ಅಂಬೇಡ್ಕರ್ ಬರೆದ ಸಂವಿಧಾನವೇ, ಈ ದೇಶಕ್ಕೆ ಧರ್ಮ ಗ್ರಂಥ. ಗೋವಿಂದ ಕಾರಜೋಳ.
ಕಾಂಗ್ರೆಸ್ ಪಕ್ಷ ಸುಳ್ಳುಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿವೆ – ತಿಮ್ಮರಾಯಪ್ಪ…
ಪಾವಗಡ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದೆಂದು ಕಾಂಗ್ರೆಸ್ ಪಕ್ಷದವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.
ಈ ದೇಶಕ್ಕಿರುವ ನಿಜವಾದ ಧರ್ಮ ಗ್ರಂಥವೆಂದರೆ ಅದು ಅಂಬೇಡ್ಕರ್ ಬರೆದ ಸಂವಿಧಾನ .
ಈ ಸಂವಿಧಾನದಿಂದಾಗಿ ಇಂದು ಒಬ್ಬ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಮಂತ್ರಿಯಾಗಲು ಅವಕಾಶ ಕಲ್ಪಿಸಲಾಗಿದೆ ಎಂದು.
ಇದಕ್ಕೆ ಕಾರಣವಾದ ಏಕೈಕ ವ್ಯಕ್ತಿ ಡಾ. ಬಿಆರ್ ಅಂಬೇಡ್ಕರ್ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.
ಪಟ್ಟಣ ಎಸ್ ಎಸ್ ಕೆ ರಂಗಮಂದಿರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆ ಮತ್ತು ಚುನಾವಣಾ ಸಿದ್ಧತೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದವರಿಗೆಲ್ಲ ಭಾರತ ರತ್ನ ಪ್ರಶಸ್ತಿ ನೀಡಿ, ಸಂವಿಧಾನ ರಚನೆ ಮಾಡಿದಂತಹ ಡಾಕ್ಟರ್ ಬಿಆರ್ ಅಂಬೇಡ್ಕರ್ ಗೆ ಮಾತ್ರ ಭಾರತರತ್ನ ಪ್ರಶಸ್ತಿ ನೀಡಿದೆ ಅವಮಾನಿಸಿದ್ದರು ಎಂದರು.
ಅಂಬೇಡ್ಕರ್ ಮರಣ ಹೊಂದಿದಾಗ ಮೂರು ಆರು ಅಡಿ ಜಾಗವನ್ನು ನೀಡದೇ ಇರುವಂತಹ ಕಾಂಗ್ರೆಸ್ಸಿಗರು ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ .
ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಾಜಿ ಪ್ರಧಾನಿಯಾದಂತ ಎಚ್ ಡಿ ದೇವೇಗೌಡ ಮತ್ತು ನರೇಂದ್ರ ಮೋದಿಯವರ ನಾಯಕತ್ವದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ದೇಶದಲ್ಲಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು 140ಕೋಟಿ ಜನರು ಹಾತೊರೆಯುತ್ತಿದ್ದಾರೆ ಎಂದರು.
ಯಾವುದೇ ಕಳಂಕಿತವಿಲ್ಲದ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು, ನರೇಂದ್ರ ಮೋದಿ ಅವರ ಕಾರ್ಯ ವೈಖರಿ ಬಗ್ಗೆ ಸ್ವತಃಹ ಎಚ್ ಡಿ ದೇವೇಗೌಡರೇ ಕೊಂಡಾಡಿದ್ದಾರೆ ಎಂದರು.
ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ತನ್ನ ಆದ್ಯ ಕರ್ತವ್ಯ, ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆ, ಮತ್ತು ಶುದ್ಧ ಕುಡಿಯುವ ನೀರು, ನೈಪುಣ್ಯ ತರಬೇತಿ ಕೇಂದ್ರ ಸ್ಥಾಪನೆ, ಚಿತ್ರದುರ್ಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು,
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರವಾಗಿ ನೀರುಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಆದುದರಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಂದಾಗಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯ ಅಭ್ಯರ್ಥಿಯಾದ ತನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮ ಉದ್ದೇಶಿಸಿ ಚಿತ್ರದುರ್ಗ ಕ್ಷೇತ್ರದ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಮಾತನಾಡಿ.
ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರು ಕನಸು ಮತ್ತೊಮ್ಮೆ ಮೋದಿಯನ್ನು ಪ್ರಧಾನಮಂತ್ರಿಯಾಗಿ ಕಾಣುವುದು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಗರೀಬಿ ಹಟಾವೂ ಎಂಬುದು ಕೇವಲ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗುತೆಂದು, ರೈತರಿಗೆ, ದಲಿತರಿಗೆ, ಸಾಮಾನ್ಯ ವರ್ಗದ ಜನರಿಗೆ ಕಾಂಗ್ರೆಸ್ ನ ಕೊಡುಗೆ ಶೂನ್ಯ ಎಂದರು.
ಕಾಂಗ್ರೆಸ್ ನ ಕಾಲಾವಧಿಯಲ್ಲಿ ದೇಶದಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ ಇತ್ತೆಂದು ತಿಳಿಸಿದರು.
ತಾನು ಚಿತ್ರದುರ್ಗ ಕ್ಷೇತ್ರದ ಸಂಸದರಾಗಿದ್ದಾಗ ಚಿತ್ರದುರ್ಗದಲ್ಲಿ ಒಂದು ಮೆಡಿಕಲ್ ಕಾಲೇಜು, ನೀರಾವರಿ ಯೋಜನೆ, ಮತ್ತು ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೆಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಹೋದಲೆಲ್ಲ ಬರಿ ಗ್ಯಾರಂಟಿ ಬಗ್ಗೆ ಮಾತಾಡಿದರೆ ವಿನಃ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹಬುತ್ತೀರಲ್ಲ.ಕಾಂಗ್ರೆಸ್ಸಿನ ಆಡಳಿತ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಡುವುದಿಲ್ಲ ಎಂದಾಗ ಸಂವಿಧಾನಕ್ಕೆ ಧಕ್ಕೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು ದಲಿತರಿಗಾಗಿ ಮೀಸಲಿಟ್ಟ 27 ಸಾವಿರ ಕೋಟಿ ಹಣ ಇಂದು ಬೇರೆಡೇ ವರ್ಗಾವಣೆಯಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದಿಲ್ಲ ಎಸ್ಸಿ, ಎಸ್, ಟಿ ಜನಾಂಗದವರು ಈ ವಿಷಯಗಳಿಗೆಲ್ಲ ಕಿವಿ ಕೊಡಬೇಡಿ.
ಇಂದು ಕಾಂಗ್ರೆಸ್ ಪಕ್ಷ ಸುಳ್ಳುಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.
ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಚುನಾವಣೆಯಲ್ಲಿ ಜೆಡಿಎಸ್ ಚಿನ್ನೆ ಇರುವುದಿಲ್ಲ, ಬಿಜೆಪಿಯ ಕಮಲ ಪಕ್ಷಕ್ಕೆ ತಮ್ಮ ಅಮೂಲ್ಯವಾದ ವೋಟನ್ನು ಹಾಕಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಗೋವಿಂದ ಕಾರಜೋಳ ರವರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಆರ್ ಸಿ ಅಂಜಿನಪ್ಪ ಮಾತನಾಡಿ,
ಕಾಂಗ್ರೆಸಿನವರ ಗ್ಯಾರಂಟಿ ಶೇಕಡ 100ರಷ್ಟು ಸಾಧ್ಯವಾಗಿಲ್ಲ.
ಅದು ಕೇವಲ 50% ಆಗಿದ್ದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ತುಮಕೂರಿನಲ್ಲಿ ಸೋಮಣ್ಣ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ, ಇಬ್ಬರು ಗೆದ್ದರೆ ಮುಂದೆ ಅವರು ಮೋದಿ ಸರ್ಕಾರದಲ್ಲಿ ಮಂತ್ರಿಗಳಾಗುತ್ತಾರೆ ಆಗ ತುಮಕೂರು ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಂ. ಎಲ್. ಸಿ ತಿಪ್ಪೇಸ್ವಾಮಿ, ಚಿತ್ರದುರ್ಗದ ಮಾಜಿ ಶಾಸಕ ತಿಪ್ಪಾರೆಡ್ಡಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇ ಗೌಡ್ರು, ಜಿ.ವೆಂಕಟರಾಮಯ್ಯ, ರವಿಶಂಕರ್ ನಾಯ್ಕ,ಎಸ್.ಸಿ ಮೋರ್ಚ ಜಿಲ್ಲಾಧ್ಯಕ್ಷ ಕಂಬದ ರಂಗಣ್ಣ, ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಡಿ.ರಂಗಣ್ಣ, ಜೆ.ಡಿ.ಎಸ್. ನ ಈರಣ್ಣ, ಬಿ.ಜೆ.ಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅಲಕುಂದ್ ರಾಜ್, ನವೀನ್ ಸೀತರಾಮ್ ನಾಯ್ಕ, ಬ್ಯಾಡನೂರು ಶಿವು, ಜಿಲ್ಲಾ ಉಪಾಧ್ಯಕ್ಷರಾದ ಜಿ.ಟಿ ಗಿರಿಶ್, ಸಾಕೇಲ್ ಶಿವಕುಮಾರ್, ಅರ್.ಸಿ ಅಂಜಿನಪ್ಪ. ತಾ.ಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಮನು ಮಹೇಶ್, ಕಾವಲಗೆರೆ ರಾಮಂಜಿ, ಗಡ್ಡಂ ತಿಮ್ಮರಾಜು, ಶಿವಪ್ರಸಾದ್, ಹುಚ್ಚಯ್ಯ, ಪಾವಗಡ ಶ್ರೀ ರಾಮ್ . ಬಲರಾಮ್ ರೆಡ್ಡಿ, ಬಾಲಮ್ಮನಹಳ್ಳಿ ಸೂರಿ, ಯೂನಿಸ್ ಇನ್ನು ಮುಂತಾದವರು ಹಾಜರಿದ್ದರು.
ವರದಿ. ಶ್ರೀನಿವಾಸಲು. A