ಮುಖ್ಯೋಪಾಧ್ಯಾಯರಾದ ಪರಿಮಳ ಸಿ ಆರ್ ಪಿ ಮುನಿಕೃಷ್ಣಪ್ಪ ಶಿಕ್ಷಕರಾದ ಯಶೋದಮ್ಮ ರೂಪ ನದಿಯಾ ವಿನುತಾ ಅಮರನಾಥ್ ಕ ಸಾ ಪ ಪದಾಧಿಕಾರಿಗಳಾದ ಮಹೇಶ್ ಊಗಿನಹಳ್ಳಿ ಟಿಎಸ್ ಮುನಿರಾಜು ಚುಟುಕುಶಂಕರ್ ಮಿಲ್ಟ್ರಿ ಕುಮಾರ್ ಹಾಜರಿದ್ದರು