ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ನಮ್ಮ ಆಹಾರ ನಮ್ಮ ಅಕ್ಷರ ಮಹಿಳೆಯರೊಂದಿಗೆ ಸಂವಾದ ಎಂಬ ಕಾರ್ಯಕ್ರಮ
ಆನೇಕಲ್: ಪಟ್ಟಣದ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ಶಿಕ್ಷಕಿ ನಳಿನಾಕ್ಷಿ ನೆರವೇರಿಸಿದರು
ಕಾರ್ಯಕ್ರಮಲ್ಲಿ ಮಮತಾ ಯಜಮಾನ್ ಪಾಪಮ್ಮ ಟಿ ನಾಗರಾಜು ಸ್ವದೇಶಿ ನಾಗಭೂಷಣ್ ಫಾದರ್ ಮೇಲ್ವಿನ್ ಕೆವಿನ್ ಸೀಕ್ವೆರಾ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಹಾಜರಿದ್ದರು
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವದೇಶಿ ನಾಗಭೂಷನ್ ಹಸಿರು ಕ್ರಾಂತಿಯ ನೆಪದಲ್ಲಿ ಮಣ್ಣಿನ ಸತ್ವವನ್ನು ಹಾಳು ಮಾಡಿದ್ದೇವೆ ಮಿತ ಮೀರಿದ ಬಯಕೆಗಳು ಮನುಷ್ಯನನ್ನು ರೋಗ ಗ್ರಸ್ತರನ್ನಾಗಿ ಮಾಡುತ್ತಿದೆ ಎಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ಆದೂರು ಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಿದ್ದರು
ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಉನ್ನತ ಅಧಿಕಾರಿಯಾಗುವುದಕ್ಕಿಂತ ರೈತನಾಗುವುದು ಬಹಳ ಶ್ರೇಷ್ಠವಾದ ಕೆಲಸ ಅನ್ನ ನೀಡುವ ಕೈಗಳು ದೇವರ ಪೂಜೆಗೆ ಸಮಾನ ಎಂದು ಸಂಬೋಧಿಸಿದರು
ಯೋಗ ಶಿಕ್ಷಕಿ ನಳಿನಾಕ್ಷಿ ಮಾತನಾಡಿ ಮನುಷ್ಯ ತನ್ನ ದೇಹವನ್ನು ಆಸ್ಪತ್ರೆಗಳಿಗೆ ಗುತ್ತಿಗೆ ಕೊಟ್ಟಂತೆ ಭಾಸವಾಗುತ್ತಿದೆ ಪ್ರತಿ ದಿನ ಒಂದಲ್ಲ ಒಂದು ಕಾಯಿಲೆಗಳಿಂದ ಬಳಲುತ್ತಾ ಬೆಂಡಾಗಿ ಹೋಗಿದ್ದಾನೆ ಇದನ್ನೆಲ್ಲಾ ಸರಿಪಡಿಸಿಕೊಳ್ಳಬೇಕಾದರೆ ನಮ್ಮ ಮೂಲ ಆಹಾರ ಪದ್ಧತಿಗೆ ಮರಳ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ವಿಜಯ ಕುಮಾರಿ ಮಾತನಾಡಿ ಆಹಾರ ಮನುಷ್ಯನ ಹಕ್ಕು ಆಹಾರದಲ್ಲಿ ತಾರತಮ್ಯವನ್ನು ಮಾಡುವುದು ಸರಿಯಲ್ಲ ಅವರವರ ಆಹಾರವನ್ನು ಅವರೇ ಆಯ್ಕೆ ಮಾಡಿಕೊಂಡು ಸ್ವಚ್ಛಂದವಾಗಿ ಭೂಮಿಯಲ್ಲಿ ಬದುಕಿ ಬಾಳಿದಾಗ ಅದುವೇ ಸ್ವರ್ಗವಾಗುತ್ತದೆ ಎಂದು ಹೇಳಿದರು
ಜ್ಞಾನ ಜ್ಯೋತಿಯ ಫಾದರ್ ಮೇಲ್ವಿನ್ ಕೆವಿನ್ ಸಿಕ್ವೇರಾ ಮಾತನಾಡಿ ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಮತೋಲನವಾಗಿರಬೇಕು ನಾವು ಬರೀ ದೈಹಿಕ ಆರೋಗ್ಯವನ್ನು ಮಾತ್ರ ಜಾಗೃತಿ ವಹಿಸುತ್ತಿದ್ದೇವೆ . ಆದರೆ ಮನುಷ್ಯನಿಗೆ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯವಾಗಿರುತ್ತದೆ ಪ್ರತಿ ಮನೆಯಲ್ಲಿ ಹೆಣ್ಣು ಶಿಕ್ಷಿತಳಾಗಿರಬೇಕು ಆಗ ಸಮಾಜ ಬಹುಬೇಗ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು
ಮಮತಾ ಯಜಮಾನ್ ಗಾಯತ್ರಿ ಜನಾರ್ಧನ್ ಟಿ ನಾಗರಾಜ್ ಪುರಸಭೆ ಮಾಜಿ ಸದಸ್ಯರಾದ ರತ್ನ ಡೋಲ್ ವಿದ್ವಾನ್ ಮಂಜುನಾಥ್ ಜ್ಞಾನಜ್ಯೋತಿಯ ವಿಜಯ್ ಸುಶೀಲ ಯಲ್ಲಪ್ಪ ಸೇನೆ ಕುಮಾರ್ ಕನಮನಹಳ್ಳಿ ಲಕ್ಷ್ಮಿ ಯಶೋಧ ಉಷಾಬಾಯಿ ಜೀಜಾಬಾಯಿ ಪುಷ್ಪಬಾಯಿ ಕನಕ ಪುಷ್ಪ ಆಶಾ ರಾಣಿ ಗಮನ ಸಂಸ್ಥೆಯ ವರ್ಷ ಮದನ್ ಪ್ರಶಾಂತ್ ಮನು ಮಾದೇವಿ ಭರತ್ ಲತಾ ರಕ್ಷಣಾ ವೇದಿಕೆಯ ಮಂಜು ಅರೇಹಳ್ಳಿ ಚೌಡಪ್ಪ ವಾಟಾಳ್ ಬಳಗದ ಸನಾವುಲ್ಲ ಆರ್ ಮಹದೇವಯ್ಯ ಭಾನುಪ್ರಕಾಶ್ ಇಲಿಯಾಸ್ ಖಾನ್ ಗಾಯಕರಾದ ರಾಮಚಂದ್ರ ಗಾರೆ ಶಿವಪ್ಪ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಎಂ ಗೋವಿಂದರಾಜು ಮಹೇಶ್ ಊಗಿನಹಳ್ಳಿ ಅಪ್ಸರ ಆಲಿಖಾನ್ ಲೋಕೇಶ್ ಗೌಡ ಹಾಲ್ದೇನಹಳ್ಳಿ ಶ್ರೀನಿವಾಸ್ ಚುಟುಕುಶಂಕರ್ ಡಾ. ನಾಗರಾಜ್ ಕುಮಾರ್ ಇದ್ದರು.
ವರದಿ: ಹರೀಶ್