1 6 21 Ambulance staff scaled

ಪಾವಗಡ: ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ…!

DISTRICT NEWS ತುಮಕೂರು

 ಪಾವಗಡ ತಾಲ್ಲೂಕಿನ ಎಲ್ಲಾ 108 ಹಾಗೂ ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ.

 ಪಾವಗಡ :- ತಾಲ್ಲೂಕಿನ ಎಲ್ಲ 108 ಹಾಗೂ ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಿಬ್ಬಂದಿಯವರು ಹಗಲು ರಾತ್ರಿಯೆನ್ನದೆ ತಮ್ಮ ಜೀವದ ಹಂಗನ್ನು ತೊರೆದು ದುಡಿಯುತ್ತಿರುವ ಪರಿ ನಿಜಕ್ಕೂ ಇವರಿಗೆ ಸಲ್ಲಬೇಕಾದ ಸಹಾಯ ದೊರಕುತ್ತಿಲ್ಲ ಎಂದು ನನ್ನ ಮನಸ್ಸಿನಲ್ಲಿ ಕೊರಗಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ತುರ್ತು ವಾಹನಗಳ ಸಿಬ್ಬಂದಿ ಅತ್ಯಂತ ಸಂತೋಷದಿಂದ ದಿನಸಿ ಕಿಟ್, ಅಕ್ಕಿ, ಸೋಪು, ಅಡುಗೆ ಎಣ್ಣೆ ಇತ್ಯಾದಿಗಳನ್ನು ಪಡೆದು ಸಂತೋಷದಿಂದ ತೆರಳಿದರು.
ಇದೇ ಸಂದರ್ಭದಲ್ಲಿ ಮುಂದುವರಿದ ಭಾಗದಂತೆ ಇಂದೂ ಸಹ ಪಾವಗಡ ತಾಲ್ಲೂಕಿನ ಉಳಿದ ಎಲ್ಲ ಟೈಲರುಗಳಿಗೆ ಅಂದರೆ ಸರಿಸುಮಾರು ಒಟ್ಟು 150 ಜನರಿಗೆ ನೀಡಿದಂತಾಯಿತು. ಒಟ್ಟಿನಲ್ಲಿ ಎಲ್ಲಾ ವರ್ಗದ ಜನರಿಗೆ ಹಾಗೂ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ನಿರಂತರವಾಗಿ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ಮಾದರಿಯಾಗಿದೆ.