ಶಕ್ತಿ ಸಂಘಗಳ
ಸಂಪೂರ್ಣ ಸಾಲ ಮನ್ನಾ
ಮಧುಗಿರಿ : ಈ ಹಿಂದಿನ ಮೈತ್ರಿ ಸರ್ಕಾರವು 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ರಾಜ್ಯದ ರೈತರ 26 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ರಾಜ್ಯ ಯುವ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಕರುನಾಡ ವಿಜಯ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಮಧುಗಿರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದ ಅವರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ರಾಜ್ಯದ
ಮುಖ್ಯಮಂತ್ರಿಯಾಗಲಿದ್ದಾರೆ. ಅವರು ಅಧಿಕಾರ
ವಹಿಸಿಕೊಂಡ 24 ಗಂಟೆಗಳಿಗೆ ಸ್ತ್ರೀ ಶಕ್ತಿ ಸಂಘಗಳ
ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು.
ರಾಜ್ಯದ ಬಡಜನರ ರೈತರ ಮತ್ತು ಧೀನ ದಲಿತರ
ಒಳಿತಿಗಾಗಿ ಪಂಚರತ್ನ ಯಾತ್ರೆಯನ್ನು ರಾಜ್ಯಾದ್ಯಂತ
ಸಂಚರಿಸುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ
ಸವಲತ್ತುಗಳು ರೈತರು, ಬಡವರ ಮಕ್ಕಳಿಗೆ ಸರ್ಕಾರಿ
ಶಾಲೆಗಳಲ್ಲೂ ಸಿಗುವಂತಾಗಬೇಕು. ಆರೋಗ್ಯದ
ಸಮಸ್ಯೆಯಾದರೆ ಬಡವರ ಗತಿ ಏನಾಗಬೇಕು,
ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ವ್ಯಯವಾಗುತ್ತದೆ.
ಎಷ್ಟೇ ಖರ್ಚಾದರೂ ಸರ್ಕಾರವೇ ಭರಿಸುವಂತಾದರೆ ಹೇಗಿರುತ್ತದೆ ನೀವೇ ಒಮ್ಮೆ ಯೋಚಿಸಿ ಇಂತಹ ಅನೇಕ ಯೋಜನೆಗಳ ಜಾರಿಗಾಗಿ ಈ ಬಾರಿ ಕುಮಾರಸ್ವಾಮಿಯವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ನಮಗೂ ಮಧುಗಿರಿಗೂ ಅವಿನಾಭಾವ ಸಂಬಂಧವಿದ್ದು. ಈ ಹಿಂದೆ ಮಧುಗಿರಿಯಲ್ಲಿ ಬಿಜೆಪಿ ಯವರು ನಡೆಸಿದ ಆಪರೇಷನ್ ಕಮಲದ ಸಂದರ್ಭದಲ್ಲೇ ಕ್ಷೇತ್ರವನ್ನು ವೀರಭದ್ರಯ್ಯ ಬಿಟ್ಟು ಕೊಡಬೇಕು ಎಂದು ದೇವೇಗೌಡರು ನಿರ್ಧರಿಸಿದ್ದರು ಆದರೆ ಅಂದೂ ಅವರಿಗೆ ವಿ.ಆರ್.ಎಸ್ ದೊರೆಯದ ಹಿನ್ನೆಲೆಯಲ್ಲಿ ನಮ್ಮ ತಾಯಿಯವರಾದ ಅನಿತಾ ಕುಮಾರಸ್ವಾಮಿಯವರು ಸ್ಪರ್ದೆ
ಮಾಡಿ ಜಯಗಳಿಸಿದ್ದರು ಇಲ್ಲಿ ಜೆಡಿಎಸ್ ಪಕ್ಷವನ್ನು ಯಾರೂ ಕಿತ್ತುಕೊಳ್ಳು ಆಗುವುದಿಲ್ಲ. ನೀರಾವರಿ ವಿಚಾರದಲ್ಲಿ ಶಾಸಕ ವೀರಭದ್ರಯ್ಯನವರು ಮುತುವರ್ಜಿಯಿಂದ ಚೆಕ್ ಡ್ಯಾಂ ನಿರ್ಮಾಣ ಮಾಡುವುದರ ಜೊತೆಗೆ ಸಾವಿರ ಕೋಟಿಗೂ ಹೆಚ್ಚು ಸರಕಾರದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿ ಇತಿಹಾಸ ಸೃಷ್ಠಿಸಿದ್ದಾರೆ ಎಂದರು.
ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ,
ಕುಮಾರಸ್ವಾಮಿಯವರು ಕೇವಲ 14 ತಿಂಗಳು
ಅಧಿಕಾರದಲ್ಲಿದ್ದಾಗ ಕ್ಷೇತ್ರವು ಭೀಕರ ಬರಗಾಲ ಅನುಭವಿಸಿತ್ತು. 2 ವರ್ಷ ಕರೋನಾ ದಿಂದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಯಿತು. ಈಗ ಬಿಜೆಪಿ
ಸರ್ಕಾರವಿದ್ದು ಅನುಧಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ನನಗೆ ಒಳ್ಳೆಯ ವಾತಾವರಣ ಸಿಗಲಿಲ್ಲ. ಆದರೂ ಜನತೆಯ ಪರ ಕೆಲಸ ಮಾಡಿದ ಸಮಾಧಾನವಿದೆ. ಮಧುಗಿರಿ ಕಂದಾಯ ಜಿಲ್ಲೆಯಾಗಲು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಕೇಂದ್ರವಾಗಲು ಸುಸಜ್ಜಿತ ಕ್ರೀಡಾಂಗಣ, ಕೈಗಾರಿಕಾ ಪ್ರದೇಶದ ಆರಂಭಕ್ಕಾಗಿ ಮತ್ತೊಮ್ಮ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ತಿಮ್ಮರಾಯಪ್ಪ , ಸದಸ್ಯರಾದ ಎಂ.ಆರ್.ಜಗನ್ನಾಥ್, ಕೆ.ನಾರಾಯಣ್, ಎಂ.ಎಲ್.ಗಂಗರಾಜು, ಚಂದ್ರಶೇಖರ್ ಬಾಬು, ತುಮಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷರಾದ ತಿಮ್ಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾ ಗೋವಿಂದರಾಜು, ಗೌರವಾಧ್ಯಕ್ಷೆ ಲತಾ ನಾರಾಯಣ್, ನಗರ ಅಧ್ಯಕ್ಷರಾದ ರಾಜು, ಕಾರ್ಯಾಧ್ಯಕ್ಷ ವೆಂಕಟೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ದಾದು, ಗೌರವಾಧ್ಯಕ್ಷ ಸಿದ್ದಿಕ್, ಶರೀಫ್.ಮುಖಂಡರುಗಳಾದ ವೆಂಕಟಾಪುರ ಗೋವಿಂದರಾಜು, ತುಂಗೋಟಿ ರಾಮಣ್ಣ, ಬಿ.ಎಸ್ ಶ್ರೀನಿವಾಸ್, ಚೌಡಪ್ಪ ಮತ್ತಿತರರು ಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು