IMG 20231006 WA0004

ಮಧುಗಿರಿ: ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರಿಗೆ ಬ್ಯಾಟ್ ಮಿಟನ್ ಕ್ರೀಡೆಗೆ ಪ್ರಶಸ್ತಿ…!

DISTRICT NEWS ತುಮಕೂರು

2023.2024ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಪ್ರೌಢಶಾಲೆಗಳ ಕ್ರೀಡಾಕೂಟ….

ಮಧುಗಿರಿ. 2023.2024ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಪ್ರೌಢಶಾಲೆಗಳ ಕ್ರೀಡಾಕೂಟ ಪಾವಗಡದಲ್ಲಿ ಆಯೋಜಿಸಲಾಗಿತ್ತು. ಒಂದು ಕ್ರೀಡಾಕೂಟದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲೆಗಳ ವಿದ್ಯಾರ್ಥಿನಿ ವಿದ್ಯಾರ್ಥಿಗಳು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಈ ಒಂದು ಕ್ರೀಡಾಕೂಟದಲ್ಲಿ ಮಧುಗಿರಿ ತಾಲೂಕುಐ.ಡಿ .ಹಳ್ಳಿ ಹೋಬಳಿ ದೊಡ್ಡ ಯ ಲ್ಕೂರು ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರು ಬಾಲ್ ಬ್ಯಾಟ್ ಮೀಟ್ನ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ. ವಿಜೇತರಾಗಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರೀಡಾಕೂಟದಲ್ಲಿ ಬಾಲ್ ಬ್ಯಾಟ್ ಮೀಟ್ ನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದರಿಂದ ಇಂದಿರಾಗಾಂಧಿ ವಸತಿ ಶಾಲೆಯ ಡಾಕ್ಟರ್. ಧನಂಜಯ ಶಾಲಾ ಶಿಕ್ಷಕರುಗಳು ಹಾಗೂ ಜಿಲ್ಲಾ ದೈಹಿಕ ಶಿಕ್ಷಕರುಗಳು ಅಭಿನಂದಿಸಿದ್ದಾರೆ.

ಮಧುಗಿರಿ ತಾಲೂಕಿನ ಐ.ಡಿ .ಹಳ್ಳಿ ಹೋಬಳಿ ಬ್ರಹ್ಮ ಸಮುದ್ರ ಗ್ರಾಮದ ಸುವರ್ಣಮುಖಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಖಿಲ್ ದೇವರಾಜ್ ಎಂಬ ವಿದ್ಯಾರ್ಥಿಯು ಮಧುಗಿರಿ ಶೈಕ್ಷಣಿಕ ಜಿಲ್ಲೆ ಪಾವಗಡ ತಾಲೂಕಿನಲ್ಲಿ ನಡೆದ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ 1500 ಮೀಟರ್ ಮತ್ತು ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಎರಡನೇ ಬಾರಿಗೆ ಆಯ್ಕೆ ಆಗಿರುವುದು ತುಂಬ ಸಂತೋಷದ ಸಂಗತಿ.

ಏಕೆಂದರೆ ಒಬ್ಬ ಬಡ ಕುಟುಂಬದ ವಿದ್ಯಾರ್ಥಿ ಓದುವುದರ ಜೊತೆಗೆ ಸದಾ ಕ್ರೀಡೆಯಲ್ಲಿ ತೊಡಗಿಸಿಕೊಂಡು ನಾನು ಕ್ರೀಡೆಯಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ದೃಢ ನಿರ್ಧಾರ ತೆಗೆದುಕೊಂಡು ನಡೆದಂತಹ ಶೈಕ್ಷಣಿಕ ಜಿಲ್ಲಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ಆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೂ ದೈಹಿಕ ಶಿಕ್ಷಕರಿಗೂ ಮತ್ತು ಪೋಷಕರಿಗೂ ಮತ್ತು ಅಖಿಲ್ ದೇವರಾಜ್ ರವರಿಗೂ ಬ್ರಹ್ಮ ಸಮುದ್ರ ಗ್ರಾಮದ ಜನತೆ ಹಾಗೂ ಮದುಗಿರಿ ತಾಲೂಕಿನ ಜನತೆ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ. ಇನ್ನೂ ಕೂಡ ಈ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿಯೂ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ.ರಾಷ್ಟ್ರಮಟ್ಟದಲ್ಲಿಯೂ ನಡುವೆ ಕ್ರೀಡಾಗಳಲ್ಲಿ ಸಹ ಭಾಗವಹಿಸಿ ವಿಜೇತರಾಗಲಿ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಕ ವೃಂದ.ಈ ಸಂದರ್ಭದಲ್ಲಿ ಆಶಿಸುತ್ತೇವೆ ಎಂದರು.

ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.