IMG 20211208 WA0038

BJP: KGF ಬಾಬು ಎಂಬ ಮಹಾನ್ ವಂಚಕ….!

POLATICAL STATE

BJP: KGF ಬಾಬು ಎಂಬ ಮಹಾನ್ ವಂಚಕ

ಬೆಂಗಳೂರು ನಗರ ಜಿಲ್ಲೆಯಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್(ಐ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯೂಸುಫ್ ಷರೀಫ್ ಅಲಿಯಾಸ್ KGF ಬಾಬು ಎಂಬ ಮಹಾನ್ ವಂಚಕನೊಬ್ಬ ಸುಮಾರು 115 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಕಬಳಿಸಿರುವ ಹಗರಣವನ್ನು ದಾಖಲೆಗಳ ಸಹಿತ ಬಯಲಿಗೆಳೆಯಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್ 15 ರಲ್ಲಿರುವ 11.01 ಎಕರೆ ಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ವತ್ತಿನ ಪೈಕಿ ಸುಮಾರು 75 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ 07.20 ಎಕರೆ ವಿಸ್ತೀರ್ಣದ ಸ್ವತ್ತನ್ನು 23/05/2007 ರಂದು ಹರಾಜಿಗೆ ಹಾಕಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದರು.IMG 20211208 WA0016

ಈ ಹರಾಜು ಪ್ರಕ್ರಿಯೆಯಲ್ಲಿ ವಂಚಕ ಯೂಸುಫ್ ಷರೀಫ್ 07.20 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತನ್ನು ಪಡೆದುಕೊಂಡಿದ್ದು, ದಿನಾಂಕ 12/06/2007 ರ ಒಳಗಾಗಿ ಪೂರ್ತಿ ಹಣವನ್ನು ಪಾವತಿಸಿ ಸದರಿ ಸ್ವತ್ತನ್ನು ತಮ್ಮ ಹೆಸರಿಗೆ ಕ್ರಯ ಪತ್ರ ಮಾಡಿಸಿಕೊಳ್ಳಬೇಕಿತ್ತು.

ಆದರೆ, ಸದರಿ ಸ್ವತ್ತನ್ನು ಯೂಸುಫ್ ಷರೀಫ್ ರವರು ಸುಮಾರು 11 ವರ್ಷಗಳ ಕಾಲ ಕಂತು ಕಂತುಗಳಲ್ಲಿ ಅಂದರೆ – 2012, 2015 ಮತ್ತು 2018 ರ ವರ್ಷಗಳಲ್ಲಿ ಒಟ್ಟು 05 ಕಂತುಗಳಲ್ಲಿ ನಿಯಮ ಬಾಹಿರವಾಗಿ ಹಣವನ್ನು ಪಾವತಿಸಿ, 05 ಹಂತಗಳಲ್ಲಿ ಕ್ರಯ ಪತ್ರಗಳನ್ನು ಮಾಡಿಸಿಕೊಂಡಿರುತ್ತಾರೆ ಹಾಗೂ ಸದರಿ ಸ್ವತ್ತಿಗೆ ನಿಗದಿಪಡಿಸಿದ್ದ ಹರಾಜಿನ ಕನಿಷ್ಟ ಬೆಲೆ 7.50 ಕೋಟಿ ರೂ.ಗಳಿಗೆ ಬದಲಾಗಿ ಕೇವಲ 06.20 ಕೋಟಿ ರೂ. ಗಳಿಗೆ ಮಾರಾಟ ಮಾಡುವ ಆದೇಶವನ್ನು ಬೆಂಗಳೂರು ಉತ್ತರ ತಾಲ್ಲೂಕಿನ ಅಂದಿನ ತಹಸೀಲ್ದಾರ್ ಆಗಿದ್ದ ಕೆ. ರಂಗನಾಥಯ್ಯ ರವರು ಹೊರಡಿಸಿರುತ್ತಾರೆ.IMG 20211208 WA0010

ಆದರೆ, KGF ಬಾಬು ರವರು ನಿಗದಿತ ಸಮಯಕ್ಕೆ ನಿಯಮಾನುಸಾರ ಸಂಪೂರ್ಣ ಮೊತ್ತವನ್ನು ಪಾವತಿ ಮಾಡದೇ ಇದ್ದ ಕಾರಣ, ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಬೇಕಿತ್ತು. ಆದರೂ ಸಹ 07.20 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತನ್ನು ವಂಚಕ KGF ಬಾಬು ಅವರಿಗೆ ನೀಡಲಾಗಿದೆ.

ಅದಾದ ನಂತರ ಬಿಬಿಎಂಪಿಗೆ 2014 ರಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆಗೆಂದು ಹಸ್ತಾಂತರವಾಗಿದ್ದ ಇದೇ ಸ್ವತ್ತಿಗೆ ಹೊಂದಿಕೊಂಡಂತಿರುವ ಸುಮಾರು 30 ಕೋಟಿಗೂ ಹೆಚ್ಚು ಮೌಲ್ಯದ 02.21 ಎಕರೆ ಸ್ವತ್ತನ್ನು KGF ಬಾಬು ಅನಧಿಕೃತವಾಗಿ ಕಾಂಪೌಂಡ್ ಹಾಕಿಕೊಂಡಿದ್ದಾನೆ.

ಅದಲ್ಲದೇ, ಇದೇ ಸ್ವತ್ತಿಗೆ ಹೊಂದಿಕೊಂಡಂತಿರುವ ಉಳಿದ 01.01 ಎಕರೆಯಷ್ಟು 10 ಕೋಟಿಗೂ ಹೆಚ್ಚು ಮೌಲ್ಯದ ಸ್ವತ್ತನ್ನೂ ಸಹ ಯಾವುದೇ ಆದೇಶವಿಲ್ಲದೇ ಕಾಂಪೌಂಡ್ ಹಾಕಿಕೊಂಡಿರುವ ವಂಚಕ KGF ಬಾಬು.

ಸುಮಾರು 115 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಕಬಳಿಸಿರುವ ಈ ಬೃಹತ್ ಹಗರಣಕ್ಕೆ ಸಂಬಂಧಪಟ್ಟಂತೆ, ಯೂಸುಫ್ ಷರೀಫ್ ಅಲಿಯಾಸ್ KGF ಬಾಬು ಹಾಗೂ 2007, 2012, 2015 ಮತ್ತು 2018 ರಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ M. A. ಸಾದಿಕ್, M. K. ಅಯ್ಯಪ್ಪ, ಡಾ|| G. C. ಪ್ರಕಾಶ್, ವಿ. ಶಂಕರ್ ಮತ್ತು ಇದೇ ಅವಧಿಯಲ್ಲಿ ತಹಸೀಲ್ದಾರ್ ಗಳಾಗಿ ಕಾರ್ಯ ನಿರ್ವಹಿಸಿ, ಯೂಸುಫ್ ಷರೀಫ್ ಅವರಿಂದ ಕೋಟ್ಯಾಂತರ ರೂಪಾಯಿ ಹಣ ಕಿಕ್ ಬ್ಯಾಕ್ ಪಡೆದು, ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ವಂಚಿಸಿರುವ ತಹಸೀಲ್ದಾರ್ ಗಳಾದ ಕೆ. ರಂಗನಾಥಯ್ಯ, ಬಿ. ವೆಂಕಟೇಶ್, ಬಾಳಪ್ಪ ಹಂದಿಗುಂದ, B. R. ಮಂಜುನಾಥ್ ಇವರುಗಳ ವಿರುದ್ಧ ಹಾಗೂ ಸರ್ಕಾರಿ ಭೂ ಕಬಳಿಕೆಗೆ ನೇರವಾಗಿ ಸಹಕಾರ ನೀಡಿರುವ ಶ್ರೀನಿವಾಸಪುರ ಗ್ರಾಮದ Revenue Inspector ಗಳು ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಮತ್ತು BMTF ನಲ್ಲಿ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಸ್ವತ್ತು ಕಬಳಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಲ್ಲದೇ, ಈ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು, ರಾಜ್ಯದ ಕಂದಾಯ ಸಚಿವರನ್ನು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಆಗ್ರಹಿಸಲಾಗಿದೆ.