IMG 20200626 WA0084

ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆ

STATE Genaral

**ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಾಕೀತು; ವಿಡಿಯೋ ಸಂವಾದದಲ್ಲಿ ಅಧಿಕಾರಿಗಳಿಗೆ ತರಾಟೆ.

ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆ.

ಯೋಜಿತ ಕಾರ್ಯ ನಿರ್ವಹಣೆಯಿಂದ ಕೋವಿಡ್‌ ನಿಯಂತ್ರಣ ಸಾಧ್ಯ : ಸಚಿವ ಸುಧಾಕರ್‌*

ಬೆಂಗಳೂರು : ಮಾನವ ಸಂಪನ್ಮೂಲ ಮತ್ತು ಲಭ್ಯ ಸೌಲಭ್ಯಗಳನ್ನು ಯೋಜಿತ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕೋವಿಡ್‌ ನಿಯಂತ್ರಣದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆರೋಗ್ಯ, ವೈದ್ಯಶಿಕ್ಷಣ, ಬಿಬಿಎಂಪಿ ಹಿರಿಯ ಅಧಿಕಾರಿಗಳು, ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿದೇ೯ಕರು ಹಾಗೂ ಪರಿಣಿತರ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿ ಈ ಸೂಚನೆ ನೀಡಿದರು.
ದಾಖಲಾಗುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಶುಶ್ರೂಷ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಐಸಿಯು ಹಾಗೂ ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಲ್ಲಿ ಮೂರು ರೋಗಿಗಳಿಗೆ ಒಬ್ಬ ನಸ್‌೯ ಕಡ್ಡಾಯವಾಗಿ ಇರಬೇಕು. ಕೊರತೆಯಿರುವ ಕಡೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಬೇಕು. ನೇಮಕ ಆಗುವತನಕ ಸಕಾ೯ರಿ ಮತ್ತು ಖಾಸಗಿ ಕಾಲೇಜುಗಳ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ನಿಯೋಜಿಸುವಂತೆ ಸೂಚಿಸಿದರು.
ಐಸಿಯು ಮತ್ತು ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಿಗೆ ತರಬೇತಿ ಪಡೆದವರು ಬೇಕು. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಜನರಲ್‌ ವಾಡು೯ಗಳಲ್ಲಿರುವ ತರಬೇತಿ ಪಡೆದವರನ್ನು ಅಲ್ಲಿಗೆ ವಗಾ೯ಯಿಸಿ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ಸೆಂಟರ್‌ಗಳಲ್ಲಿ ಬಳಸಬಹುದು. ವೈದ್ಯರ ಕೊರತೆ ನಿವಾರಿಸಿಕೊಳ್ಳಲು ಆಯುಷ್‌ ಮತ್ತು ಪಿಜಿ ವಿದ್ಯಾಥಿ೯ಗಳನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಿ ಎಂದರು.
ನಿಗದಿಪಡಿಸಿ : ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಲು ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಹೊಣೆ ನೀಡಿ ಕತ೯ವ್ಯ ನಿವ೯ಹಿಸುವಂತೆ ನೋಡಿಕೊಳ್ಳಬೇಕು. ಒಂದು ವಾರದ ಊಟದ ಮೆನು ಸಿದ್ಧಪಡಿಸಿ ಅವರಿಗೆ ಕೊಡಬೇಕು. ಅದನ್ನು ಸಂಬಂಧಿಸಿದವರಿಗೆ ಮಾತ್ರವಲ್ಲದೆ ರೋಗಿಗೂ ಕೊಡ ಆ ಮಾಹಿತಿ ಸಿಗುವಂತಿರಬೇಕು ಎಂದು ತಾಕೀತು ಮಾಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಊಟ- ಸ್ವಚ್ಛತೆ ಸಹಿತ ಮೇಲ್ವಿಚಾರಣೆ ನೋಡಿಕೊಳ್ಳಲು ಹಿರಿಯ ಅಧಿಕಾರಿ ಸೋಮಣ್ಣ ಕಡಕೊಳ ಅವರನ್ನು ನೇಮಿಸಲಾಗಿದೆ. ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲೂ ಅದೇ ಕ್ರಮ ಅನುಸರಿಸಬೇಕು ಎಂದು ನಿದೇ೯ಶಕರಿಗೆ ಸೂಚನೆ ನೀಡಿದರು.
ವಿಕ್ಟೋರಿಯಾದಲ್ಲಿ ದಾಖಲಾಗಿ ಡಯಾಲಿಸಿಸ್‌ಗೆ ಒಳಪಡುವ ಕೊರೋನಾ ಸೋಂಕಿತರನ್ನು ಅಲ್ಲಿಯೇ ಇರುವ ನೆಫ್ರಾಲಜಿ ವಿಭಾಗಕ್ಕೆ ವಗಾ೯ಯಿಸಿ. ಇದರಿಂದ ವಿಕ್ಟೋರಿಯಾ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ರೋಗಿಗಳು ಮರಣ ಹೊಂದಿದಾಗ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪರಿಣಿತರ ಜತೆ ಹಂಚಿಕೊಂಡು ಕಾರಣಗಳನ್ನು ಅಧ್ಯಯನ ಮಾಡಿ ಲೋಪ ಮರುಕಳಿಸದಂತೆ ಎಚ್ಚರವಹಿಸಬೇಕು. ಮರಣ ಕಾರಣಗಳ ವಿಶ್ಲೇಷಣೆಗೆ ಪರಿಣಿತ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಸಚಿವರು ನಿದೇ೯ಶಕರಿಗೆ ಆದೇಶಿಸಿದರು.
ಸಂಪಕ೯ ಕಲ್ಪಿಸಿ : ದೇಶದಲ್ಲೇ ವಿನೂತನ ವ್ಯವಸ್ಥೆ ಎಂದೇ ಹೆಸರಾಗಿರುವ ಟೆಲಿ ಐಸಿಯು ವ್ಯವಸ್ಥೆಗೆ ನಗರದಲ್ಲೇ ಇರುವ ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗಳನ್ನು ಸೇಪ೯ಡೆ ಮಾಡದಿರುವುದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ತಕ್ಷಣವೇ ಸೇಪ೯ಡೆ ಮಾಡಿ. ಇದರಿಂದ ರೋಗಿಗಳ ಸ್ಥಿತಿಗತಿ ಅಭ್ಯಸಿಸಿ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗಿ ಅವರನ್ನು ಬದುಕಿಸಿಕೊಳ್ಳಬಹುದು ಎಂದರು.
ಫೀವರ್‌ ಕ್ಲಿನಿಕ್‌ಗಳಿಗೆ ಬರುವ ಐಎಲ್‌ಐ ಪ್ರಕರಣಗಳಲ್ಲಿ ಲಘು, ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಆರಂಭಿಕ ಹಂತದಲ್ಲೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಿ. ಇದರಿಂದ ಕೋವಿಡ್‌ ಆಸ್ಪತ್ರೆಗಳ ಮೇಲಿನ ಒತ್ತಡ ನಿವಾರಣೆ ಆಗಲಿದೆ ಎಂದು ಸಲಹೆ ನೀಡಿದರು.
ಏಕ ಗವಾಕ್ಷಿ ವ್ಯವಸ್ಥೆ : ತಕ್ಷಣ ಖಾಸಗಿ ಆಸ್ಪತ್ರೆಗಳಿಗೆ ಹಿರಿಯ ಅಧಿಕಾರಿಗಳ ತಂಡ ಕಳುಹಿಸಿ ನೀಡಲು ಸೂಚಿಸಿರುವ ಶೇಕಡಾ ಐವತ್ತರಷ್ಟು ಹಾಸಿಗೆಗಳ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಕಡ್ಡಾಯ ಮೀಸಲು ಇಡಲು ಆದೇಶ ನೀಡಬೇಕು. ಬಳಿಕ ಸಕಾ೯ರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಹಾಸಿಗೆಗಳು, ಐಸಿಯುಗಳ ನಿಖರ ಸಂಖ್ಯೆ ಇಟ್ಟುಕೊಂಡು ರೋಗಿಗಳನ್ನು ದಾಖಲು ಮಾಡಿಕೊಂಡು ಬರಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಹಿರಿಯ ಅಧಿಕಾರಿಯನ್ನು ಉಸ್ತುವಾರಿಗೆ ನಿಯೋಜಿಸಬೇಕು ಎಂದು ಸೂಚಿಸಿದರು.
IMG 20200626 WA0085

ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆಗೆ ಕ್ರಮ

ಹವಾಮಾನ ಬದಲಾವಣೆ ಹಾಗೂ ಇತರೆ ಕಾರಣಗಳಿಂದ ವಿಷಮಶೀತ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಅವರಲ್ಲಿ ಬಹುತೇಕರಿಗೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಹಜ್‌ ಭವನ ಮತ್ತು ಖಾಸಗಿ ಆಶ್ರಮ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಹಾನಗರಪಾಲಿಕೆ ಆಯುಕ್ತರು ೭,೩೦೦ ಅಡಿ ವಿಸ್ತೀಣ೯ದ ಜಾಗಗಳನ್ನು ಗುರುತಿಸಿದ್ದಾರೆ. ಇದು ಆಷಾಡ ಮಾಸ ಆಗಿರುವುದರಿಂದ ಕಲ್ಯಾಣ ಮಂಟಪ ಹಾಗೂ ಇತರೆ ದೊಡ್ಡ ಕಟ್ಟಡಗಳನ್ನು ಗುರುತಿಸಿ ಸಿದ್ಧ ಮಾಡಿಕೊಳ್ಳಲು ವಿಡಿಯೋ ಸಂವಾದ ಸಂದಭ೯ದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ವೈದ್ಯರ ಕೊರತೆ ನೀಗಿಸಿಕೊಳ್ಳಲು ಆಯುಷ್‌ ವೈದ್ಯರು, ಸಕಾ೯ರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಿಜಿ ವಿದ್ಯಾಥಿ೯ಗಳನ್ನು ಬಳಸಿಕೊಳ್ಳಬೇಕು. ಎಲ್ಲಿಯೂ ಗೊಂದಲಗಳಿಗೆ ಅವಕಾಶ ನೀಡದಂತೆ ಜಾಗ್ರತೆವಹಿಸಿ ಎಂದರು.
ಆರಂಭದಲ್ಲಿ ತಾವು ಜಾರಿಗೊಳಿಸಿದ್ದ ಪಾರದಶ೯ಕ ವ್ಯವಸ್ಥೆಯನ್ನೇ ಪುನಃ ಅಳವಡಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಬೇಕು. ಅದು ತಪ್ಪಿದ್ದರಿಂದಲೇ ಮಾಹಿತಿ ಕೊರತೆಯಿಂದ ಮಾಧ್ಯಮಗಳಲ್ಲಿ ವಾಸ್ತವವಲ್ಲದ ವರದಿಗಳು ಬಿತ್ತರವಾಗುತ್ತವೆ. ಅಂತಹ ತಪ್ಪುಗಳಿಗೆ ಆಸ್ಪದ ನೀಡಬೇಡಿ ಎಂದು
*ಇತರೆ ನಗರಗಳಿಗೆ ಹೋಲಿಸಿದರೆ ಮರಣ ಪ್ರಮಾಣ ಕಡಿಮೆ : ಸಚಿವ ಸುಧಾಕರ್‌
ಬೆಂಗಳೂರು :* ನಗರದಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ದೇಶದಲ್ಲಿನ ಒಟ್ಟಾರೆ ಸರಾಸರಿಗಿಂತ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಇತರೆ ರಾಜ್ಯ ಮತ್ತು ನಮ್ಮಲ್ಲಿನ ಮಾಹಿತಿಗಳನ್ನು ಮಾಧ್ಯಮಗಳಿಗೆ ವಿವರಿಸಿ ವಾಸ್ತವ ಸಂಗತಿಗಳ ಮೇಲೆ ಸರಿಯಾಗಿ ಬೆಳಕು ಚೆಲ್ಲುವಲ್ಲಿ ವಿಫಲರಾಗಿದ್ದೇವೆ. ಇದರಿಂದಾಗಿ ಗೊಂದಲಕಾರಿ ವರದಿಗಳು ಬಿತ್ತರವಾಗುತ್ತಿವೆ ಎಂದು ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಂದಭ೯ದಲ್ಲಿ ಶುಕ್ರವಾರ ವಿಷಾದಿಸಿದರು.
ದೇಶದ್ಯಾಂತ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ ೧೫,೩೦೬ ಆಗಿದ್ದರೆ ರಾಜ್ಯದಲ್ಲಿ ೧೭೮ ಮಂದಿ ಅಸುನೀಗಿದ್ದಾರೆ. ಬೆಂಗಳೂರು ನಗರದಲ್ಲಿ ಮೃತಪಟ್ಟವರ ಸಂಖ್ಯೆ೭೮ ಆಗಿದೆ. ದೇಶದ ಇತರೆ ಮಹಾನಗರಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ಮುಂಬಾಯಿಯಲ್ಲಿ ೩,೯೬೪, ದಿಲ್ಲಿಯಲ್ಲಿ ೩,೨೬೪, ಚೆನ್ನೈ ೬೬೫ ಮತ್ತು ಕೋಲ್ಕತ್ತಾದಲ್ಲಿ ೩೪೫ ಮಂದಿ ಸಾವನ್ನಪ್ಪಿದ್ದಾರೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದರು.
ಕಳೆದ ನಾಲ್ಕು ತಿಂಗಳು ಉತ್ತಮವಾಗಿ ನಿವ೯ಹಣೆ ಮಾಡಲಾಗಿದೆ. ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಮಾಧ್ಯಮಗಳು ಅದನ್ನೂ ದೊಡ್ಡದಾಗಿ ಬಿಂಬಿಸುತ್ತಿವೆ. ಏಕಾಏಕಿ ಹೆಚ್ಚಳಕ್ಕೆ ಸುತ್ತಲಿನ ಏಳೆಂಟು ಜಿಲ್ಲೆ ರೋಗಿಗಳು ನಗರಕ್ಕೆ ಬರುತ್ತಿರುವ, ಐಎಲ್‌ಐ ಪ್ರಕರಣಗಳಲ್ಲಿ ಬಹುತೇಕರು ಪಾಸಿಟಿವ್‌ ಆಗುತ್ತಿರುವುದು ಮತ್ತು ಇತರೆ ಗಂಭೀರ ರೋಗ ಇರುವ ಹಿರಿಯರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕಾರಣ ಎಂದು ವಿಶ್ಲೇಷಿಸಿದರು.
ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಲು ತಾವು ಅನುಸರಿಸಿದ್ದ ಪಾರದಶ೯ಕ ಪದ್ಧತಿಯನ್ನೇ ಮತ್ತೆ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟರು.