DSC 1835 scaled

ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ಕ್ಕೆ ಚಾಲನೆ…!

Genaral STATE

ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ
ಜನರ ಅಲೆದಾಟ ತಪ್ಪಿಸಲು ಸರ್ಕಾರವೇ ಜನರ ಬಾಗಿಲಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಚಿಕ್ಕಬಳ್ಳಾಪುರ, ಮಾರ್ಚ್ 12: ಜನರ ಅಲೆದಾಟ ತಪ್ಪಿಸಲು ವಿನೂತನ ಕಾರ್ಯಕ್ರಮವನ್ನು ರೂಪಿಸಿ, ಸರ್ಕಾರವನ್ನೇ ಮನೆಬಾಗಿಲಿಗೆ ತಲುಪಿಸಲಾಗಿದೆ ಎಂದು ಮುಖ್ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಇಲಾಖೆಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸಣ್ಣ ದಾಖಲೆಗಳಿಗೂ ಅಲೆದಾಟ, ಜಾತಿ ಪ್ರಮಾಣ ಪತ್ರ, ಆರ್.ಟಿ.ಸಿ ಮುಂತಾದವುಗಳಿಗೆ ಬಡವರೇ ಓಡಾಡುತ್ತಾರೆ. ಬಡವರು ಅಲೆದಾಟ ತಪ್ಪಿಸಲು ಕಂದಾಯ ಸಚಿವ ಆರ್.ಅಶೋಕ್ ಉತ್ತಮ ಯೋಜನೆ ರೂಪಿಸಿದ್ದಾರೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರದ ರೈತರು ಶ್ರಮಜೀವಿಗಳು. ರೇಷ್ಮೆ, ಹಾಲು ಮತ್ತು ಹಣ್ಣುಹಂಪಲುಗಳಿಗೆ ಖ್ಯಾತಿ ಪಡೆದಿರುವ ಜಿಲ್ಲೆ ಇದು. ಮನೆ ಮನೆಗೆ ಕಂದಾಯ ದಾಖಲೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಇಂದು ಜಾರಿಗೊಳಿಸಿದೆ ಎಂದರು.

ತಮ್ಮ ಉದ್ದಾರ ಮಾಡಿಕೊಂಡ ಕಾಂಗ್ರೆಸ್:
ಸರ್ಕಾರ ಜನರ ಪಾಲಿಗೆ ಜೀವಂತವಾಗಿದೆಯೇ ಎನ್ನುವುದು ಜನರಿಗೆ ಸಂಕಷ್ಟ ಬಂದಾಗ ಅವರಿಗೆ ಪರಿಹಾರ, ಮನೆ ಬಾಗಿಲಿಗೆ ಹೋದಾಗ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಬಡತನ, ರೈತರು, ದೀನದಲಿತರು ಹಿಂದುಳಿದ ವರ್ಗದವರು ಇವರುಗಳ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಇಂದು ಕಂದಾಯ ದಾಖಲೆಗಳನ್ನು ಕೊಡುವುದಕ್ಕೆ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ನಡೆದಿದೆ. ಬಡವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡರು. ನಿಮ್ಮನ್ನು ಉದ್ಧಾರ ಮಾಡುತ್ತೇವೆ ಎಂದು ತಮ್ಮ ಉದ್ದಾರವನ್ನು ಮಾಡಿಕೊಂಡಿದ್ದಾರೆ. ಎಲ್ಲಿಯವರೆಗೆ ಇದು ನಡೆಯುತ್ತದೆ? ಜನರು ಜಾಗೃತರಾದಾಗ ಇವೆಲ್ಲವೂ ನಿಲ್ಲುತ್ತದೆ ಎಂದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಬಹಳ ದೊಡ್ಡ ಕೆಲಸವೆಂದರೆ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಜನರನ್ನು ಶಿಕ್ಷಿತರನ್ನಾಗಿಸಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸ್ವತಂತ್ರ ನಂತರದ ಭಾರತದಲ್ಲಿ ಮಾಡಿರುವ ಏಕೈಕ ಪ್ರಧಾನಮಂತ್ರಿಗಳು ಎಂದರು.
ಅಧಿಕಾರಕ್ಕಾಗಿ ರಾಜಕಾರಣ
ಹಿಂದೆಯೂ ಸರ್ಕಾರಗಳಿದ್ದವು. ಗರೀಬಿ ಹಟಾವೋ ಎಂದರು. ಏಕೆ ಮಾಡಲಿಲ್ಲ? ಅಧಿಕಾರಕ್ಕಾಗಿ ರಾಜಕಾರಣ, ಜನಸೇವೆಗಾಗಿ ರಾಜಕಾರಣ. ಇದುವರೆಗೂ ಅವರು ಮಾಡಿರುವುದು ಅಧಿಕಾರಕ್ಕಾಗಿ ರಾಜಕಾರಣ. ಅಧಿಕಾರವೇ ಅವರಿಗೆ ಕೇಂದ್ರಬಿಂದು. ನಾವು ಮನೆಬಾಗಿಲಿಗೆ ಸೌಲಭ್ಯಗಳನ್ನು ಮುಟ್ಟಿಸಿ, ಅವರ ಆಶೀರ್ವಾದದೊಂದಿಗೆ ಮತ್ತೆ ಜನಸೇವೆಗೆ ಮುಂದಾಗಲಿದ್ದೇವೆ.
ಕಂದಾಯ ಇಲಾಖೆಯು 5 ಕೋಟಿ ಜನರಿಗೆ ಇಂದೇ ಮುಟ್ಟಿಸುತ್ತಿದ್ದಾರೆ. ದಾಖಲೆಗಳನ್ನು ಸರಿಯಿದೆಯೇ ಎಂದು ಖಾತ್ರಿ ಮಾಡಿಕೊಂಡು ಮನೆ ಬಾಗಿಲಿಗೆ ತಲುಪಿಸಿದೆ. ಇದನ್ನು ಹಿಂದಿನ ಸರ್ಕಾರ ಏಕೆ ಮಾಡಿಲ್ಲ?ಎಂದು ಪ್ರಶ್ನಿಸಿದರು.

ಜನಸಾಮಾನ್ಯನ ಸರ್ಕಾರ:
ಇದು ಜನಸಾಮಾನ್ಯನ ಸರ್ಕಾರ. ಇನ್ನುಳಿದವು ಅಧಿಕಾರದ ಸರ್ಕಾರ. ಈ ಬಾರಿ ಬಜೆಟ್ ನಲ್ಲಿ ರೈತರ ಯಂತ್ರೋಪಕರಣಕ್ಕಾಗಿ 5 ಎಕರೆಗೆ 1050 ರೂ.ಗಳನ್ನು ಡೀಸಲ್ ಖರ್ಚಿಗಾಗಿ ರೈತ ಶಕ್ತಿ ಯೋಜನೆ ರೂಪಿಸಿದ್ದು, 600 ಕೋಟಿ ರೂ.ಗಳನ್ನು ಮೀಸಲಿರಿಸಿದೆ. 300 ಕೋಟಿ ರೂ.ಗಳನ್ನು ಯಶಸ್ವಿನಿ ಯೋಜನೆಗೆ ಮೀಸಲಿರಿಸಿ ಯೋಜನೆಯನ್ನು ಪುನ: ಜಾರಿ ಮಾಡಲಾಗಿದೆ. 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ. 10 ಲಕ್ಷ ಕ್ಕೂ ಅಧಿಕ ರೈತರಿಗೆ ಒಂದೇ ವರ್ಷದಲ್ಲಿ ಸಾಲ ನೀಡಲಾಗುವುದು. ಈ ಪೈಕಿ 3 ಲಕ್ಷ ಹೊಸ ರೈತರು ಸಾ¯ ಪಡೆದಿದ್ದಾರೆ. ರೈತರ ಬೆಳೆಗಳಿಗೆ ಬ್ರಾಂಡಿಂಗ್ ಹಾಗೂ ರಫ್ತಿಗಾಗಿ ಕೆಪಾಕ್ಸ್ ಸಂಸ್ಥೆಯ ಮೂಲಕ ಜಾರಿಗೊಳಿಸಲು ವಿಶೇಷ ಅನುದಾನವನ್ನು ನೀಡಲಾಗಿದೆ. ಪಂಪ್‍ಸೆಟ್‍ಗಳಿಗೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ತೋಟಗಾರಿಕಾ ಬೆಳಿಗಳಿಗೆ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ರೈತರ ಶ್ರಮಕ್ಕೆ, ಕಾರ್ಮಿಕರ ಬೆವರಿಗೆ ಬೆಲೆ ಸಿಗಬೇಕು ಎನ್ನುವುದೇ ನಮ್ಮ ಸಂಕಲ್ಪ. ಅದಕ್ಕಾಗಿ ನಾನು ಪ್ರಮಾಣವಚನ ತೆಗೆದುಕೊಂಡ 3 ಗಂಟೆಗಳೊಳಗಾಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು. 50 ಲಕ್ಷ ಕುಟುಂಬಗಳಿಗೆ ಮಾಶಾಸನ ಹೆಚ್ಚಿಸಲಾಗಿದೆ. ಬಡವರ ಬಗ್ಗೆ ಕಳಕಳಿಯಿರುವ ಸರ್ಕಾರ ನಮ್ಮದು.
ಕೋವಿಡ್ ಪ್ರವಾಹ ಬಂದಿರುವುದರಿಂದ ನರೇಂದ್ರ ಮೋದಿಯವರು ಒಣಬೇಸಾಯಕ್ಕೆ ಒಂದು ಹೆಕ್ಟೇರಿಗೆ 6300 ರೂ.ಗಳನ್ನು ನೀಡಿದ್ದಾರೆ. ರೈತರಿಗೆ ರೂ. 6300 ನೀಡಿ ಎರಡರಷ್ಟು ಬೆಳೆ ಪರಿಹಾರ ನೀಡಿದ್ದೇವೆ. ನೀರಾವರಿಗೆ 25000 ರೂ.ಗಳನ್ನು, ತೋಟಗಾರಿಕೆಗೆ ರೂ.28000 ನೀಡಲಾಗಿದೆ. ದುಪ್ಪಟ್ಟು ಪರಿಹಾರ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಒಂದೇ ತಿಂಗಳಲ್ಲಿ ಪರಿಹಾರದ ಮೊತ್ತ ರೈತರ ಖಾತೆಗಳಿಗೆ ಮೊತ್ತ ಜಮಾ ಆಗಿದೆ ಎಂದರು.