IMG 20220818 WA0040

ಆನೇಕಲ್: ವಣಕನಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆ….!

DISTRICT NEWS ಬೆಂಗಳೂರು

ಆನೇಕಲ್: ವಣಕನಹಳ್ಳಿ ಗ್ರಾಮ ಪಂಚಾಯತಿ 2022- 23 ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆ ವಣಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣ ದಲ್ಲಿ ನಡೆಯಿತು. ಗ್ರಾಮಸಭೆಯು ಕಿರಿಯ ಅಭಿಯಂತಕರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಇಲಾಖೆ ಅಧಿಕಾರಿಗಳಾದ ಮಹಾದೇವಯ್ಯ ಮಾರ್ಗಸೂಚಿ ಅಧಿಕಾರಿಯಾಗಿ, ಪಂಚಾಯತಿ ಅಧ್ಯಕ್ಷ ಆರ್ ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ, ಪೋಲಿಸ್, ಆರೋಗ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಗ್ರಾಮ ಸಭೆಯಲ್ಲಿ ವಿವರಿಸಿದರು.
ಪಂಚಾಯತಿ ಬಿಲ್ ಕಲೆಕ್ಟರ್ ಸೀನಪ್ಪ ರವರು 2021-22 ನೇ ಸಾಲಿನ ವರದಿ ಮಂಡಿಸಲಾಗಿ ಅಂಗೀಕಾರಗೊಂಡಿತು. ವಾರ್ಡ್ ಸಭೆಯಲ್ಲಿ ಬಂದಿದ್ದ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿ, ಮುಂದೆ ಆದ್ಯತಾನುಸಾರ ಕ್ರಿಯಾಯೋಜನೆಗಳಲ್ಲಿ ಸೇರಿಸಲು ನಿರ್ಣಯಿಸಲಾಯಿತು.
ಗ್ರಾಮಸಭೆಯು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದು. ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಸೂಕ್ತ ನಿರ್ಣಯಗಳಾಗಬೇಕು. ಆಡಳಿತ ಮಂಡಳಿಗೆ ಆಡಳಿತ ನಡೆಸುವಲ್ಲಿ ಸೂಕ್ತ ಸಲಹೆಗಳನ್ನು ನೀಡಿ. ವಿವಿಧ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಕ್ರಿಯರಾಗಿ ಗ್ರಾಮಸಭೆಯನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ತಯಾರಾಗಬೇಕಿದೆ ಎಂದು ಅಧ್ಯಕ್ಷರು ತಿಳಿಸಿದರು ಸಾರ್ವಜನಿಕರ ಕುಂದು ಕೊರತೆ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು.ಪ್ರಶ್ನೆಗಳನ್ನು ಕೇಳಬೇಕಾದರೆ ಸ್ವಲ್ಪ ಆಲೋಚಿಸಬೇಕು ಗ್ರಾಮ ಸಭೆಯ ಜನರು ಜನಪ್ರತಿನಿಧಿಗಳು ಅಧಿಕಾರಿಗಳು ಈ ಮೂರು ಜನ ಕೂಡಿ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು ಸಮಸ್ಯೆಗಳ ಬಗ್ಗೆ ಆ ರೀತಿಯಲ್ಲಿ ಪ್ರಶ್ನೆಗಳನ್ನು ಮಾಡಿ.ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸದಸ್ಯರ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಗ್ರಾ.ಪಂ ಅಧ್ಯಕ್ಷ ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

IMG 20220818 WA0038


ಜಲಜೀವನ್‌ ಮಿಷನ್‌ ಯೋಜನೆ ವಣಕನಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಗ್ರಾಮಗಳ ಮನೆಗಳಿಗೆ ನಲ್ಲಿ ಸಂಪರ್ಕದ ಗುರಿ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಲಜೀವನ್‌ ಮಿಷನ್‌(ಜೆಜೆಎಂ)ಯೋಜನೆ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒದಗಿ ಸುತ್ತಿದ್ದು, ವಣಕನಹಳ್ಳಿ ಗ್ರಾ.ಪಂ. ಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಒಟ್ಟು 9 ಕೋಟಿ 17 ಲಕ್ಷರೂ.ಗಳಲ್ಲಿ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಸಹಕರಿಸಿದ ಶಾಸಕ ಬಿ.ಶಿವಣ್ಣ, ಲೋಕಸಭಾ ಸದಸ್ಯರಾದ ಡಿ ಕೆ ಸುರೇಶ್, ಎಂಎಲ್ಸಿ ಗೋಪಿನಾಥ ರೆಡ್ಡಿ ,ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮಾಜಿ ಅಧ್ಯಕ್ಷರು ಮಾಜಿ ಉಪಾಧ್ಯಕ್ಷರು ಎಲ್ಲಾ ಸದಸ್ಯರು ಹಾಗೂ ಯುವ ಮುಖಂಡರು ಸಹಕಾರದಿಂದ ಈ ಯೋಜನೆ ಆಗಿದೆ. ಟೆಂಡರ್ ಕರೆದು ಮುಂದಿನ ತಿಂಗಳಲ್ಲಿ ಕಾಮಗಾರಿ ಚಾಲನೆ ನೀಡಲಿದ್ದೇವೆ ಎಂದು ಪಂಚಾಯತ್ ರಾಜ್ ಇಂಜಿನಿಯರ್ ಹಾಗೂ ಮಾರ್ಗಸೂಚಿ ಅಧಿಕಾರಿ ಮಹಾದೇವಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸೇರಿದ ಅಧಿಕಾರಿಗಳು,ಉಪಾಧ್ಯಕ್ಷೆ ಆರ್. ಸವಿತಾ ಸನತ್ ಕುಮಾರ್ ಗ್ರಾ. ಪಂ ಎಲ್ಲಾ ಸದಸ್ಯರು ಕಾರ್ಯದರ್ಶಿ ಗಿರಿಯಪ್ಪ, ಪಿ ಡಿ ಓ ಗಂಗಾಧರ್.ಆರ್, ಬಿಲ್ ಕಲೆಕ್ಟರ್ ಸೀನಪ್ಪ ಮತ್ತು ವೀರಪ್ಪ, ಕಂಪ್ಯೂಟರ್ ಆಪರೇಟರ್ ಉಮಾ, ಹಾಗು ಪಂಚಾಯತಿ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.:

ವರದಿ ಹರೀಶ್ ಗುರುಮೂರ್ತಿ ಆನೇಕಲ್