ಎಂಜಿ ರಸ್ತೆಯಲ್ಲಿರುವ ಬಾರ್ಟನ್ ಸೆಂಟರ್‌ನಲ್ಲಿ ಹೊಸ ಚಿಕಿತ್ಸಾ ಕೇಂದ್ರವನ್ನು ತೆರೆದ ಎಸ್‌ಬಿಎಫ್ ಹೆಲ್ತ್ ಕೇರ್
ಬೆಂಗಳೂರು: ಕ್ರಾಂತಿಕಾರಕ ಎಸ್‌ಪಿಎಂಎಫ್ ಥೆರಪಿಯನ್ನು ಪರಿಚಯಿಸಿರುವ ಎಸ್‌ಬಿಎಫ್ ಹೆಲ್ತ್ ಕೇರ್ ಕಂಪನಿ ತನ್ನ ಹೊಸ ಕ್ಲಿನಿಕ್ ಅನ್ನು ಎಂಜಿ ರೋಡ್‌ನಲ್ಲಿರುವ ಬಾರ್ಟನ್ ಸೆಂಟರ್‌ನಲ್ಲಿ ತೆರೆದಿದೆ. ನಗರದಲ್ಲಿರುವ ಸಂಸ್ಥೆಯ ಮೂರನೇ ಕ್ಲಿನಿಕ್ ಇದಾಗಿದ್ದು, ನಗರದ ವಿವಿಧ ಭಾಗಗಳ ಬೆಂಗಳೂರಿಗರಿಗೆ ಸುಲಭವಾಗಿ ಭೇಟಿ ನೀಡಬಹುದಾದಂತೆ ಕ್ಲಿನಿಕ್ ಆರಂಭಿಸಲಾಗಿದೆ.
1600 ಚದರ ಅಡಿಗಳಲ್ಲಿ ವ್ಯಾಪಿಸಿರುವ ಈ ಹೊಸ ಕೇಂದ್ರವು ಎರಡು ಎಸ್‌ಪಿಎಂಎಫ್ ಮೆಶಿನ್‌ಗಳನ್ನು ಹೊಂದಿದೆ ಮತ್ತು ಈಗಾಗಲೇಅಪಾಯಿಂಟ್‌ಮೆಂಟ್‌ಗಳನ್ನು ಪಡೆಯಬಹುದಾಗಿದೆ.
ಈ ಹೊಸ ಕೇಂದ್ರದ ಬಗ್ಗೆ ಮಾತನಾಡುತ್ತಾ ಲೀನಾ ವಸಿಷ್ಠ, ‘ಎಂಜಿ ರೋಡಿನಲ್ಲಿರುವ ಬಾರ್ಟನ್ ಸೆಂಟರ್‌ನಲ್ಲಿ ನಮ್ಮ ಮೂರನೇ ಚಿಕಿತ್ಸಾ ಕೇಂದ್ರವನ್ನು ಆರಂಭಿಸುತ್ತಿರುವುದು ನಮಗೆ ಖುಷಿ ನೀಡಿದೆ. ನಾವು ರೋಗಿಗಳಿಗೆ ನೋವನ್ನು ಕಳೆಯುವ, ಸರ್ಜರಿ ಇಲ್ಲದೆಯೇ ಹುಷಾರು ಮಾಡುವ ಮತ್ತು ತೊಂದರೆ ಮುಕ್ತವಾಗಿ ಖುಷಿಯಿಂದ ಜೀವನ ನಡೆಸುವ ಭರವಸೆ ಒದಗಿಸುತ್ತೇವೆ. ನಾವು 10 ಸಾವಿರಕ್ಕೂ ಹೆಚ್ಚು ಯಶಸ್ವೀ ಪ್ರಕರಣಗಳನ್ನು ನಿಭಾಯಿಸಿದ್ದೇವೆ. ಆ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಂದಿನ ವರ್ಷ 2024ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯುವುದು ನಮ್ಮ ದೂರದೃಷ್ಟಿ ಆಗಿದೆ’ ಎಂದಿದ್ದಾರೆ.
ಇಂಡಿಯನ್ ಏರ್ ಫೋರ್ಸ್‌ನ ಇನ್ ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಮುಖ್ಯಸ್ಥರಾಗಿದ್ದ ಪ್ರೊಫೆಸರ್, ದಿ. ವಿಂಗ್ ಕಮಾಂಡರ್ (ಡಾ.) ವಿ.ಜಿ. ವಸಿಷ್ಠ ಅವರಿಂದ ಸ್ಥಾಪಿತಗೊಂಡ ಎಸ್‌ಬಿಎಫ್ ಹೆಲ್ತ್ ಕೇರ್ ನಿಧಾನವಾಗಿ ಕ್ಯಾನ್ಸರ್ ಸೇರಿದಂತೆ ಆಸ್ಟಿಯೋಆರ್ಥರೈಟಿಸ್, ಕ್ಷೀಣಗೊಳ್ಳುತ್ತಿರುವ ಬೆನ್ನುಹುರಿ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿಯಾದಂತಹ ಪರ್ಯಾಯ ಚಿಕಿತ್ಸಾ ಕೇಂದ್ರವಾಗಿ ಪರಿಗಣಿಸಲ್ಪಡುತ್ತಿದೆ.
ಕ್ಯಾನ್ಸರ್ ಸಂದರ್ಭದಲ್ಲಿ ಸರ್ಜರಿ ಮತ್ತು ಕೀಮೋಥೆರಪಿ ಮತ್ತು ಅಥವಾ ರೇಡಿಯೇಷನ್ ಒಳಗೊಂಡಂತೆ ಲಭ್ಯವಿರುವ ಸ್ಟಾಂಡರ್ಡ್ ಆಯ್ಕೆಗಳಿಗಿಂತ ಎಸ್‌ಪಿಎಂಎಫ್ ಥೆರಪಿ ಹೊರತಾಗಿದೆ.
ವೈಜ್ಞಾನಿಕ ಸಂಶೋಧನೆಯಿಂದ ಸಿದ್ಧಗೊಂಡಿರುವ ಎಸ್‌ಪಿಎಂಎಫ್ ಥೆರಪಿ (ಸೀಕ್ವೆನ್ಷಿಯಲ್ ಪ್ರೋಗ್ರಾಮ್ ಡ್ ಮ್ಯಾಗ್ನೆಟಿಕ್ ಫೀಲ್ಡ್) ಕ್ಯಾನ್ಸರ್ ಮತ್ತು ಆರ್ಥರೈಟಿಸ್‌ಗೆ ಸುರಕ್ಷಿತ, ನೋವು ರಹಿತ ಮತ್ತು ಆಕ್ರಮಣಶೀಲವಲ್ಲದ ಚಿಕಿತ್ಸೆಯನ್ನು ಒದಗಿಸುತ್ತದೆ. ಜಾಗತಿಕವಾಗಿ ಪೇಟೆಂಟ್ ಪಡೆದಿರುವ, ವೈಜ್ಞಾನಿಕವಾಗಿ ಸಾಬೀತಾಗಿರುವ ಈ ತಂತ್ರಜ್ಞಾನದ ಆವಿಷ್ಕಾರ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಬಹು ಬೇಡಿಕೆಯನ್ನು ಪಡೆದುಕೊಂಡಿದೆ. ಚಿಕಿತ್ಸೆ ನಂತರ ಮೂರು ತಿಂಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡು ಬಂದಿವೆ ಮತ್ತು ಬಹುತೇಕ ರೋಗಿಗಳು ಸಹಜ ಜೀವನ ನಡೆಸಲು ಮತ್ತು ಸುಧಾರಿಸಿದ ಗುಣಮಟ್ಟದ ಜೀವನ ಆನಂದಿಸುವುದು ಸಾಧ್ಯವಾಗಿದೆ.
ಕ್ಯಾನ್ಸರ್ ಜೀವಕೋಶಗಳ ಮೇಲೆ ದಶಕಗಳ ಕಾಲ ತೀವ್ರವಾದ ಸಂಶೋಧನೆ ನಡೆಸಿದ ಬಳಿಕ, ಡಾ. ವಸಿಷ್ಠ ಈ ಜೀವಕೋಶಗಳ ಕುರಿತು ಮತ್ತು ಅವುಗಳ ಕಾರ್ಯನಿರ್ವಹಣೆ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದರು. ಅಧ್ಯಯನಗಳ ಪ್ರಕಾರ ನಿರ್ದಿಷ್ಟ ಫ್ರೀಕ್ವೆನ್ಸಿಯ ಮ್ಯಾಗ್ನೆಟಿಕ್ ಫೀಲ್ಡ್‌ಗಳು ಆಂಟಿ ಟ್ಯೂಮರ್ ಎಫೆಕ್ಟ್ ಅನ್ನು ಉಂಟು ಮಾಡುತ್ತವೆ, ಈ ಸಂದರ್ಭದಲ್ಲಿ ಸಹಜವಾಗಿರುವ ಜೀವಕೋಶಗಳಿಗೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಆ ವಿಚಾರದಲ್ಲಿ ಅವರು ನಂತರ ಅನೇಕ ವೈದ್ಯಕೀಯ ಪ್ರಯೋಗಗಳನ್ನು ನಡೆಸಿದರು. ಅದು ಕ್ಯಾನ್ಸರ್ ರೋಗಿಗಳ ಮೇಲೆ ಗಮನಾರ್ಹವಾದ ಫಲಿತಾಂಶವನ್ನು ಬೀರಿತು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಲು ನೆರವಾಯಿತು.
ಸೌಂಡ್ ಸೈಂಟಿಫಿಕ್ ಸಿದ್ಧಾಂತದ ಆಧಾರದಲ್ಲಿ ಈ ಥೆರಪಿ ನಾನ್ ಅಯೋನೈಸ್ ಮಾಡಿದ ರೇಡಿಯೇಷನ್ ಬಳಕೆಯಿಂದ ಉಂಟಾಗುವ ಕಾರ್ಟಿಲೇಜ್ ಡೀಜನರೇಷನ್‌ನ ಮೂಲ ಕಾರಣವನ್ನು ನಿಭಾಯಿಸುತ್ತದೆ, ಎಸ್‌ಪಿಎಂಎಫ್ ಥೆರಪಿ ಚಿಕಿತ್ಸೆಯಿಂದ ಕಾಯಿಲೆಯ ಬೆಳವಣಿಗೆ ನಿಲ್ಲುವುದಷ್ಟೇ ಅಲ್ಲ ಕಾರ್ಟಿಲೇಜ್ ಮೂಲಕ ರೋಗ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸುತ್ತದೆ. ಅದೇ ಥರ, ಎಸ್‌ಪಿಎಂಎಫ್‌ಗೆ ಕ್ಯಾನ್ಸರ್ ಜೀವಕೋಶಗಳು ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಕಾರಕ ಜೀವಕೋಶಗಳು ಸಂವೇದನೆಗೊಳ್ಳುವುದರ ಮೂಲಕ ಅಪೋಪ್ಟಾಸಿಸ್ ಉಂಟಾಗುತ್ತದೆ ಮತ್ತು ಜೀವಕೋಶದ ಪೊರೆಯ ಸಾಮರ್ಥ್ಯವನ್ನು ಸಾಮಾನ್ಯಗೊಳಿಸುತ್ತದೆ. ಇದು ಅಪೊಪ್ಟಾಸಿಸ್‌ಗೆ ಕಾರಣವಾಗುವ ಕೋಶ ಪ್ರಸರಣದ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.
ಹೀಗಾಗಿ, ಎಸ್‌ಪಿಎಂಎಫ್ -ಚಿಕಿತ್ಸೆಯು ರೋಗಿಗೆ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಉಂಟುಮಾಡದೆ ರೋಗದ ಪ್ರಗತಿಯನ್ನು ನಿಲ್ಲಿಸುವ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸಾ ವಿಧಾನವಾಗಿದೆ. ಎಸ್‌ಪಿಎಂಎಫ್ ಥೆರಪಿಯು ಡಾ.ವಸಿಷ್ಠ ಸಂಶೋಧಿಸಿರುವ ಮತ್ತು ಭಾರತದಲ್ಲಿ, ಅಮೆರಿಕಾದಲ್ಲಿ ಪೇಟೆಂಟ್ ಮತ್ತು ವಿಶ್ವಾದ್ಯಂತ ಪಿಸಿಟಿ ಹೊಂದಿರುವ AKTIS SOMA® ಯಂತ್ರದ ಮೂಲಕ ಮಾಡಲಾಗುತ್ತದೆ.
ಎಸ್‌ಬಿಎಫ್ ಹೆಲ್ತ್ ಕೇರ್ ಕಳೆದ 17 ವರ್ಷಗಳಿಂದ ರೋಗಿಗೆಗಳಿಗೆ ಚಿಕಿತ್ಸೆ ಒದಗಿಸುತ್ತಿದ್ದು, 10 ಸಾವಿರಕ್ಕೂ ಹೆಚ್ಚಿನ ಆರ್ಥರೈಟಿಸ್ ರೋಗಿಗಳನ್ನು ಮತ್ತು 500 ವಿವಿಧ ರೀತಿಯ ಕ್ಯಾನ್ಸರ್ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದೆ. ಈ ಸಂಸ್ಥೆಯು ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್, ರಾಜ್ಯಸಭಾ ಎಂಪಿ ರೇಣಿಕಾ ಚೌಧರಿ ಮತ್ತು ಮಾಜಿ ಕೇಂದ್ರ ಸಚಿವ(ರಾಜ್ಯ ದರ್ಜೆ) ಐಎಚ್ ಲತೀಫ್ ಮತ್ತು ಭಾರತದ ಮಾಜಿ ಏರ್ ಚೀಫ್ ಮಾರ್ಷಲ್ ಅವರಿಗೆ ಚಿಕಿತ್ಸೆ ನೀಡಿದ ಗರಿಮೆಯನ್ನು ಹೊಂದಿದೆ.
ಎಲ್ಲಿ: ಯುನಿಟ್ # 006, ನೆಲ ಮಹಡಿ, ಲಾರೆನ್ಯ್ ಆಂಡ್ ಮೇಯೋ ಸಮೀಪ, ಬಾರ್ಟನ್ ಸೆಂಟರ್, ಎಂಜಿ ರಸ್ತೆ.
ಅಪಾಯಿಂಟ್‌ಮೆಂಟ್‌ಗಾಗಿ ಕರೆ ಮಾಡಿ: 6366106036
ಎಸ್‌ಬಿಎಫ್ ಹೆಲ್ತ್ ಕೇರ್ ಕುರಿತು
ನೀವು ಭರವಸೆಯನ್ನು ಆರಿಸಿಕೊಂಡರೆ ಎಲ್ಲವೂ ಸಾಧ್ಯ ಎಂಬ ಹೇಳಿಕೆ ಇದೆ. ಮತ್ತು ಈ ಹೇಳಿಕೆಯು ಕ್ಯಾನ್ಸರ್ ಮತ್ತು ಆರ್ಥರೈಟಿಸ್ ಚಿಕಿತ್ಸೆಯಲ್ಲಿ ಹೆಚ್ಚು ಪ್ರಸ್ತುತವಾಗಿದೆ. 2006ರಿಂದ ಅಂತಹ ರೋಗಿಗಳಿಗೆ ಭರವಸೆಯ ದಾರಿದೀಪವನ್ನು ಒದಗಿಸುತ್ತಿರುವ ಎಸ್‌ಬಿಎಫ್ ಹೆಲ್ತ್ ಕೇರ್, ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮೀಸಲಾಗಿರುವ ಸಂಸ್ಥೆಯಾಗಿದೆ ಮತ್ತು ಕ್ಯಾನ್ಸರ್ ಮತ್ತು ಆರ್ಥರೈಟಿಸ್ ಸಂಬಂಧಿತ ವೈದ್ಯಕೀಯ ಸಂಶೋಧನೆಯಲ್ಲಿ ಪ್ರವರ್ತಕ ಎನಿಸಿಕೊಂಡಿದೆ.
ಪರಿಣಾಮಕಾರಿ ಚಿಕಿತ್ಸೆಗಾಗಿ ಉನ್ನತ ತಂತ್ರಜ್ಞಾನವನ್ನು ಬಳಸಲು ಬದ್ಧವಾಗಿರುವ ಒಂದು ಮಾದರಿ ಕೇಂದ್ರವಾಗಿದ್ದು, ಸುರಕ್ಷಿತ ಮತ್ತು ಆಕ್ರಮಣಶೀಲವಲ್ಲವಾಗಿರುವುದಷ್ಟೇ ಅಲ್ಲ ಸೈಡ್ ಎಫೆಕ್ಟ್‌ಗಳಿಂದಲೂ ಮುಕ್ತವಾಗಿದೆ. ಎಸ್‌ಬಿಎಫ್ ಹೆಲ್ತ್ ಕೇರ್ ನಂಬಲರ್ಹವಾದ ಹೆಸರಾಗಿದ್ದು, ಇದರ ಗಮನ ಚಿಕಿತ್ಸೆ ಮತ್ತು ಸಮತೋಲಿತ ಮತ್ತು ಸುಧಾರಿತ ಜೀವನ ಗುಣಮಟ್ಟದ ಕಡೆಗೆ ಇದೆ.
ದಿ.ವಿಂಗ್ ಕಮಾಂಡರ್ (ಡಾ.) ವಿ.ಜಿ. ವಸಿಷ್ಠ ಕುರಿತು
ಒಬ್ಬ ಪ್ರವರ್ತಕ ಮತ್ತು ದಾರ್ಶನಿಕನಂತೆ ಇದ್ದ ದಿ. ಡಾ. ವಿ.ಜಿ. ವಸಿಷ್ಠ ತನ್ನ ವೃತ್ತಿ ಆರಂಭಿಸಿದ್ದು ಏರ್ ಫೋರ್ಸ್‌ನಲ್ಲಿ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಆಗಿ. ಭಾರತದ ನಾಗಪುರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯಾಲಜಿ ವಿಷಯದಲ್ಲಿ ಮೆಡಿಕಲ್ ಮತ್ತು ಸ್ನಾತಕೋತ್ತರ ಪದವಿ ಪಡೆದ ಬಳಿಕ ಅವರು ಸುದೀರ್ಘ 20 ವರ್ಷಗಳ ಕಾಲ ಏರ್ ಫೋರ್ಸ್‌ನಲ್ಲಿ ವೃತ್ತಿ ಮಾಡಿದರು. ಎಸ್‌ಪಿಎಂಎಫ್® ಸಂಶೋಧನೆ ಕಡೆಗೆ ಗಮನ ಹರಿಸುವ ಸಲುವಾಗಿ ಅವರು 2006ರಲ್ಲಿ ಏರ್ ಫೋರ್ಸ್‌ನಿಂದ ಗೌರವಯುತವಾಗಿ ವಿದಾಯ ಪಡೆದರು.
ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕರಾಗಿರುವ ಹೊರತಾಗಿ ಡಾ. ವಸಿಷ್ಠ ಅವರು ಕರ್ನಾಟಕ ರಾಜ್ಯದಲ್ಲಿ ರೇಡಿಯಾಲಜಿಯಲ್ಲಿ ಪಿಎಚ್‌ಡಿಗೆ ಮಾನ್ಯತೆ ಪಡೆದ ಏಕೈಕ ಮಾರ್ಗದರ್ಶಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ಅವರು ಹಲವಾರು ಎಂಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಮತ್ತು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ರೇಡಿಯಾಲಜಿ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ವಸಿಷ್ಠ ಅವರು ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಆರ್ಥರೈಟಿಸ್ ಮತ್ತು ಕ್ಯಾನ್ಸರ್ ಕುರಿತಾದ ಸಂಶೋಧನೆಗಾಗಿ ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞಸಮ್ಮೇಳನಗಳಲ್ಲಿ ತಮ್ಮ ವಿಚಾರ ಮಂಡಿಸಿದ್ದಾರೆ. ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಸಶಸ್ತ್ರಪಡೆಗಳ ತಂಡದ ಸದಸ್ಯರೂ ಆಗಿದ್ದ ಡಾ. ವಸಿಷ್ಠ, ತಮ್ಮ ಕ್ಷೇತ್ರದಲ್ಲಿ ನೀಡಿದ ಅಭೂತಪೂರ್ವ ಕೊಡುಗೆ ಮತ್ತು ಶ್ರೇಷ್ಠಸಾಧನೆಗಾಗಿ ರಾಷ್ಟ್ರಪತಿಗಳು ನೀಡುವ ಪ್ರೆಸಿಡೆನ್ಶಿಯಲ್ ಕಲರ್ ಗೌರವಕ್ಕೂ ಭಾಜನರಾಗಿದ್ದಾರೆ.
ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಅಲ್ಟ್ರಾಸೌಂಡ್ ಮೆಡಿಸಿನ್ ಸದಸ್ಯರಾಗಿರುವುದರ ಜತೆಗೇ, ಡಾ. ವಸಿಷ್ಠ ಬಾಸ್ಟನ್‌ನ ಲಾಹೆ ಮೆಡಿಕಲ್ ಸೆಂಟರ್‌ನ ಫೆಲೋಶಿಪ್ ಹಾಗೂ ಇಂಟರ್‌ನ್ಯಾಷನಲ್ ಮೆಡಿಕಲ್ ಸೈನ್ಸಸ್ ಅಸೋಸಿಯೇಷನ್ ಫೆಲೋಶಿಪ್‌ನ್ನು ಫಿಲಡೆಲ್ಫಿಯಾದ ಜೆಫರ್‌ಸನ್ ಸಂಸ್ಥೆಯಿಂದ ಪಡೆದಿರುತ್ತಾರೆ.