IMG 20220901 WA0028

ಪಾವಗಡ:ಅಕ್ರಮ ಜಾನವಾರು ಸಾಗಾಟ; ಇಬ್ಬರ ಬಂಧನ…!

DISTRICT NEWS ತುಮಕೂರು

ಅಕ್ರಮ ಜಾನವಾರು ಸಾಗಾಟ; ಇಬ್ಬರ ಬಂಧನ.   

ಪಾವಗಡ… ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಜರಂಗದಳ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು

 ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ  ಘಟನೆ ಬುಧವಾರ  ಸಂಜೆ ಪಾವಗಡ ಪಟ್ಟಣದಲ್ಲಿ ನಡೆದಿದೆ. 

 ಖಚಿತ ಮಾಹಿತಿಯ ಮೇರೆಗೆ ಬಜರಂಗದಳದ ಕಾರ್ಯಕರ್ತರು ತುಮಕೂರು ರಸ್ತೆಯ ರಿಲಯನ್ಸ್ ಶಾಪ್ ಮುಂದೆ  ಹೋಗುತ್ತಿದ್ದ ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.                         

ಹಿಂದೂಪುರದ ಕಸಾಯಿಕಾನೆಗೆ 5 ಎತ್ತುಗಳನ್ನು ಸಾಗಿಸುತ್ತಿರುವ  ಬಗ್ಗೆ ಮಾಹಿತಿ ತಿಳಿದು, ಪಾವಗಡ ಪೊಲೀಸ್ ಠಾಣೆಗೆ ದೂರ ನೀಡಲಾಗಿದೆ. ಆಂಧ್ರಪ್ರದೇಶದ ಆದಿಗೇನಪಲ್ಲಿಯ ಭೀಮಣ್ಣ (28). ಕನೇಕಲ್ ನ. ಅಫಾನ್ ಫಯಾಜ್ (28),  ಬಂದಿತ ಆರೋಪಿಗಳಾಗಿದ್ದು. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಶ್ರೀನಿವಾಸಲು ಎ