IMG 20230922 WA0010

Karnataka: ದೇಶದಲ್ಲಿನ ಉನ್ನತ ಶಿಕ್ಷಣ ಬಲವರ್ಧನೆಗೆ ಮತ್ತೊಂದು ಹೆಜ್ಜೆ….!

BUSINESS

ಕೆನಡಾದ ಯಾರ್ಕ್ -ಭಾರತದ ಒಪಿ ಜಿಂದಾಲ್ ವಿವಿ ಸಹಯೋಗ

ದೇಶದಲ್ಲಿನ ಉನ್ನತ ಶಿಕ್ಷಣ ಬಲವರ್ಧನೆಗೆ ಮತ್ತೊಂದು ರಹದಾರಿ

ಜಗತ್ತು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ಎದುರಿಸಲು ಜಾಗತಿಕ ಒಡಂಬಡಿಕೆಗಳನ್ನು ಸುಲಭಗೊಳಿಸಲು ಪ್ರಗತಿಪರ ವಿಶ್ವವಿದ್ಯಾಲಯಗಳು ಅತ್ಯಗತ್ಯ ಎಂದು ಯಾರ್ಕ್ ವಿಶ್ವವಿದ್ಯಾಲಯದ ಉಪಕುಪತಿ ಡಾ. ರೋಂಡಾ ಎಲ್ .ಲೆಂಟನ್ ಹೇಳಿದ್ದಾರೆ.

ಸೆಪ್ಟಂಬರ್ 22,2023: ಭಾರತ ಮತ್ತು ಕೆನಡಾ ದೇಶದ ಶೈಕ್ಷಣಿಕ ಸಹಯೋಗ ಮತ್ತು ಉಭಯ ದೇಶಗಳ ನಡುವೆ ವಿದ್ಯಾರ್ಥಿಗಳ ಚಲನಶೀಲತೆಯನ್ನು ಬೆಂಬಲಿಸುವ ಮಹತ್ವದ ಒಪ್ಪಂದ ಪತ್ರ(MoU) ಕ್ಕೆ ಕೆನಡಾದ ಯಾರ್ಕ್ ವಿಶ್ವವಿದ್ಯಾಲಯ ಮತ್ತು ಒಪಿ ಜಿಂದಾಲ್ ವಿಶ್ವವಿದ್ಯಾಲಯ ಸಹಿಹಾಕಿವೆ. ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನೆ,ನಾವಿನ್ಯತೆ, ಶೈಕ್ಷಣಿಕ ಚಟುವಟಿಕೆಗಳು ,ಸಮ್ಮೇಳನಗಳ ಸಹಯೋಗವನ್ನು ಅಭಿವೃದ್ಧಪಡಿಸಿಕೊಳ್ಳಲು ಈ ತಿಳುವಳಿಕೆ ಪತ್ರವು ರಹದಾರಿಯಾಗಲಿದೆ. 

  ಸಹಯೋಗದ ಭಾಗವಾಗಿ ಉಭಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ವಿನಿಮಯ ಕಾರ್ಯಕ್ರಮಗಳು ವಿದೇಶದಲ್ಲಿ ಅಲ್ಪಾವಧಿಯ ಅಧ್ಯಯನ ,ದ್ವಿಪದವಿ ಕಾರ್ಯಕ್ರಗಳು ಮತ್ತು ಸಹಯೋಗದ ಸಂಶೋಧನಾ ಯೋಜನೆಗಳ ಮೇಲೆ ಕೇಂದ್ರೀಕರಿಸುವ ಉದ್ದೇಶವನ್ನು ಹೊಂದಲಾಗಿದೆ.

IMG 20230922 134305

     ಯಾರ್ಕ್ ವಿಶ್ವವಿದ್ಯಾಲಯವು ಕೆನಡಾದ ಮೂರನೇ ಅತಿದೊಡ್ಡ ವಿಶ್ವವಿದ್ಯಾಲಯ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಪ್ರಭಾವಕ್ಕಾಗಿ ವಿಶ್ವದ ಅಗ್ರ 40 ರಲ್ಲಿ ಸ್ಥಾನ ಪಡೆದುಕೊಂಡಿದೆ. ಇಷ್ಟೇ ಅಲ್ಲ ಭಾರತದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಿಕೊಳ್ಳುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪರಸ್ಪರ ಪ್ರಯೋಜನಕಾರಿ ಅವಕಾಶಗಳನ್ನು ಸೃಷ್ಠಿಸುವ ಹಲವಾರು ನಿರ್ಣಾಯಕ ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಒಲವನ್ನು ಹೊಂದಿದೆ.  ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದೊಂದಿಗಿನ ಯಾರ್ಕ್ ವಿಶ್ವವಿದ್ಯಾಲಯದ  ಸಹಯೋಗದಿಂದ  ಕೆನಡಾ ವಿದ್ಯಾರ್ಥಿಗಳು ಭಾರತ, ಅದರ ಬೆಳವಣಿಗೆಯ ಕಥೆ ಮತ್ತು ಪ್ರಪಂಚದ ಮೇಲೆ ಭಾರತದ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯವಾಗಲಿದೆ.

       ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತದ ಸಹವರ್ತಿಳ  ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು CA$ 318-ಮಿಲಿಯನ್ ಕನೆಕ್ಟೆಡ್ ಮೈಂಡ್ಸ್ ಇನಿಶಿಯೇಟಿವ್ ನಂತಹ ವಿಶ್ವದರ್ಜೆಯ ಅಂತರಶಿಸ್ತೀಯ ಸಂಶೋಧನೆಯಲ್ಲಿ ಉತ್ತಮ-ಗುಣಮಟ್ಟದ ಕಾರ್ಯಕ್ರಮಗಳು ಮತ್ತು ನಾಯಕತ್ವವನ್ನು ನೀಡುತ್ತದೆ, ಇದು ಉದ್ಯಮಗಳಿಗೆ ಸಮಾನ ತಂತ್ರಜ್ಞಾನಗಳನ್ನು ಶೀಘ್ರವಾಗಿ ಮಾರುಕಟ್ಟೆಗೆ ತರಲು ಮತ್ತು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅನುವು ಮಾಡಿಕೊಡುತ್ತದೆ.

        ಪ್ರಪಂಚದ ಅತಿದೊಡ್ಡ ವ್ಯಾಪಾರ ಮತ್ತು ಗ್ರಾಹಕ ಮಾರುಕಟ್ಟೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಹಿರಂಗಪಡಿಸುವ ಪ್ಯಾನ್-ಇಂಡಿಯಾ ಉದ್ಯಮಶೀಲತೆಯ ಬೂಟ್ ಶಿಬಿರವು ಮುಂದಿನ ಯೋಜನೆಯಾಗಿದೆ. ಭಾರತದದಂತಹ ಆಧ್ಯತೆಯ ದೇಶಗಳಲ್ಲಿ ಪ್ರಮುಖ ವಿಶ್ವವಿದ್ಯಾಲಯಗಳು,ಕೈಗಾರಿಕೆಗಳು, ಸರ್ಕಾರಿ ಎಜೆನ್ಸಿಗಳು ಮತ್ತು ಎನ್ ಜಿಒಗಳೊಂದಿಗೆ ಜಾಗತಿ ಸಂಶೋಧನಾ ಮೂಲ ನಿಧಿಯನ್ನು ಸ್ಥಾಪಿಸಲಾಗುವುದು. 

      ಭಾರತೀಯ ಕೈಗಾರಿಕೆಗಳು ಮತ್ತು ಸಂಸ್ಥೆಗಳಂತೆ  ಯಾರ್ಕ್ ವಿಶ್ವವಿದ್ಯಾಲಯವು ಪರಿಸರ ಸಂರಕ್ಷಣೆ ಬೋಧನೆ ಮತ್ತು ಜ್ಞಾನದ ಕ್ರೋಢೀರಣಕ್ಕೆ ಆಧ್ಯತೆ ನೀಡುತ್ತಿದೆ. ವಿಶ್ವಸಂಸ್ಥೆಯ CIFAL ತರಬೇತಿ ಕೇಂದ್ರವನ್ನು ಹೊಂದಿರುವ ಯಾರ್ಕ್  ಕೆನಡಾದ  ಮೊದಲ ವಿಶ್ವವಿದ್ಯಾಲಯವಾಗಿದೆ. ಇದು ಆರೋಗ್ಯ, ಅಭಿವೃದ್ಧಿ, ಪರಿಸರ ಮತ್ತು ಹಾವಮಾನ ವೈಪರಿತ್ಯಂದಿಂದ  ಉಂಟಾಗುವ ಅಪಾಯದ ಸಂದರ್ಭಗಳಲ್ಲಿ ತುರ್ತು ನಿರ್ವಹಣೆ,ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ  ಮಾನವೀಯ ಹಾಗೂ ಸಾಮಾಜಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದಕ್ಕೆ ತನ್ನನ್ನು ಮುಡಿಪಾಗಿರಿಸಿಕೊಂಡಿದೆ.  
 UNITAR ಸಹಭಾಗಿತ್ವದಲ್ಲಿ ನೀರಿನ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವ ಗುರಿಯನ್ನು ಹೊಂದಿರುವ ಪರಿವರ್ತಿತ ಹೊಸ ಗ್ಲೋಬಲ್ ವಾಟರ್ ಅಕಾಡೆಮಿಯಲ್ಲಿ ಇದು ಪ್ರಮುಖ ಶೈಕ್ಷಣಿಕ ಸಹಭಾಗಿತ್ವವನ್ನು ಹೊಂದಿದೆ.

     ತಿಳುವಳಿಕೆ ಒಪ್ಪಂದ ಪತ್ರ(MoU)ದ ಅನ್ವಯ ಉಭಯ ವಿಶ್ವವಿದ್ಯಾಯಗಳ ಜಂಟಿ ಉಪಕ್ರಮಗಳನ್ನು ಯಾರ್ಕ್ ವಿಶ್ವವಿದ್ಯಾಲಯದ ಎಂಟನೇ ಅಧ್ಯಕ್ಷ ಮತ್ತು ಉಪಕುಲಪತಿ ಪ್ರೊ.(ಡಾ.) ರೊಂಡಾ ಎಲ್ ಲೆಂಟನ್ ಮತ್ತು ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪಕುಲಪತಿ ಪ್ರೊ.(ಡಾ.) ಸಿ ರಾಜ್ ಕುಮಾರ್ ಅವರು ಘೋಷಿಸಿದರು. ಭಾರತವನ್ನು ಒಂದು ದೇಶವಾಗಿ ಮತ್ತು ಅದರ ಬೆಳವಣಿಗೆಯ ಕಥೆಯನ್ನು ಅರ್ಥಮಾಡಿಕೊಳ್ಳಲು ಕೆನಡಾದ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಸಹಯೋಗದ ಕಾರ್ಯಕ್ರಮಗಳಲ್ಲಿ ಸೇರಿವೆ.

 ಇಂದಿನ ಪ್ರಪಂಚದಲ್ಲಿ ಪ್ರಗತಿಶೀಲ ವಿಶ್ವವಿದ್ಯಾಲಯಗಳ ಮಹತ್ವವನ್ನು ಕುರಿತು ವಿವರಿಸಿದ ಪ್ರೊ.(ಡಾ.) ರೊಂಡಾ ಎಲ್ .ಲೆಂಟಾನ್, ನಂಬಲಾಗದಷ್ಟು ಸಂಕೀರ್ಣ ಸವಾಲುಗಳನ್ನು ಎದುರಿಸಲು ಜಾಗತಿಕ ಹೊಂದಾಣಿಕೆಯನ್ನು ಸುಲಭಗೊಳಿಸುವಲ್ಲಿ ಮತ್ತು ಉಲ್ಬಣಿಸುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಣದುಬ್ಬರದಿಂದ ಉಂಟಾಗುವ ಆರ್ಥಿಕ ಅಸ್ಥಿರತೆಗಳು ಮತ್ತು ನಮ್ಮ ಗ್ರಹದ ಅವನತಿಗೆ ಕಾರಣಗಳನ್ನು ಅಧ್ಯಯನ ನಡೆಸಲು, ಕೃತಕ ಬುದ್ಧಿಮತ್ತೆ, ಸ್ವಯಂಚಾಲನದಂತಹ ಸುಧಾರಿತ ತಂತ್ರಜ್ಞಾನಗಳ ತ್ವರಿತ ನಿಯೋಜನೆಗೊಳ್ಳುವುದಕ್ಕೆ ಹೆಚ್ಚಿನ ಅಧ್ಯಯನ ನಡೆಸುವುದು ಮತ್ತು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ನಮ್ಮ ವಿದ್ಯಾರ್ಥಿಗಳು ಸಹಭಾಗಿತ್ವದ ಅಡಿಯಲ್ಲಿ ಸಣ್ಣ ಉದ್ಯಮಶೀಲತೆಗೆ ಅಧ್ಯಯನ ದೃಷ್ಟಿಯಿಂದ ಪ್ರವಾಸಗಳಿಗಾಗಿ ವಿದೇಶಿ ವಿದ್ಯಾರ್ಥಿಳು ಇಲ್ಲಿಗೆ ಬರುವುದು ಕೂಡಾ ನಿರ್ಣಾಯಕ ಬೆಳವಣಿಗೆಯಾಗಿದೆ. ಹೊಸ ಜಾಗತಿಕ ಸನ್ನಿವೇಶದಲ್ಲಿ ಮುನ್ನಡೆಸಲು ಭಾರತ ಮತ್ತು ಕನಡಾ ಸಹಭಾಗಿತ್ವ ಹೊಂದಿವೆ ಎಂದು ಹೇಳಿದರು.

     “ಜ್ಞಾನದ ವಿನಿಮಯದ ಮತ್ತು ಅವಕಾಶಗಳ ಜಾಗತಿಕ ವೇದಿಕೆಯನ್ನು ರಚಿಸುವ ಭಾರತದ ಅನ್ವೇಷಣೆಯಲ್ಲಿ ಕೆನಡಾ ಪ್ರಮುಖ ಸಹಭಾಗಿ. ಕೆನಡಾದ ಯಾರ್ಕ್  ವಿಶ್ವವಿದ್ಯಾಲಯವಾದ ಸಹಯೋಗವು ನಮ್ಮ ಸಾಂಸ್ಥಿಕ ಪ್ರಯಾಣಲ್ಲಿ ಮಹತ್ವದ ಮೈಲಿಗಲ್ಲು. ಕಡನಡಾದ ಅಂತಾರಾಷ್ಟ್ರೀಯ ಶಿಕ್ಷಣಕ್ಕಾಗಿ ಕೆನಡಿಯನ್ ಬ್ಯೂರೋದ ಇತ್ತೀಚೆಗೆ ನೀಡಿದ ಮಾಹಿತಿಯ ಪ್ರಕಾರ  ಅಂತಾರಾಷ್ಟ್ರೀಯ ಶಿಕ್ಷಣಕ್ಕಾಗಿ ಕೆನಡಾಕ್ಕೆ ಬರುವ ವಿದ್ಯಾರ್ಥಿಗಳ ಪೈಕಿ ಭಾರತದ ಪ್ರಮಾಣವೇ 34% ರಷ್ಟಾಗಿದೆ.ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಕೆನಡಾದ ವಿದ್ಯಾರ್ಥಿಳ  ಸಂಖ್ಯೆಯಲ್ಲಿ ಹೆಚ್ಚಳವನ್ನು ಉತ್ತೇಜಿವ ಅಗತ್ಯತೆ ಇದೆ. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದೊಂದಿಗಿನ ನಮ್ಮ ವಿಶ್ವವಿದ್ಯಾಲಯದೊಂದಿಗಿನ ಸಹಭಾಗಿತ್ತವು ಭಾರತ ಕೆನಡಾ ನಡುವಿನ ದೀರ್ಘವಾಧಿಯ ಶೈಕ್ಷಣಿಕ ಸಂಬಂಧವನ್ನು ಬಲಪಡಿಸುತ್ತದೆ” ಎಂಬ ಆತ್ಮವಿಶ್ವಾಸವನ್ನು ಪ್ರೊ.(ಡಾ.) ಸಿ ರಾಜ್ ಕುಮಾರ್ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತು ಕೆನಡಾ ನಿಕಟ ಮತ್ತು ದೀರ್ಘಕಾಲದ ಸಂಬಂಧವನ್ನು ಹೊಂದಿವೆ. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಹಭಾಗಿತ್ವ ಕೆನಡಾ-ಭಾರತದ ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಭಾಗವಾಗಿದೆ. ಹಲವಾರು ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದರಲ್ಲೂ ವಿದ್ಯಾರ್ಥಿಗಳ ಉನ್ನತ ಶಿಕ್ಷಣ,ಸಂಶೋಧನೆ ಮತ್ತು ಶೈಕ್ಷಣಿಕ ವಿನಿಮಯ, ಇಷ್ಟೇ ಏಕೆ ಉತ್ಪಾದನಾ ವಲಯದಲ್ಲೂ ಉಭಯ ದೇಶಗಳು ಸಹಕಾರ ಹೊಂದಿವೆ. 2009 ರಲ್ಲಿ ಸ್ಥಾಪನೆಗೊಂಡ ನಮ್ಮ ವಿಶ್ವವಿದ್ಯಾಲಯವು ಹೆಸರಿಗೆ ತಕ್ಕಂತೆ ಜಾಗತಿಕ ಮಟ್ಟದಲ್ಲಿ ಗಮನವನ್ನು ಕೇಂದ್ರೀಕರಿಸಿದೆ ” ಎಂದು ಅವರು ಪ್ರತಿಪಾದಿಸಿದರು.  

“ಉನ್ನತ ಶಿಕ್ಷಣದ ಪ್ರತಿಯೊಂದು ಅಂಶದಲ್ಲೂ ಅಂತಾರಾಷ್ಟ್ರೀಯತೆಗೆ ಒತ್ತು ನೀಡುವ ಮೂಲಕ ಜಾಗತಿಕ ಕಲಿಕೆಯ ಅನುಭವವನ್ನು ಖಾತ್ರಿ ಪಡಿಸುವುದರೊಂದಿಗೆ ನಾವು ಈ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸಾಬೀತುಪಡಿಸಿದ್ದೇವೆ. ಭಾರತದ $ 5 ಟ್ರಿಲಿಯನ್ ಆರ್ಥಿಕತೆಯ ಧಿಟ್ಟ ಹೆಜ್ಜೆಗೆ ನಾವಿನ್ಯತೆ, ತಂತ್ರಜ್ಞಾನ, ಉದ್ಯಮಶೀಲತೆ ಅತ್ಯಂತ ನಿರ್ಣಾಯಕವಾಗಿದೆ.ಯಾರ್ಕ್ ಮತ್ತು ಭಾರತದ ಇತರ ವಿಶ್ವವಿದ್ಯಾಲಯಗಳು ನಾವಿನ್ಯತ , ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮುಂಚುಣಿಯಲ್ಲಿವೆ” ಎಂದು ಪ್ರೊ. ಸಿ ರಾಜ್ ಕುಮಾರ್ ಹೇಳಿದರು