IMG 20230126 WA0196
DISTRICT NEWS ತುಮಕೂರು

ತಾಲೂಕಿನಾದ್ಯಂತ ಸರಳವಾಗಿ ನಡೆದ  ಗಣರಾಜ್ಯೋತ್ಸವ ಕಾರ್ಯಕ್ರಮ.

ಪಾವಗಡ:  ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳು ಜಂಟಿಯಾಗಿ 74ನೇ ಗಣರಾಜ್ಯೋತ್ಸವವನ್ನು ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.

.

  ಶಾಸಕ ವೆಂಕಟರವಣಪ್ಪ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

   ಪ್ರಪಂಚದಲ್ಲೆ ಅತಿ ದೊಡ್ಡ ಗಣತಂತ್ರ ವ್ಯವಸ್ಥೆಯನ್ನು ಹೊಂದಿರುವ ಭಾರತ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯತ್ತ ಮುನ್ನಡೆಯುತ್ತಿದೆ,  ಇಂದಿನ ಮಕ್ಕಳಿಗೆ  ರಾಷ್ಟ್ರೀಯ ಹಬ್ಬಗಳ ಪ್ರಾಮುಖ್ಯತೆ ಏನು ಎಂಬುದನ್ನು ವಿವರಿಸಬೇಕು, ರಾಷ್ಟ್ರೀಯ ಹಬ್ಬಗಳು ಕೇವಲ ಸರ್ಕಾರಿ ಕಚೇರಿಗಳು  ಅಧಿಕಾರಿಗಳಿಗೆ ಸೀಮಿತವಾಗಬಾರದು ಎಂದು ಸಲಹೆ ನೀಡಿದರು.

ತಾಲೂಕಿನ ಅಭಿವೃದ್ಧಿಗಾಗಿ ನಾವು ಮತ್ತು ನೀವು ಜೊತೆಗೂಡಿ ಶ್ರಮಿಸಬೇಕು ಎಂದರು. 

ಸಂವಿಧಾನದ ಆಶಯದಂತೆ ನಾವೆಲ್ಲರೂ ಸೌಹಾರ್ಧತೆಯಿಂದ ಬಾಳಬೇಕು ಎಂದು ತಿಳಿಸಿದರು   

 ಧ್ವಜಾರೋಹಣದ ಬಳಿಕ ವಿವಿಧ ತುಕುಡಿಗಳಿಂದ ಪಥಸಂಚಲನ ನಡೆಯಿತು.

ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು ಆಯ್ದ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು  ಸಾರ್ವಜನಿಕರನ್ನು ಆಕರ್ಷಿಸಿದವು. 

ಹಿಂದಿನ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಗಳಿಸಿದ  ಸರ್ಕಾರಿ ಶಾಲೆಯ  ಮಕ್ಕಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು.

ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ವರದರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕೀಯ ಮುಖಂಡರು, ರೈತ ಮುಖಂಡರು , ಇತರರು ಹಾಜರಿದ್ದರು

ವರದಿ: ಶ್ರೀನಿವಾಸುಲು ಎ.