ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆನೇಕಲ್ ಪಟ್ಟಣದ ಜೈ ಭೀಮ್ ನಗರದ ಚುಟುಕು ಶಂಕರ್ ರವರ ಮನೆಯಲ್ಲಿ ಮನ ಮನೆ ಸಾಹಿತ್ಯ ಕಾರ್ಯಕ್ರಮ ಹಾಗೂ ಟಿಪಿ ಕೈಲಾಸ ಜಯಂತಿ ಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಡಾ|| ವೈಲಾಯ್ ಗಡಿನಾಡಿನ ಹಳ್ಳಿಗಳಲ್ಲಿ ಕನ್ನಡದ ಬೇರುಗಳು ಬಲಗೊಳ್ಳಬೇಕು ವ್ಯಾಕರಣವಿಲ್ಲದ ಭಾಷೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಇಂಗ್ಲೀಷ್ ಭಾಷೆ ಎಂದು ತಿಳಿಸಿದರು.
ಪ್ರಪಂಚದಲ್ಲಿ ಎಲ್ಲೂ ಇಲ್ಲದ ವಚನ ಸಾಹಿತ್ಯವನ್ನು ನಮ್ಮ ಕನ್ನಡ ಭಾಷೆ ಕೊಟ್ಟ ಕೊಡುಗೆಯಾಗಿದೆ ಯಾವುದೇ ಜಾತಿ ಲಿಂಗ ಬೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಸಮಾನತೆಯನ್ನು ನೂರಾರು ವರ್ಷಗಳ ಹಿಂದೆ ಸಾರಿದ ಹೆಗ್ಗಳಿಕೆ ಶರಣರಿಗೆ ಸೇರುತ್ತದೆ ಎಂದು ತಿಳಿಸಿದರು.
ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಡಿ ವೆಂಕಟೇಶ್ ಮಾತನಾಡಿ ಹಳ್ಳಿಗಾಡಿನ ಜನ ಇಂಗ್ಲಿಷ್ ವ್ಯಮೋಹ ತಲೆಗೆ ಏರಿಸಿಕೊಂಡಿದ್ದಾರೆ ಇದರಿಂದ ಏನು ಪ್ರಯೋಜನವಿಲ್ಲ ನಮ್ಮ ಬದುಕುಗಳು ಕಟ್ಟಿಕೊಳ್ಳಬೇಕಾದರೆ ತಾಯಿ ಭಾಷೆಯಿಂದ ನಮ್ಮ ವಿದ್ಯಾಭ್ಯಾಸ ಪ್ರಾರಂಭವಾಗಬೇಕು ದಲಿತರು ಸಾಹಿತ್ಯದ ಕಡೆ ಹೆಚ್ಚು ಒಲವನ್ನು ಹೊಂದಿದಾಗ ಅವರ ಬೌದ್ಧಿಕ ಮಟ್ಟವು ಹೆಚ್ಚಾಗುತ್ತದೆ ಎಂದು ಹೇಳಿದರು.
ಸಿಪಿಎಂ ತಾಲೂಕು ಅಧ್ಯಕ್ಷರಾದ ಮಾದೇಶ್ ಮಾತನಾಡಿ ಅನ್ಯಾಯದ ವಿರುದ್ಧ ಸಾಹಿತ್ಯದ ಮೂಲಕವು ಪ್ರತಿಭಟಿಸಬಹುದು ಶ್ರಮದ ವರ್ಗ ಕನ್ನಡ ಭಾಷೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಭಾಷೆಯ ಬುನಾದಿಯಾಗಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ|| ಮುನಂಜಪ್ಪ ಪುರಸಭೆ ಸದಸ್ಯರಾದ ಮಾಂತೇಶ್ ಗಮನ ಸಂಸ್ಥೆ ಮಮತಾ ಯಜಮಾನ್ ವಿಜಯ ಕುಮಾರಿ ನಂದಕುಮಾರ್ ನವೀನ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್
ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಬಿ ಪಿ ಮರಿಯಪ್ಪ ಚಂದ್ರಪ್ಪ ಮಹದೇವಪ್ಪ ಶೆಟ್ಟಿ ಪಾರ್ವತಮ್ಮ ವಾಟಾಳ್ ಬಳಗದ ಸನಾವುಲ್ಲ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಅರೇಹಳ್ಳಿ ಮಂಜು ತಬಲ ಮಂಜು ಡಿಎಸ್ಎಸ್ ನಾರಾಯಣಸ್ವಾಮಿ ಮುರಳಿ ಇಲಿಯಾಸ್ ಖಾನ್ ಶಿಕ್ಷಕರಾದ ಕೆ ಚಂದ್ರಪ್ಪ ಅತಾವುಲ್ಲ ಕಾಲೋನಿ ಮಾದೇಶ್ ಮೀಸೆ ಸುರೇಶ್ ಕೆಎಸ್ಆರ್ಟಿಸಿ ಮಾದಪ್ಪ ಎಚ್ ಮಂಜುನಾಥ್ ಮುನಿ ವೆಂಕಟಮ್ಮ ಸೋಬಾನೆ ಪದಗಳ ಉಮಾ ವೆಂಕಟಲಕ್ಷ್ಮಮ್ಮ ಚಿಕ್ಕ ಮುತ್ತಮ್ಮ ಭಾಗ್ಯಮ್ಮ ಗೌರಮ್ಮ ಸುಬ್ರಮಣಿ ಕಸಾಪ ಪದಾಧಿಕಾರಿಗಳು ಚುಟುಕು ಶಂಕರ್ ಎಂ ಗೋವಿಂದರಾಜು ಅಪ್ಸರ್ ಆಲಿ ಖಾನ್ ಡಾ ನಾಗರಾಜ್ ಟಿಎಸ್ ಮುನಿರಾಜು ಕಲಾವಿದರಾದ ಚಂಪಕಧಾಮರಾಜು ರಾಮಚಂದ್ರ ಹಾಜರಿದ್ದರು.
ವರದಿ: ಹರೀಶ್