IMG 20220311 WA0056

ಪಾವಗಡ:10ನೇ ತರಗತಿ ಮಕ್ಕಳಿಗಾಗಿ ಕಾರ್ಯಗಾರ…!

DISTRICT NEWS ತುಮಕೂರು


ಎಸ್. ಎಸ್. ಎಲ್. ಸಿ  ಫಲಿತಾಂಶದಲ್ಲಿ ರಾಜ್ಯಕ್ಕೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಮೊದಲನೇ ಸ್ಥಾನದಲ್ಲಿರಬೇಕು. ಬಿ.ಇ.ಓ. ಅಶ್ವತನಾರಾಯಣ.     

ಪಾವಗಡ: – ಇಂದು ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಪಾವಗಡ ಹೆಲ್ಪ್ ಸೊಸೈಟಿ ಹಾಗೂ ಮಧುಗಿರಿ ಪ್ರೇರಣಾ ಫೌಂಡೇಶನ್ ವತಿಯಿಂದ 10ನೇ ತರಗತಿ ಮಕ್ಕಳಿಗಾಗಿ ಕಾರ್ಯಗಾರ ಏರ್ಪಡಿಸಲಾಗಿತ್ತು.        ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಮಾತನಾಡುತ್ತಾ,  ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು, ಗೃಹ ವೇಳಾಪಟ್ಟಿಯನ್ನು ರಚಿಸಿಕೊಂಡು ಅದರಂತೆ ಅಧ್ಯಯನ ಮಾಡಬೇಕು , ನಮಗೆ ಪ್ರೇರಣಾ ಫೌಂಡೇಶನ್ ಮತ್ತು ಹೆಲ್ಪ್ ಸೊಸೈಟಿ, ಪ್ರತಿ ವರ್ಷವೂ ಸಹ ಸಹಕಾರ ನೀಡುತ್ತಿದ್ದು, 2019 -20 ನೇ ಸಾಲಿನಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ. ಈ ವರ್ಷವೂ ಸಹ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದಿ ಒಳ್ಳೆಯ ಫಲಿತಾಂಶವನ್ನು ತಾಲೂಕಿಗೆ ತರಬೇಕೆಂದು ತಿಳಿಸಿದರು. ಈ ವರ್ಷ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ,ನಮ್ಮ ಶೈಕ್ಷಣಿಕ ಜಿಲ್ಲೆಯನ್ನು ರಾಜ್ಯದಲ್ಲಿ ಒಂದನೇ ಅಥವಾ ಎರಡನೇ ಸ್ಥಾನಕ್ಕೆ ತರಬೇಕೆಂಬುದು ತಮ್ಮ ಆಶಯ ಎಂದರು.                                                             

ಇದಕ್ಕೆ ಪೂರಕವಾಗಿ ತಾಲೂಕಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ತಿಳಿಸಿದರು.                                        ನಂತರ ಕಟ್ಟಾ ನರಸಿಂಹಮೂರ್ತಿ ಮಾತನಾಡುತ್ತಾ, 10ನೇ ತರಗತಿಯ ವಿದ್ಯಾರ್ಥಿಗಳ ಜೀವನಕ್ಕೆ ಅಡಿಪಾಯವಿದ್ದಂತೆ, ತಾಲೂಕಿನ ಎಲ್ಲಾಮಕ್ಕಳು ಶ್ರಮವಹಿಸಿ ತಾಲೂಕಿಗೆ ಉತ್ತಮ ಫಲಿತಾಂಶವನ್ನು ತಂದುಕೊಡಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಕ್ಲಿಷ್ಟವಾದ ಮತ್ತು ಅನ್ವಯಿಕ ಪ್ರಶ್ನೆಗಳ ಬಗ್ಗೆ ಹೆಚ್ಚಿನ ಗಮನವಹಿಸಿ, ಶಿಕ್ಷಕರ ಸಹಕಾರವನ್ನು ಪಡೆದು, ಉತ್ತಮ ಅಂಕ ಗಳಿಸಲು ಪ್ರಯತ್ನಿಸಬೇಕೆಂದರು,. ನಂತರ ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಮಾತನಾಡುತ್ತಾ, ಗಡಿ ಜಿಲ್ಲೆಯಾದ ಪಾವಗಡ ಶೈಕ್ಷಣಿಕವಾಗಿ ಅಭಿವೃದ್ಧಿ ಯಾಗಬೇಕು,  ವಿದ್ಯಾರ್ಥಿಗಳು  10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ತಂದೆ-ತಾಯಿಗಳಿಗೆ, ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತರಬೇಕು ಎಂದರು.                                               

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಶ್ವಥನಾರಾಯಣ, ಇಸಿಓ ಶಿವಮೂರ್ತಿ ನಾಯಕ್, ಸಿಆರ್ಪಿ ಶ್ರೀನಿವಾಸ್, ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ರಮೇಶ್, ತಾಲೂಕು  ಪ್ರೇರಣಾ  ಫೌಂಡೇಶನ್ ಅಧ್ಯಕ್ಷರಾದ, ರಾಮಕೃಷ್ಣ ನಾಯಕ್, ಪಾವಗಡ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್, ಕಟ್ಟಾ ನರಸಿಂಹಮೂರ್ತಿ, ವಿ.ಎಸ್ ರಾಮಾಂಜಿನಪ್ಪ,  ಸತ್ಯ ಲೋಕೇಶ್, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು,ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಶ್ರೀನಿವಾಸುಲು ಎ