ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮಾತುಗಳು….!
ಪ್ರಜಾಧ್ವನಿ ಯಾತ್ರೆ ಐತಿಹಾಸಿಕ ಚಾಮರಾಜನಗರಕ್ಕೆ ಬಂದಿದೆ. ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಜನರ ಧ್ವನಿಯಾಗಿ, ಅವರ ನೋವು, ಸಂಕಷ್ಟಗಳಿಗೆ ಪರಿಹಾರ ನೀಡುವುದಕ್ಕಾಗಿ ಮಾಡಲಾಗುತ್ತಿದೆ. ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಸಮಾಜದ ದಲಿತರು, ಪರಿಶಿಷ್ಟರು, ಹಿಂದುಳಿದ ಸಮುದಾಯ, ಮಹಿಳೆಯರು, ಯುವಕರು, ಒಕ್ಕಲಿಗ, ಲಿಂಗಾಯತ ಸೇರಿದಂತೆ ವರ್ಗದ ಜನರಿಗೆ ದ್ರೋಹ ಬಗೆದಿದೆ.
ಬೊಮ್ಮಾಯಿ ಅವರ ಸರ್ಕಾರ ಭಾರತದಲ್ಲಿ ಹಾಗೂ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇದು 40% ಕಮಿಷನ್, ಪೇಸಿಎಂ ಸರ್ಕಾರವಾಗಿದೆ. ಬೊಮ್ಮಾಯಿ ಅವರ ಸರ್ಕಾರ ಪ್ರತಿಯೊಂದರಲ್ಲೂ ಲಂಚ, ಲಂಚ, ಲಂಚ ಎನ್ನುತ್ತದೆ. ಈ ಸರ್ಕಾರ ಮಾತ್ರ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರದ ವಿರುದ್ಧ 40% ಕಮಿಷನ್ ವಿಚಾರವಾಗಿ ದೂರು ನೀಡಿದಾಗ ಪ್ರಧಾನಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದು ಯಾಕೆ?
ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರು ಬಿಜೆಪಿ ಮಂತ್ರಿಗೆ ಲಂಚ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡ. ಆದರೂ ಕೂಡ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಮೌನವಾದರು. ತುಮಕೂರಿನಲ್ಲಿ ಗುತ್ತಿಗೆದಾರ ರಾಜೇಂದ್ರ, ಬೆಂಗಳೂರಿನಲ್ಲಿ ಗುತ್ತಿಗೆದಾರ ಪ್ರಶಾಂತ್ ಅವರು ಕೂಡ ಭ್ರಷ್ಟಾಚಾರ ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡರೂ ಬಿಜೆಪಿ ಪ್ರಮುಖ ನಾಯಕರು ಬಾಯಿ ಬಿಡಲಿಲ್ಲ. ಈ ಸರ್ಕಾರ ಮಠಗಳಿಗೆ ನೀಡುವ ಅನುದಾನದಲ್ಲಿ 30% ಕಮಿಷನ್ ಪಡೆಯಲಾಗುತ್ತಿದೆ ಎಂದು ಸ್ವಾಮೀಜಿಗಳು ಹೇಳಿದರೂ ಮೋದಿ ಅವರು ಮಾತನಾಡಲಿಲ್ಲ.
13 ಶಾಲೆಗಳ ಸಂಘಟನೆ ರೂಪ್ಸಾ ಶಿಕ್ಷಮ ಲಾಖೆಯಲ್ಲಿನ 40% ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಮೋದಿ ಮೌನವಾಗಿಯೇ ಉಳಿದರು. ಗುತ್ತಿಗೆದಾರರು ಬಿಜೆಪಿ ಶಾಸಕ 90 ಲಕ್ಷ ಲಂಚ ಪಡೆದಿರುವ ಬಗ್ಗೆ ಆಡಿಯೋ ಬಿಡುಗಡೆ ಮಾಡಿದರೂ ಮೋದಿ ಮಾತನಾಡುತ್ತಿಲ್ಲ ಯಾಕೆ.
ಇಂದು ಜ.26 ಗಣರಾಜ್ಯೋತ್ಸವ ದಿನ. ಸಮಾಜದಲ್ಲಿ ಎಲ್ಲ ವರ್ಗದ ಜನರು ಸಮಾನರು ಎಂಬ ತ್ವತ್ವ ಸಾರುವ ಸಂವಿಧಾನವನ್ನು ಜಾರಿ ಮಾಡಿದ ದಿನ. ಗುತ್ತಿಗೆದಾರರ ಸಂಘದ ಬಳಿ 4 ಮಂತ್ರಿಗಳು, 17 ಬಿಜೆಪಿ ಶಾಸಕರು 40% ಕಮಿಷನ್ ಕೇಳುವ ಬಗ್ಗೆ ಆಡಿಯೋ ದಾಖಲೆಗಳಿವೆ ಎಂದು ಹೇಳಿದರೂ ಮೋದಿ ಅವರು ಜಾಣಮೌನವಾಗಿರುವುದೇಕೆ? ಪಿಎಸ್ಐ ಹುದ್ದೆಯನ್ನು 80 ಲಕ್ಷಕ್ಕೆ, ಸಹಾಯಕ ಪ್ರಾಧ್ಯಾಪಕ ಹುದ್ದೆ 40 ಲಕ್ಷಕ್ಕೆ, ಜೆಇಇ ಹುದ್ದೆ 24 ಲಕ್ಷಕ್ಕೆ, ಜಿಲ್ಲಾ ಸಹಕಾರಿ ಬ್ಯಾಂಕ್, ಸಬ್ ರಿಜಿಸ್ಟ್ರಾರ್ ಹುದ್ದೆಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ. ಆದರೂ ಭ್ರಷ್ಟಾಚಾರ ವಿರುದ್ಧ ಯಾವುದೇ ಕ್ರಮವಿಲ್ಲ ಯಾಕೆ?
ಈ ಸರ್ಕಾರವನ್ನು ರೌಡಿ, ಗೂಂಡಾಗಳು ನಡೆಸುತ್ತಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಸುವ ಸ್ಯಂಟ್ರೋ ರವಿ ಯಾವ ಪೊಲೀಸ್ ಅಧಿಕಾರಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನಿರ್ಧರಿಸುವುದಾದರೆ, ಈ ಸರ್ಕಾರ ಹೇಗೆ ನಡೆಸಲು ಸಾಧ್ಯ? ಬೆತ್ತನಗೆರೆ ಶಂಕರ, ಸೈಲೆಂಟ್ ಸುನಿಲ, ಫೈಟರ್ ರವಿಯಂತಹ ರೌಡಿಗಳು ಬಿಜೆಪಿ ಸೇರುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿವೇಶನ ವಿಚಾರವಾಗಿ ಮಂತ್ರಿಗಳಿಗೆ ಪ್ರಸ್ನೆ ಮಾಡಿದಾಗ ಆಕೆಯ ಕಪಾಳಕ್ಕೆ ಹೊಡೆಯಲಾಗಿದೆ. ಆಕ್ಸಿಜನ್ ಇಲ್ಲದೆ ಬೇಜವಾಬ್ದಾರಿತನದಿಂದ ಈ ಜಿಲ್ಲೆಯ 36 ಅಮಾಯಕ ಜೀವಗಳನ್ನು ಬಲಿ ಕೊಟ್ಟಿರುವ ಈ ಸರ್ಕಾರದ ಪಾಪವನ್ನು ದೇವರು ಕೂಡ ಕ್ಷಮಿಸುವುದಿಲ್ಲ. ಆಕ್ಸಿಜನ್ ಇಲ್ಲದೆ ಜನ ಸಾಯುವಾಗ ಬಿಜೆಪಿ ನಾಯಕರು ಹಾಗೂ ಅವರ ಮಕ್ಕಳು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದರು. ಇದು ಬಿಜೆಪಿಯ ನಿಜವಾದ ಬಣ್ಣ.
ಹೀಗಾಗಿ ಬಿಜೆಪಿ ಸರ್ಕಾರವನ್ನು ಸೋಲಿಸಿ, ಅವರ ಸೊಕ್ಕು ಮುರಿಯಬೇಕು. ಚಾಮರಾಜನಗರ ಹಾಗೂ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಇಂದು ಸಂವಿಧಾನ ಜಾರಿಯಾದ ದಿನ, ಬಾಬಾ ಸಾಹೇವ್ ಅಂಬೇಡ್ಕರ್ ಅವರು ಈ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. 1949 ನವೆಂಬರ್ 25ರಂದು ಸಂವಿಧಾನ ಸಭೆಯನ್ನು ಉದ್ದೇಶಿಸಿ ಅಂಬೇಡ್ಕರರು ಮಾಡಿದ ಭಾಷಣ ಐತಿಹಾಸಿಕವಾದುದು. “ಜನವರಿ 26, 1950ರಂದು ಸಂವಿಧಾನ ಜಾರಿಗೆ ಬರುತ್ತದೆ, ನಾವು ಸಂವಿಧಾನದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಕೊಟ್ಟಿದ್ದೇವೆ, ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಇದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇದೇ ರೀತಿಯ ಸಮಾನತೆ ಇಲ್ಲ, ಈ ತಾರತಮ್ಯವನ್ನು ಹೋಗಲಾಡಿಸುವುದು ಅಧಿಕಾರಕ್ಕೆ ಬರುವ ಸರ್ಕಾರಗಳ ಕರ್ತವ್ಯ, ಒಂದು ವೇಳೆ ಈ ತಾರತಮ್ಯವನ್ನು ಹೋಗಲಾಡಿಸದೇ ಹೋದರೆ ಶೋಷಣೆಗೆ ಒಳಗಾದ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಹಾಗಾಗಿ ಇಂದು ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುವ ಸಮಸಮಾಜ ನಿರ್ಮಾಣದ ಅಗತ್ಯವಿದೆ. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ 74ನೇ ಗಣರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸುತ್ತೇನೆ.
ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಸಮಸಮಾಜ ನಿರ್ಮಾಣ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಈ ಸಮಾನತೆಗೆ ವಿರುದ್ಧವಾದುದ್ದು. ಅಸಮಾನತೆ ಇದ್ದರೆ ಜನರ ಶೋಷಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ. ಇದಕ್ಕೆ ಉದಾಹರಣೆ ಎಂದರೆ ನರೇಂದ್ರ ಮೋದಿ ಅವರು ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು ಇಲ್ಲದಿರುವುದು.
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಎಷ್ಟು ಮಿತಿಮೀರಿದೆ ಎಂದರೆ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು 40% ಕಮಿಷನ್ ಹಾವಳಿಯಿಂದ ನಮ್ಮನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಧಾನಿಯವರು ಯಾವ ಕ್ರಮವನ್ನು ಕೈಗೊಂಡಿಲ್ಲ ಕಾರಣ ಅವರು ಕೂಡ ಈ ಭ್ರಷ್ಟಾಚಾರದಲ್ಲಿ ಷಾಮೀಲಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ನಾವು “ಬಿಜೆಪಿ ಸರ್ಕಾರದ ಪಾಪದ ಪುರಾಣ” ಎಂಬ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಬಿಜೆಪಿಯವರು ಉತ್ತರ ನೀಡಲಿ, ಈ ಕರ್ಮಕಾಂಡಗಳ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಬೊಮ್ಮಾಯಿ ಅವರೇ. ಕಾಂಗ್ರೆಸ್ ಪಕ್ಷವನ್ನು ಭ್ರಷ್ಟಾಚಾರದ ಗಂಗೋತ್ರಿ ಎನ್ನುವ ಬೊಮ್ಮಾಯಿ ಅವರು ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾದರೂ ಯಾವ ತನಿಖೆ ನಡೆಸಿರಲಿಲ್ಲ, ಈಗ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹೊರಬರುತ್ತಿರುವುದರಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.
ನಮ್ಮ ಸರ್ಕಾರದ ಮೇಲೆ ಬಂದಿದ್ದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಅದಕ್ಕೆ ಹೆದರಿರಲಿಲ್ಲ. ಡಿವೈಎಸ್‌ಪಿ ಗಣಪತಿ, ಡಿ.ಕೆ ರವಿ ಅವರ ಸಾವು, ಪರೇಶ್ ಮೇಸ್ತಾ ಸಾವು, ಒಂದಂಕಿ ಲಾಟರಿ ಇವುಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಅವುಗಳ ಬಿ ರಿಪೋರ್ಟ್ ಬಂದು ಬಿಜೆಪಿ ಆರೋಪಗಳು ಸುಳ್ಳು ಎಂದು ಈಗ ಸಾಬೀತಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಲಿ. ಇದಕ್ಕೆ ಉತ್ತರ ಕೊಡಲಾಗದೆ ಸುಳ್ಳಿನ ಸಾಮ್ರಾಟ ಸುಧಾಕರ್ ಅವರ ಕೈಲಿ ಉತ್ತರ ಕೊಡಿಸುತ್ತಾರೆ. ಈ ಸುಧಾಕರ ಅಲಿಬಾಬಾ ಮತ್ತು 40 ಜನ ಕಳ್ಳರ ತಂಡದ ಸದಸ್ಯ. ತನ್ನನ್ನು ತಾನು ಮಾರಿಕೊಂಡು ನಮ್ಮ ಪಕ್ಷ ಬಿಟ್ಟು ಹೋದ ಆಸಾಮಿ ಆತ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 36 ಮಂದಿ ಸಾವಿಗೀಡಾದಾಗ ಸುಧಾಕರ್ ಮತ್ತು ಸುರೇಶ್ ಕುಮಾರ್ ಅವರು ಬಂದಿದ್ದರು. ಈ ದುರಂತದಲ್ಲಿ ಸತ್ತವರು ಮೂರೇ ಜನ ಎಂದು ಸುಳ್ಳು ಹೇಳಿದ್ರು. ಹೀಗೆ ಹೆಣದ ಮೇಲೆ ರಾಜಕೀಯ ಮಾಡುವ ದುಷ್ಟರು ಅವರು. ನಮ್ಮ ಪಕ್ಷದ ಮುಖಂಡರೆಲ್ಲ ಜಿಲ್ಲಾಸ್ಪತ್ರೆಗೆ ಹೋಗಿ, ವೈದ್ಯರ ಜೊತೆ ಸಭೆ ಮಾಡಿದಾಗ ಆಮ್ಲಜನಕ ಇಲ್ಲದೆ ಸತ್ತವರು 36 ಜನ ಎಂಬುದನ್ನು ಅವರು ಒಪ್ಪಿಕೊಂಡರು. ಡಿ.ಕೆ ಶಿವಕುಮಾರ್ ಅವರು ರಾತ್ರಿಯಿಡಿ ನಿದ್ದೆ ಬಿಟ್ಟು ಪರಿಹಾರದ ಹಣ ವಿತರಣೆ ಮಾಡಿದರು. ಆದರೆ ಸರ್ಕಾರ ಈ ವರೆಗೆ ಸತ್ತವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಕೋರ್ಟ್ ಆದೇಶ ಆದಮೇಲೆ ಕೆಲವರಿಗೆ ಮಾತ್ರ ಪರಿಹಾರ ನೀಡಿದ್ದಾರೆ, ಇನ್ನುಳಿದವರಿಗೆ ಕೊಟ್ಟಿಲ್ಲ.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್,ಸಿ,ಪಿ/ಟಿ,ಎಸ್,ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ಈ ಯೋಜನೆಗೆ 88,000 ಕೋಟಿ ರೂ. ಖರ್ಚು ಮಾಡಿದ್ದೇವೆ. ಮೋದಿ ಸರ್ಕಾರ ಅಲ್ಪಸಂಖ್ಯಾತರು, ದಲಿತರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಮನ್ ಕಿ ಬಾತ್ ನಲ್ಲಿ ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮೋದಿ ಒಂದಾದರೂ ಮಾತನಾಡುತ್ತಾರ?
ನಾನು ಮುಖ್ಯಮಂತ್ರಿಯಾಗಿದ್ದಾಗ 50 ಲಕ್ಷದ ವರೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಕೆಲಸ ಮಾಡಿದ್ದೆ. ಈ ಕೆಲಸವನ್ನು ದೇಶದಲ್ಲಿ ಬೇರೆ ಯಾವುದಾದರೂ ಸರ್ಕಾರ ಮಾಡಿದೆಯಾ? ನಾವು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ರಾಜ್ಯದ ಪ್ರತಿ ಬಡ ಕುಟುಂಬದ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ನುಡಿದಂತೆ ನಡೆದವರು. ಶರಣರು ಎಂದರೆ ನುಡಿದಂತೆ ನಡೆಯುವ ಜನ, ಹಾಗಾಗಿ ನಾನು ಬಸವ ಜಯಂತಿ ದಿನದಂದೇ ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ವಿಧಾನಸೌಧದ ಕ್ಯಾಬಿನೆಟ್ ಗೆ ಹಾಲ್ ಗೆ ಹೋಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 5 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ, ಈಗಲೂ ಅಷ್ಟೆ ನಾವು ನೀಡುವ ಅಷ್ಟೂ ಭರವಸೆಗಳನ್ನು ಈಡೇರಿಸುತ್ತೇವೆ.
ನಾವು ಅಧಿಕಾರಕ್ಕೆ ಬಂದ ನಂತರ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ. ಸಾಮಾನ್ಯ ಕುಟುಂಬವೊಂದು 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ, ಹಾಗಾಗಿ ನೀವು ಒಂದು ಪೈಸೆ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿರುವುದಿಲ್ಲ. ಬಿಜೆಪಿಯವರು ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿ ಬಡವರು ಬದುಕದಂತೆ ಮಾಡಿದ್ದಾರೆ. ಹಾಗಾಗಿ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುತ್ತೇವೆ.
ಬಿಜೆಪಿ ಅವರಿಂದ ಜನ ಇಂದು ಆತಂಕದಲ್ಲಿ ದಿನ ದೂಡಬೇಕಾದ ಸ್ಥಿತಿ ಇದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಮಾಡಿ ಒಡೆದಿರುವ ಜನರ ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಹನೂರಿನಲ್ಲಿ ನರೇಂದ್ರ ಅವರು ಗೆದ್ದರೆ ಅದು ನಾನು ಗೆದ್ದಂತೆ, ಕಾಂಗ್ರೆಸ್ ಪಕ್ಷ ಗೆದ್ದಂತೆ, ಸೋನಿಯಾ ಗಾಂಧಿ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಗೆದ್ದಂತೆ.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಚಾಮರಾಜನಗರ ಜಿಲ್ಲೆಗೆ 10,000 ಕೋಟಿ ರೂ. ಅನುದಾನ ನೀಡಿ ರಸ್ತೆ, ಚರಂಡಿ, ಆಸ್ಪತ್ರೆ, ಶಾಲೆಗಳನ್ನು ನಿರ್ಮಾಣ ಮಾಡಿದ್ದೆವು. ಹನೂರಿಗೆ ಕುಡಿಯುವ ನೀರು ಕೊಟ್ಟಿದ್ದು ನಮ್ಮ ಸರ್ಕಾರ. 78 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದು ನಾವು. ಮಹದೇವ ಪ್ರಸಾದ್ ಅವರು ಇಂದು ನಮ್ಮೊಂದಿಗಿಲ್ಲ, ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಚಾಮರಾಜನಗರದ ಅಭಿವೃದ್ಧಿಗೆ ಅವರ ಕೊಡುಗೆಯೂ ಇದೆ.
ಮಹದೇಶ್ವರ ಬೆಟ್ಟಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಮ್ಮ ಸರ್ಕಾರ. ಚಾಮರಾಜನಗರಕ್ಕೆ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಿದ್ದು ನಾವು, ಕೃಷಿ ಕಾಲೇಜ್, ಕಾನೂನು ಕಾಲೇಜು, ಮೊರಾರ್ಜಿ ಶಾಲೆಗಳನ್ನು ನೀಡಿದವರು ನಾವು. 200ಕ್ಕೂ ಹೆಚ್ಚು ಭವನಗಳನ್ನು ನಿರ್ಮಾಣ ಮಾಡಿದ್ದು, 500 ಕೋಟಿ ಹಣ ನೀಡಿ ರಸ್ತೆ ಅಭಿವೃದ್ಧಿ ಮಾಡಿದ್ದು, 3.5 ಕೋಟಿ ಹಣ ಕೊಟ್ಟು ಚಾಮರಾಜೇಶ್ವರ ದೇವಾಲಯದ ರಥ ನಿರ್ಮಾಣ ಮಾಡಿಕೊಟ್ಟಿದ್ದು, ನಳಂದ ಬುದ್ಧ ವಿಹಾರಕ್ಕೆ 25 ಎಕರೆ ಜಮೀನು ನೀಡಿದ್ದು, ಹನೂರಿಗೆ 250 ಕೋಟಿ ನೀಡಿ ನೀರಿನ ವ್ಯವಸ್ಥೆ ಮಾಡಿದ್ದು, 1400 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದ್ದು, ಭಗೀರಥ ಜಯಂತಿ ಆರಂಭ ಮಾಡಿದ್ದು, ಉಪ್ಪಾರ ಅಭಿವೃದ್ಧಿ ನಿಗಮ ಮಾಡಿದ್ದು ನಮ್ಮ ಸರ್ಕಾರ. ಉಪ್ಪಾರರನ್ನು ಎಸ್,ಟಿ ಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ಮಾಡಲು ಆದೇಶ ನೀಡಿದ್ದು ನಾವು, ಮೋದಿ ಅವರು ಬಂದು 9 ವರ್ಷ ಆಯಿತು, ಚಾಮರಾಜನಗರಕ್ಕೆ ಅವರ ಕೊಡುಗೆ ಏನು? ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ಇದ್ದಾಗ 200 ಕೋಟಿ ಅನುದಾನ ನೀಡಿದ್ದೆ, ಈಗ ಬಿಜೆಪಿ 80 ಕೋಟಿ ರೂ. ನೀಡಿದೆ.
ಹೀಗೆ ಬಿಜೆಪಿ ಸರ್ಕಾರ ಸಮಾಜದ ಯಾವ ಸಮುದಾಯದ ಜನರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಈ ರಾಜ್ಯ ಉಳಿಯಬೇಕು ಎನ್ನುವುದಾರೆ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ ಜನಪರವಾದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಕೆಲಸ ತಾವು ಮಾಡಬೇಕು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:
ಕಳೆದ ನಾಲ್ಕು ವರ್ಷಗಳಿಂಗ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ.
ಇಂದು ರಾಷ್ಟ್ರದ ಪಾಲಿಗೆ ಪವಿತ್ರವಾದ ಗಣರಾಜ್ಯೋತ್ಸವ ದಿನದಂದು ಮೈಸೂರು ಹಾಗೂ ಚಾಮರಾಜನಗರದಲ್ಲಿ ಈ ಯಾತ್ರೆ ನಡೆಯುತ್ತಿದೆ. ಇಲ್ಲಿ ಪ್ರಬುದ್ಧ, ಪ್ರಜ್ಞಾವಂತ ನಾಗರೀಕರಿದ್ದಾರೆ. ಇಂದು ದೇಶದ ಸಂವಿಧಾನ ಜಾರಿಯಾದ 74ನೇ ಗಣತಂತ್ರ ದಿನ ಆಚರಿಸುತ್ತಿದ್ದೇವೆ. ಗಣತಂತ್ರ ಎಂದರೆ ಧ್ವಜಾರೋಹಣ ಮಡಿ ಮನೆಗೋಗುವುದಷ್ಟೇ ಅಲ್ಲ. ದೇಶದಲ್ಲಿ ಸಾರ್ವಭೌಮ, ಜಾತ್ಯಾತೀತ, ಸಮಾಜವಾದಿ ಗಣತಂತ್ರವನ್ನು ಸ್ವೀಕರಿಸಿ ದೇಶದ ಆಗುಹೋಗುಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಹಿಂದೆ ದೇಶದಲ್ಲಿ 562 ಮಹಾರಾಜರು ಆಳ್ವಿಕೆ ಮಾಡುತ್ತಿದ್ದರು. ಆಗ ಸಂವಿಧಾನ ಇರಲಿಲ್ಲ. ರಾಜ ಹೇಳಿದ್ದೇ ಸಂವಿಧಾನ, ಶಾನುಬೋಗ ಹೇಳಿದ್ದೇ ಶಾಸನವಾಗಿತ್ತು. ಪಟೇಲ ನಡೆಸಿದ್ದೇ ಕಾನೂನಾಗಿತ್ತು. ಆ ಸಂದರ್ಭದಲ್ಲಿ ಬಡತನ, ಹಸಿವು, ದೌರ್ಜನ್ಯ, ಗುಲಾಮಗಿರಿ ಹೆಚ್ಚಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಬ್ರಿಟೀಷರ ವಿರುದ್ಧ ಮಾತ್ರವಲ್ಲದೇ, ಈ ಎಲ್ಲ ದೌರ್ಜನ್ಯದ ವಿರುದ್ಧವೂ ಹೋರಾಡಿ, ತ್ಯಾಗ ಬಲಿದಾನ ಮಾಡಿ ವಿಶ್ವದ ಅತ್ಯಂತ ಶ್ರೇಷ್ ಸಂವಿಧಾನ ನೀಡಿದೆ. ಅಂಬೇಡ್ಕರ್ ಅವರು ದೇಶದಲ್ಲಿ ಪ್ರತಿಯೊಬ್ಬನು ಸಮಾನ, ಎಲ್ಲರಿಗೂ ಸಮಾನವಾದ ಹಕ್ಕು ನೀಡಲು ಸಂವಿಧಾನ ಕೊಟ್ಟರು.
ಆದರೆ ಬಿಜೆಪಿ ಬಂದ ನಂತರ ಸಂವಿಧಾನ ಸ್ಥಿತಿಗತಿ ಏನಾಗಿದೆ ಯೋಚಿಸಬೇಕು. ಬಿಜೆಪಿ ಬಂದ ನಂತರ ರಾಜ್ಯದಲ್ಲಿ ಬಸವಣ್ಣ, ಕುವೆಂಪು, ಕನಕದಾಸರು, ಎಲ್ಲರೂ ಸಮಾನತೆ ಭಾವೈಕ್ಯತೆ ಸಾರಿದ್ದರು. ಆದರೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಈ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಾನೆ. ಮುಂದಿನ ವರ್ಷ ಸಂವಿಧಾನ ಜಾರಿಗೊಳಿಸಿ 75 ವರ್ಷವಾಗುತ್ತದೆ. ಈ ಸಂವಿಧಾನ ಬೇಕೋ ಬೇಡವೋ ಚಿಂತನೆ ಮಾಡಬಬೇಕಿದೆ. ಬಿಜೆಪಿಗೆ ಹಾಗೂ ಆರ್ ಎಸ್ ಎಸ್ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. 2015ರಲ್ಲಿ ಮೋಹನ್ ಭಾಗವತ್ ಅವರು ಮೀಸಲಾತಿ ತೆಗೆಯಲು ಸಂವಿಧಾನ ಬದಲಿಸಬೇಕು ಎಂದು ಹೇಳಿದ್ದರು. ಮೀಸಲಾತಿ ಇರುವುದು ಎಲ್ಲರೂ ಸಮಾನರು ಎಂದು ತಿಳಿಸಲು ಇದೆ. ಸಂವಿಧಾನ ಬದಲಿಸಬೇಕು ಎನ್ನುವ ಜನ, ನಮ್ಮಲ್ಲಿ ತಾರತಮ್ಯ, ಅಸಮಾನತೆ ಅಸ್ಪೃಶ್ಯತೆ ಇರಬೇಕು ಎಂದು ಸಂವಿಧಾನ ಬದಲಿಸಲು ಹೊರಟಿದ್ದಾರೆ.
75 ವರ್ಷಗಳಲ್ಲಿ ದುರ್ಬಲ ವರ್ಗದವರು ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್ ನಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರೆ, ಅದು ಸಂವಿಧಾನದ ಚೌಕಟ್ಟಿನಲ್ಲಿ ಆಗಿದ್ದಾರೆ ಹೊರತು ಬೇರೆಯವರ ಮುಲಾಜಿನಲ್ಲಿ ಅಲ್ಲ. ಈ ರಾಷ್ಟ್ರದ ಖಜಾನೆ ತುಂಬಿಸುವವರು ದುರ್ಬಲ, ಕಾರ್ಮಿಕ ವರ್ಗದವರು. ಜಿಎಸ್ಟಿ ಬಂದ ನಂತರ ಭಿಕ್ಷಕನೂ ತೆರಿಗೆ ನೀಡಬೇಕಿದೆ. ಈ ತೆರಿಗೆ ಹಣ ಲೋಕಕಲ್ಯಾಣ, ಜನ ಕಲ್ಯಾಣಕ್ಕೆ ಆಗಬೇಕು. ಇದು ಹೇಗೆ ಎಂದು ಐದು ವರ್ಷಕ್ಕೊಮ್ಮೆ ನೀವು ಆರಿಸುತ್ತೀರಿ. ಈ ರೀತಿ ಆರಿಸುವಾಗ ನೀವು ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೇ ಅಥವಾ ಬೇಡವೇ ಎಂಬ ತೀರ್ಮಾನ ಮಾಡಿ ಆಯ್ಕೆ ಮಾಡಿ. ಅಂಬೇಡ್ಕರ್, ಮಾಯಾವತಿ ಹೆಸರಲ್ಲಿ ಚುನಾವಣೆ ಗೆದ್ದು, ತಮ್ಮಸಿದ್ಧಾಂತ ಮಾರಿಕೊಂಡು ಬಿಜೆಪಿ ಸೇರಿದ್ದಾರೆ. ಆರ್ ಎಸ್ಎಸ್ ನವರು ಮಾತಿಗೆ ಅಂಬೇಡ್ಕರ್ ಕೃತಿಗೆ ಸಾರ್ವಕರ್ ನಂತೆ ನಡೆದುಕೊಳ್ಳುತ್ತಾರೆ. ಸಾರ್ವಕರ್ ಅವರ ಹಿಂದುತ್ವ ತಾರತಮ್ಯವನ್ನು ಎತ್ತಿ ಹಿಡಿಯುವ, ಜಾತ್ಯಾತೀತವಾದಕ್ಕೆ ಒತ್ತು ನೀಡುವ ಸಿದ್ಧಾಂತ. ಗಾಂಧಿ ಹಾಗೂ ವಿವೇಕಾನಂದರ ಹಿಂದುತ್ವ, ಸಮಾನತೆ, ಜಾತ್ಯಾತೀತ ತತ್ವದ ಮೇಲೆ ನಿಂತಿದೆ.
ಈ ಹಿಂದೆ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಯಾವೊಬ್ಬ ಮುಖ್ಯಮಂತ್ರಿ ಬರುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯನವರು ಧೈರ್ಯ ಮಾಡಿ ಈ ಜಿಲ್ಲೆಗೆ 10-15 ಬಾರಿ ಭೇಟಿ ನೀಡಿ ಹೆಚ್ಚಿನ ಅನುದಾನ ನೀಡಿ ಈ ಜಿಲ್ಲೆಯ ಕಳಂಕ ತೆಗೆದಿದ್ದಾರೆ. ಮೂಢನಂಬಿಕೆ ಪ್ರಧಾನ ಬಿಜೆಪಿಯಲ್ಲಿ ಏನುಬೇಕಾದರೂ ಆಗುತ್ತದೆ. ಈ ಜಿಲ್ಲೆ ಸೂತಕದ ಪಟ್ಟಿ ಕಟ್ಟಿಸಿಕೊಂಡಿತ್ತು. ಕಾಂಗ್ರೆಸ್ ಅದನ್ನು ಕಿತ್ತುಹಾಕಿ 10-11 ಸಾವಿರ ಕೋಟಿ ವೆಚ್ಚ ಮಾಡಿದೆ. ಬಿಜೆಪಿ ಜನಪರ ಕಾಯ್ಕ್ರಮದ ಬಗ್ಗೆ ಕೇಳಿ, ಅವರಿಗೆ ಉತ್ತರ ನೀಡಲು ಆಗುವುದಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ತಮ್ಮ ಕಾರ್ಯಕರ್ತರಿಗೆ ನೀರು, ಚರಂಡಿ, ರಸ್ತೆ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಘರ್ ವಾಪಸಿ ಬಗ್ಗೆ ಮಾತನಾಡಿ ಎಂದು ಹೇಳುತ್ತಾರೆ. ಮನಮೋಹನ್ ಸಿಂಗ್ ಅವರ ಕಾಲಗಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನೀಡಲು ನರೇಗಾ ಕಾಯ್ದೆ ಜಾರಿ ಮಾಡಿದೆವು. ಸರ್ವಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು, ಆರೋಗ್ಯ ಹಕ್ಕು, ಆಹಾರ ಭದ್ರತಾ ಕಾಯ್ದೆ ಮಾಡಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಕಾರ್ಯಕ್ರಮ ಕೊಟ್ಟರು. ಬಿಜೆಪಿಯವರು ಯಾವುದಾದರೂ ಒಂದು ಕಾರ್ಯಕ್ರಮ ಬಡವರಿಗೆ ನೀಡಿದ್ದಾರಾ? ಅಲ್ಪಸಂಖ್ಯಾತರು, ಹಿಂದುಳಿದವರಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದ್ದಾರೆ. ಬಲಾಢ್ಯ ಸಮುದಾಯದವರಿಗೆ ಕೋಟ್ಯಂತರ ರೂ. ಅನುದಾನ ನೀಡಿದ್ದಾರೆ. ಅವರಿಗೂ ನೀಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ಪಾಲು ನಮಗೆ ನೀಡಬೇಕು.
ಇನ್ನು ಲೋಕಸಭೆ ಸದಸ್ಯೆ ಭಯೋತ್ಪಾದಕಿ ಶಿವಮೊಗ್ಗಕ್ಕೆ ಬಂದು ನಿಮ್ಮ ಮನೆಯಲ್ಲಿ ಶಸ್ತ್ರಾಸ್ತ್ ಸಾಣೆ ಮಾಡಿಟ್ಟುಕೊಳ್ಳಿ ಎಂದು ಹೇಳುತ್ತಾಳೆ. ಕಾಂಗ್ರೆಸ್ ಪಕ್ಷ ನಿಮ್ಮ ಮಕ್ಕಳ ಕೈಗೆ ಪೆನ್ನು ಪೇಪರ್ ಕೊಟ್ಟು ವಿದ್ಯಾವಂತರನ್ನಾಗಿ ಮಾಡಿತ್ತು,ಬಿಜೆಪಿ ನಿಮ್ಮ ಮಕ್ಕಳ ಕೈಗೆ ಶಸ್ತ್ರಾಸ್ತ್ರ ನೀಡಬೇಕಾ ಯೋಚಿಸಿ. ಈ ಚುನಾವಣೆ ವೇದಿಕೆ ಮೇಲಿರುವ ನಾಯಕರ ಭವಿಷ್ಯವಲ್ಲ. ಇದು ನಿಮ್ಮ ಭವಿಷ್ಯ ಬರೆದುಕೊಳ್ಳುವ ಅವಕಾಶ. ಕೋವಿಡ್ ಕಾಲದಲ್ಲಿ ಆಕ್ಸಿಜನ್ ನಿಂದ ಸತ್ತ ಕುಟುಂಬದ ಸದಸ್ಯರ ಜತೆ ರಾಹುಲ್ ಗಾಂಧಿ ಭಾರತ ಜೋಡೋ ಸಂದರ್ಭದಲ್ಲಿ ಭೇಟಿ ಮಾಡಿ ಮಾತನಾಡಿದರು. ಅವರ ಸ್ಥಿತಿ ನೋಡಿದಾಗ ಆ ಸಭೆಯಲ್ಲಿ ಪ್ರತಿಯೊಬ್ಬರ ಕಣ್ಣಲ್ಲಿ ನೀರಿತ್ತು. ಇವರ ನೋವು ಕೇಳಲು ಬಿಜೆಪಿಯ ಯಾವುದಾದರೂ ನಾಯಕರು ಬಂದಿದ್ದಾರಾ ಕೇಳಿ. ಜನರ ಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್. ನೀವು ನಿಮ್ಮ ಮತವನ್ನು ಜಾತಿ ಧರ್ಮದ ಆಧಾರದ ಮೇಲೆ ಚಲಾವಣೆ ಮಾಡಬೇಡಿ. ನಿಮ್ಮ ಮಕ್ಕಳು ಹಾಗೂ ರಾಜ್ಯದ ಭವಿಷ್ಯದ ಬಗ್ಗೆ ಆಲೋಚಿಸಿ ಮತದಾನ ಮಾಡಿ. ಯಾವುದೇ ಕಾರಣಕ್ಕೆ ಮೂಢನಂಬಿಕೆ, ಸಂವಿಧಾನ ವಿರೋಧಿ, ಮತಾಂಧರಿಗೆ ಮತ ನೀಡಬೇಡಿ.