IMG 20220730 WA0047

ಪಾವಗಡ:ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ….! 

DISTRICT NEWS ತುಮಕೂರು

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ….       

ಪಾವಗಡ.. y.n ಹೊಸಕೋಟೆಯಲ್ಲಿ 2022-23ನೇ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಗಳು ನಡೆಯುತ್ತಿದ್ದು, ಇಂದು ನಡೆದ ಕ್ರೀಡಾಕೂಟದಲ್ಲಿ  

ಮರಿದಾಸನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಬಾಲಕರ ವಿಭಾಗದಲ್ಲಿ 

ಬಾಲಕರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 

100ಮೀ ಓಟದಲ್ಲಿ ಪ್ರಥಮ ಸ್ಥಾನ  ಮತ್ತು ತೃತೀಯ ಸ್ಥಾನ,

200ಮೀ ದ್ವಿತೀಯ ಸ್ಥಾನ, 400ಮೀ ತೃತೀಯ ಮತ್ತು 4*100ಮೀ ರಿಲೇ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆಂದು,       

ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಪ್ರಥಮ ಸ್ಥಾನ, 

100ಮೀ ದ್ವಿತೀಯ ,

 200ಮೀ ಪ್ರಥಮ ಮತ್ತು 4*100ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ ಮಾತನಾಡಿದರು.   ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಿದಾನಂದ ಸ್ವಾಮಿ , ಪ್ರೌಢಶಾಲೆಯ ಪ್ರಭಾರಿ ಶಿಕ್ಷಕರಾದ ರಾಜಗೋಪಾಲ್ ರವರು ದೈಹಿಕ ಶಿಕ್ಷಕರಾದ ರಂಗನಾಥ್ ರವರು ಗಂಗಸಾಗರ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಹನುಮಂತ ರಾಯ ವೈಎನ್ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಸುಬ್ಬರಾಯಪ್ಪ ಪ್ರಿಯದರ್ಶಿನಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಹನುಮಂತರಾಜು ಹಾಗೂ ಇತರರು ಹಾಜರಿದ್ದರು

ವಿಜೇತರಾದ ಕ್ರೀಡಾಪಟುಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಅಧ್ಯಕ್ಷರು,ಸದಸ್ಯರುಗಳು , ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಹಾಗೂ PDO ರವರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವರದಿ: ಶ್ರೀನಿವಾಸಲು ಎ