ಜಾಲೋಡು ಹೊನ್ನೂರಪ್ಪ ಕಾಂಗ್ರೆಸ್‍ಗೆ ಸೇರ್ಪಡೆ
ವೈ.ಎನ್.ಹೊಸಕೋಟೆ : ಜೆಡಿಎಸ್ ಪಕ್ಷದಲ್ಲಿ ಎಸ್ಸಿ ಜನಾಂಗದ ಎಡಗೈ ಸಮುದಾಯಕ್ಕೆ ತಕ್ಕಷ್ಟು ಆಧ್ಯತೆ ದೊರೆಯುತ್ತಿಲ್ಲವಾಗಿ ಪಕ್ಷವನ್ನು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇನೆ ಎಂದು ಮುಖಂಡರಾದ ಜಾಲೋಡು ಹೊನ್ನೂರಪ್ಪ ತಿಳಿಸಿದರು.
ಶಾಸಕ ವೆಂಕಟರಮಣಪ್ಪ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಅವರು, ತಾಲ್ಲೂಕಿನಾಧ್ಯಂತ ಬಹುಸಂಖ್ಯೆಯಲ್ಲಿ ಎಡಗೈ ಸಮುದಾಯದವರು ಇದ್ದಾರೆ. ಆದರೆ ಜೆಡಿಎಸ್ ಪಕ್ಷ ಅವರನ್ನು ಕೇವಲ ಮತಬ್ಯಾಂಕನ್ನಾಗಿ ಮಾಡಿಕೊಂಡಿದೆ. ಎಡಗೈ ಸಮುದಾಯಕ್ಕೆ ಸಿಗಬೇಕಾದ ಬಹುಪಾಲು ಸೌಲಭ್ಯಗಳನ್ನು ಅವರಿಗೆ ಸಿಗದಂತೆ ವಂಚಿಸುತ್ತಿದ್ದಾರೆ. ಮಾತಿನಲ್ಲಿ ನಾವೆಲ್ಲ ಒಂದೇ ಎಂದು ಹೇಳುವ ಆ ಪಕ್ಷದ ನಾಯಕರು ಎಡಗೈ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತದೆ. ಕೆಲವೇ ಕೆಲವರ ಹಿಡಿತದಲ್ಲಿ ಇರಬೇಕಾದ ದುಸ್ತಿತಿ ಅಲ್ಲಿದೆ. ಹಾಗಾಗಿ ಪಕ್ಷ ತೊರೆಯುವುದು ಅನಿವಾರ್ಯವಾಗಿದೆ. ನನ್ನಂತೆ ನಮ್ಮ ಸಮುದಾಯದ ಅನೇಕ ಮತದಾರರು ಮತ್ತು ಮುಖಂಡರು ಜೆಡಿಎಸ್ ನ್ನು ತೊರೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಎಡಗೈ ಸಮುದಾಯವರ ಮತಗಳು ಕಾಂಗ್ರೆಸ್ಸನ್ನು ಗೆಲ್ಲಿಸುವಲ್ಲಿ ಪ್ರಮುಖವಾಗುತ್ತವೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಎಡಗೈ ಸಮುದಾಯಕ್ಕೆ ತಮ್ಮ ಎಲ್ಲಾ ಸೌಲಭ್ಯಗಳು ಲಬಿಸಲಿವೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ದಲಿತ ಮುಖಂಡರು ಅದರಲ್ಲೂ ಎಡಗೈ ಸಮುದಾಯದವರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಹಲವು ಸೌಲಭ್ಯಗಳಿಂದ ವಂಚಿತರಾಗಿರುವುದು ಕಂಡುಬಂದಿದೆ. ಜಾಲೋಡು ಹೊನ್ನೂರಪ್ಪ ಈ ಹಿಂದೆ ತನ್ನ ಸ್ವಂತ ಖರ್ಚಿನಲ್ಲಿ ಜೆಡಿಎಸ್ ಪಕ್ಷದ ಪ್ರಗತಿ ಶ್ರಮಿಸಿದ್ದಾರೆ. ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಪಕ್ಷದ ಪರವಾಗಿ ಜನಸೇವೆ ಮಾಡಿದ್ದಾರೆ. ಪೋತಗಾನಹಳ್ಳಿ ತಿಪ್ಪಯ್ಯನದುರ್ಗ, ಬಿ.ಹೊಸಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ತಮ್ಮ ಸಮುದಾಯವರ ಪ್ರಗತಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಗತ್ಯವಿದ್ದವರಿಗೆ ಆರ್ಥಿಕ ಸಹಕಾರವನ್ನೂ ನೀಡಿದ್ದಾರೆ. ಆದಗ್ಯೂ ಕೆಲವೊಂದು ಜೆಡಿಎಸ್ ಮುಖಂಡರು ಅವರನ್ನು ಬೆಳೆಯಲು ಬಿಡದೆ ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದಾರೆ. ಹಾಗಾಗಿ ನಿಷ್ಟಾವಂತ ಕಾರ್ಯಕರ್ತರಾದ ಹೊನ್ನೂರಪ್ಪ ರಂತಹ ಮುಖಂಡರಿಗೆ ನಮ್ಮ ಪಕ್ಷ ಸ್ವಾಗತವನ್ನು ಕೋರುತ್ತದೆ ಮತ್ತು ಅವರ ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಈರಾರೆಡ್ಡಿ, ಕಿಶೋರ್, ನಾಗಣ್ಣ, ಮಾರುತಿ, ಈರಣ್ಣ, ಮುನಿಸ್ವಾಮಿ, ನಾಗರಾಜಪ್ಪ, ಈಶ್ವರಪ್ಪ, ಜಾಲಪ್ಪ, ಹನುಮಂತರಾಯ, ಬಲರಾಮ, ಅಂಜಿನಪ್ಪ, ಅಂಗಡಿನಾಗಣ್ಣ ಮುಂತಾದವರು ಇದ್ದರು.
ವರದಿ: ರಾಮಚಂದ್ರ