IMG 20230924 WA0012

ಪಾವಗಡ : ಅಕ್ರಮ ಒತ್ತುವರಿಯಾಗಿರುವ ಸ್ಥಳಗಳನ್ನು ಗುರುತಿಸಿ ತೆರವುಗೊಳಿಸಿ….!

DISTRICT NEWS ತುಮಕೂರು

ಪಟ್ಟಣದಲ್ಲಿ ಒತ್ತುವರಿಯಾಗಿರುವ ಸ್ಥಳಗಳನ್ನು ಗುರುತಿಸಿ ತೆರವುಗೊಳಿಸಿ. ಶಾಸಕ ಹೆಚ್.ವಿ ವೆಂಕಟೇಶ್

ಪಾವಗಡ : ಪಟ್ಟಣದ ಹಲವು ಸ್ಥಳಗಳು ಒತ್ತುವರಿಯಾಗಿದ್ದು ‌ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಎಂದು ಶಾಸಕ ಹೆಚ್ ವಿ ವೆಂಕಟೇಶ್ ಪುರಸಭೆಯ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಪುರಸಭಾ ಕಾರ್ಯದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ತನಗೆ ಕಾಳಜಿ ಇದೆ ಎಂದು ,ಶೀಘ್ರವೇ 17 ಪೌರಕಾರ್ಮಿಕರಿಗೆ ವಸತಿ ನಿರ್ಮಿಸಿ ಕೊಡಲಾಗುವುದೆಂದು ಭರವಸೆ ನೀಡಿದರು.

ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಶ್ಲಾಘನೀಯವೆಂದರು.ಜನರ ಆರೋಗ್ಯಕ್ಕೆ ಆದ್ಯತೆ ನೀಡಿ ಸ್ವಚ್ಛತೆ ಕೆಲಸ ಮಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯ ಸುರಕ್ಷತೆ ಕಡೆಗೂ ಆದ್ಯತೆ ನೀಡಿ ಕೆಲಸ ಮಾಡಿ ಎಂದರು.

ಪಟ್ಟಣವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರ ಜೊತೆ ನಾಗರಿಕರು ಕೈ ಜೋಡಿಸಬೇಕೆಂದರು.

ಪಟ್ಟಣದಲ್ಲಿ ಫುಟ್ಪಾತ್, ಮತ್ತು ಎಲ್ಲಂದ್ರಲೇ ಅಂಗಡಿಗಳು ನಿರ್ಮಾಣವಾಗಿದ್ದು, ಅವುಗಳನ್ನು ತೆರವುಗೊಳಿಸಿ ಪಟ್ಟಣವನ್ನು ಸ್ವಚ್ಛವಾಗಿರಲು ಎಲ್ಲರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆಯ್ದ ಕೆಲ ಪೌರ ಕಾರ್ಮಿಕರಿಗೆ ಚೆಕ್ ವಿತರಿಸಲಾಯಿತು26 ದಿನಗೂಲಿ ಪೌರ ಕಾರ್ಮಿಕರಿಗೆ ಖಾಯಂ ಕೆಲಸದ ಆದೇಶ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ, ವೇಲುರಾಜು, ರಾಮಾಂಜಿನಪ್ಪ, ಪುರಸಭಾ ಸದಸ್ಯರಾದ ರಾಜೇಶ್, ರವಿ, ಇಮ್ರಾನ್, ಗೋರ್ತಿ ನಾಗರಾಜ್, ಪ್ರಮೋದ್, ರಿಜ್ವಾನ್, ಷಾ ಬಾಬು ,ಮಣಿ, ಸಮಾಜ ಸೇವಕ ನಾನಿ, ಪುರಸಭೆಯ ಮುಖ್ಯಾಧಿಕಾರಿ ಶಂಶುದಿನ್,
ಅಧಿಕಾರಿಗಳಾದ ಮಂಜುನಾಥ್, ಜ್ಞಾನೇಶ್ ನಂದೀಶ್, ಗಿರಿಜಮ್ಮ, ಕುಮಾರ್ ,ಅನಿಲ್, ಇತರರು ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ