ವೈ.ಎನ್.ಹೊಸಕೋಟೆ:ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.
ವೈ.ಎನ್.ಹೊಸಕೋಟೆ :-ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ಮತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಪದ್ಮಕ್ಕ ಓಬಳೇಶ್ ತಿಳಿಸಿದರು.
ಸೋಮವಾರದಂದು ಗ್ರಾಮದ ಕೋವಿಡ್ ಆರೈಕೆ ಕೇಂದ್ರಕ್ಕೆ 5 ಬಿಸಿನೀರಿನ ಥರ್ಮಾಪ್ಲಾಸ್ಕ್, ಹಣ್ಣು ಮತ್ತು ಬ್ರೆಡ್ ವಿತರಿಸಿ ಮಾತನಾಡುತ್ತಾ, ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಕೋವಿಡ್ ಕೇಂದ್ರದ ಅಗತ್ಯತೆಗಳನ್ನು ಸ್ಥಳೀಯ ಸರ್ಕಾರದಿಂದ ಪೂರೈಸಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ, ಪೌರಕಾರ್ಮಿಕರ ಉತ್ತಮ ಸಹಕಾರ ಇದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಜನಪ್ರತಿನಿಧಿಗಳಿಂದ ಹೆಚ್ಚಿನ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ರಾಮಾಂಜಿನೇಯ, ವೈದ್ಯ ಡಾ.ಲಿಂಗರಾಜು, ಮುಖಂಡರಾದ ನಂದೀಶ, ಮಂಜುನಾಥ, ಅನಿಲ್ ಕುಮಾರ್ ಓ.ತಿಪ್ಪೇಸ್ವಾಮಿ, ಇತರರು ಇದ್ದರು.
ವರದಿ; ಸತೀಶ್