IMG 20211120 WA0033

ಪಾವಗಡ: ತುಂಬಿ ಹರಿಯುತ್ತಿರುವ ಉತ್ತರ ಪಿನಾಕಿನಿ….!

DISTRICT NEWS ತುಮಕೂರು

ಪಾವಗಡ : ತಾಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆ ಶಾಸಕ ವೆಂಕಟರವಣಪ್ಪ ಶನಿವಾರ ಬಾಗಿನ ಸಮರ್ಪಿಸಿದರು.

ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡ್ಯಾಂ ನಿರ್ಮಾಣದ ವೇಳೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೇ ಸುಮಾರು 12 ಕೋಟಿ ರೂ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಪೂರ್ಣಗೊಳಿಸಲಾಯಿತು. ಇದೀಗ ಚೆಕ್ ಡ್ಯಾಂ ನಿಂದ ನಾಗಲಮಡಿಕೆ ಹೋಬಳಿ ಜನತೆಗೆ ಅನುಕೂಲವಾಗುತ್ತಿದೆ ಎಂದರು.IMG 20211120 WA0030

ಅಂತರ್ಜಲ ವೃದ್ಧಿಯಾಗಿ, ನೀರಿನಲ್ಲಿದ್ದ ಫ್ಲೋರೈಡ್ ಅಂಶ ಕಡಿಮೆಯಾಗಿದೆ. ಪೈಪ್ ಲೈನ್ ಮೂಲಕ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಅಂತ್ಯಸುಭ್ರಮಣ್ಯ ಖ್ಯಾತಿಯ ಸುಬ್ರಹ್ಮಣ್ಯ ಸ್ವಾಮಿ ದೇಗುಲ ನದಿಯ ದಡದಲ್ಲಿ ಇದ್ದು, ನದಿ ಹರಿಯುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳಿಗೂ ಅನುಕೂಲವಾಗಲಿದೆ. ಕ್ಷೇತ್ರ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡ ತಾಳೇಮರದ ಹಳ್ಳಿ ನರಸಿಂಹ್ಮಯ್ಯ, ಶಂಕರರೆಡ್ಡಿ, ಪುರಸಭೆ ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ಲಕ್ಷ್ಮಿನಾರಾಯಣ, ಬಾಲಾಜಿ, ಕೆ.ಎನ್.ಮಂಜುನಾಥ, ನಾಗರಾಜು, ನಾರಾಯಣ, , ಬಾಸ್ಕರ್, ವಿ.ಹೆಚ್.ಪಾಳ್ಯ ಪಾಪಣ್ಣ, ಹನುಮೇಶ್, ಅಭಿ ಉಪಸ್ಥಿತರಿದ್ದರು.

ಕೃಷ್ಣಾ ನದಿಯ ನೀರಿನ ಒಳಹರಿವಿನಿಂದಾಗಿ ಇಂದು ಮಧ್ಯಾಹ್ನದ ವೇಳೆಗೆ ನಾಗಲಮಡಿಕೆ ಡ್ಯಾಮಿನ ನೀರಿನ ರಭಸದ ಸಾಮರ್ಥ್ಯ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಜನರು ಪ್ರಾಣವನ್ನು ಸಹ ಲೆಕ್ಕಿಸದೆ ಮೀನುಗಳನ್ನು ಹಿಡಿಯಲು ನೀರಿಗೆ ಇಳಿದಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಿರುಮಣಿ ಪೊಲೀಸ್ ಠಾಣೆಯ A.S.I ನರಸಿಂಹಮೂರ್ತಿ ಮತ್ತು ಸಿಬ್ಬಂದಿವರ್ಗದವರಿಗೆ ಮೀನು ಹಿಡಿಯಲು ನೀರಿಗೆ ಇಳಿದ ಜನರನ್ನು ಚದುರಿಸಿದರು.

IMG 20211120 WA0031

ನಂತರ A.S.I ನರಸಿಂಹಮೂರ್ತಿ ಅವರು ಮಾತನಾಡುತ್ತಾ ಹೆಚ್ಚು ಮಳೆಯಾದ ಕಾರಣ ಡ್ಯಾಮ್ ತುಂಬಿ ರಭಸವಾಗಿ ಹರಿಯುತ್ತಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯಬಾರದೆಂದು. ದೂರದಿಂದ ಮಾತ್ರ ನೀರನ್ನು ನೋಡಿಕೊಂಡು ಹೋಗಬೇಕು. ಹಾಗೂ ಈ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಹ ನೀಡಿದರು.

ವರದಿ: ಶ್ರೀನಿವಾಸುಲು ಎ