IMG 20221116 WA0000

ಆನೇಕಲ್:ಕನ್ನಡ ಕೊರಳ ಭಾಷೆಯಲ್ಲ ಕರುಳ ಭಾಷೆಯಾಗಿದೆ….!

DISTRICT NEWS ಬೆಂಗಳೂರು

ಕನ್ನಡ ಕೊರಳ ಭಾಷೆಯಲ್ಲ ಕರುಳ ಭಾಷೆಯಾಗಿದೆ ಎಂದು ವಣಕನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶ್ರೀನಿವಾಸ್ ಹೇಳಿದರು. ಅವರು ವಣಕನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಉಪನ್ಯಾಸ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತ ಕನ್ನಡವನ್ನ ಎಲ್ಲಾ ಕಡೆ ಪಸರಿಸಿ ಬಳಸಬೇಕು ಆಗಲೇ ಕನ್ನಡ ಉಳಿಯಲಿಕ್ಕೆ ಸಾಧ್ಯ ಎಂದು ಹೇಳಿದರು
ಉಪನ್ಯಾಸವನ್ನು ನೀಡಿದ ಗುಮ್ಮಳಾಪುರ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯರಾದ ರವಿಚಂದ್ರ ಮಾತನಾಡಿ ಮಾಸ್ತಿಯವರು ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಆಸ್ತಿಯಾಗಿದ್ದರು ಎಲ್ಲಾ ಕಷ್ಟಗಳನ್ನು ಅನುಭವಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯನ್ನ ಸೃಷ್ಟಿಸಿದ್ದರು ಎಂದು ತಿಳಿಸಿದರು.
ಅವರ ಕಥೆಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಮಾಸ್ತಿಯವರು ಅನ್ಯ ಭಾಷೆ ಕಲ್ಲಿತಿದ್ದರು ಕನ್ನಡ ಪ್ರೇಮವನ್ನ ಮೆರೆದ ಶ್ರೀಮಂತ ವ್ಯಕ್ತಿತ್ವವಾಗಿತ್ತು ಎಂದು ತಿಳಿಸಿದರು.
ವೀರಶೈವ ಸಮಾಜದ ಅಧ್ಯಕ್ಷರಾದ ಸನತ್ ಕುಮಾರ್ ಮಾತನಾಡಿ ಬೆಳೆಯುವ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನವನ್ನು ಹೆಚ್ಚಿಸಿದಾಗ ಸಾಹಿತ್ಯದ ವಿಶಾಲತೆ ಅರ್ಥವಾಗುತ್ತದೆ ಎಂದು ಹೇಳಿದರು.
ವನಕನಹಳ್ಳಿ ಕ್ಲಸ್ಟರ್ ಸಿ ಆರ್ ಪಿ ರವಿಕುಮಾರ್ ಮಾತನಾಡಿ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಕುತ್ತು ಬಂದಿದೆ ಕನ್ನಡ ಕಲಿತರೆ ಉದ್ಯೋಗಾವಕಾಶಗಳು ಸಿಗುವುದಿಲ್ಲವೆಂದು ಭಾಷೆಯನ್ನ ತಿರಸ್ಕಾರ ಮಾಡುತ್ತಿದ್ದಾರೆ ಆದ್ದರಿಂದ ಸರ್ಕಾರಗಳು ಕನ್ನಡಿಗರಿಗೆ ಮೀಸಲಾತಿಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದ್ದರು
ಕಾರ್ಯಕ್ರಮದಲ್ಲಿ ವಣಕನಹಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷರಾದ ಸವಿತಾ ಸನತ್ ಕುಮಾರ್, ಕೆನರಾ ಬ್ಯಾಂಕ್ ವಿದ್ಯಾರಾಣಿ, ಜಯಸುಧ, ರಾಜ್ಯಪ್ರಶಸ್ತಿ ಪುರಸ್ಕೃತರಾದ ಸಿ ಆನಂದ್ ಕಮಾರ್ ಪಂಚಾಯಿತಿ ಸದಸ್ಯರಾದ ವೆಂಕಟಲಕ್ಷ್ಮಮ್ಮ ಇಲಿಯಾಜ್ ಖಾನ್ ಶಾಲೆ ಮುಖ್ಯೋಪಾಧ್ಯಾಯರಾದ ಅರುಣ್ ಕುಮಾರಿ ಶಿಕ್ಷಕರಾದ ಆಶಾ, ಅರುಣ್ ಕುಮಾರ್, ಸಾಧಿಕ್ ಕಸಾಪ ಪದಾಧಿಕಾರಿ ಡಾ.ನಾಗರಾಜ್ ಇದ್ದರು.