IMG 20230902 WA0022

ಪಾವಗಡ: ಶನಿ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ…!

DISTRICT NEWS ತುಮಕೂರು

ಶನಿ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ.

ಪಾವಗಡ : ನವಗ್ರಹಗಳಲ್ಲಿ ಶನಿ ಅತ್ಯಂತ ಪ್ರಬಲನಾಗಿದ್ದು.
ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ರಾಜ್ಯದ ನಾನಾ ಕಡೆಗಳಿಂದ ಭಕ್ತಾದಿಗಳು ಆಗಮಿಸಿದ್ದು . ಬೆಳಗಿನ ಜಾವವೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಕ್ಕಳಿಲ್ಲದವರು, ಮದುವೆ ಯೋಗ ಇಲ್ಲದವರು, ಉದ್ಯೋಗ ಆಕಾಂಕ್ಷಿಗಳು ಶನಿ ದೇವರಿಗೆ ಹರಕೆ ಹೊತ್ತು ಬರುವುದು ವಾಡಿಕೆಯಲ್ಲಿದೆ.IMG 20230902 WA0023

ದೇವಾಲಯದಲ್ಲಿ ಬೆಳಗಿನಿಂದಲೇ ಮೂಲ ದೇವರಿಗೆ ಅಭಿಷೇಕ,ತೈಲಭಿಷೇಕ ಸರ್ವಸೇವೆ, ಕುಂಕುಮಾರ್ಚನೆ ,ನವಗ್ರಹ ಪೂಜೆ, ಶೀತಲಾಂಬ ದೇವಿಗೆ ಅಭಿಷೇಕ ನಡೆಸಲಾಯಿತು.

ಶುಕ್ರವಾರ ಸಂಜೆ, ಶನಿವಾರ ಬೆಳಿಗ್ಗೆ ಮತ್ತು ಸಂಜೆ, ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ
ಎಸ್.ಎಸ್.ಕೆ ಸಂಘದ ವತಿಯಿಂದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚಿದ ಭಕ್ತರ ಸಂಖ್ಯೆ ಹಾಗೂ ವಾಹನಗಳಿಂದಾಗಿ ರಸ್ತೆಗಳೆಲ್ಲವೂ ಕಿಕ್ಕೇರಿಸಿದ್ಧವು..

ವರದಿ. ಶ್ರೀನಿವಾಸಲು.ಎ