ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬೊಮ್ಮಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕವಿ ದಿನ ಕವಿತೆಗಳ ಉತ್ಸವ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆಯ ಅಧ್ಯಕ್ಷರಾದ ಗೋಪಾಲ್ ನೆರವೇರಿಸಿದರು
ಪುರಸಭೆಯ ಅಧ್ಯಕ್ಷ ಗೋಪಾಲ್ ಮಾತನಾಡಿ ಕವಿಯ ಆಲೋಚನಾ ಶಕ್ತಿ ವಿಭಿನ್ನವಾಗಿರುತ್ತದೆ ಎಲ್ಲಾ ವಿಷಯಗಳನ್ನು ಲೋಕಭಿರಾಮವಾಗಿ ವಿಚಾರಿಸುತ್ತ ಮಾತನಾಡುವಂತಹ ಗುಣವುಳ್ಳವನಾಗಿದ್ದಾನೆ ಎಂದು ಬಣ್ಣಿಸಿದರು
ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಕನ್ನಡ ನಾಡಿನಲ್ಲಿ ವಾಸವಾಗಿರುವ ಹೊರ ರಾಜ್ಯದ ಎಲ್ಲಾ ಭಾಷಿಕರು ಕನ್ನಡ ಕಲಿಯುವ ಆಸಕ್ತಿಯನ್ನು ತೋರಬೇಕು ಎಂದು ತಿಳಿಸಿದರು
ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಣ್ಣ ಮಾತನಾಡಿ ಕನ್ನಡ ಭಾಷೆಯ ಜೊತೆಗೆ ಇತರೆ ಭಾಷೆಯ ಹೂರಣವಿರಲಿ ಮನಸ್ಸಿಗೆ ಕನ್ನಡದ ತೋರಣವನ್ನು ಕಟ್ಟಿಕೊಂಡು ಪುಸ್ತಕಗಳನ್ನ ಅಧ್ಯಯನ ಮಾಡಬೇಕು ಕವಿತೆಗೆ ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿಯಿದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಮನುಷ್ಯನಿಗೆ ಪ್ರತಿನಿತ್ಯವೂ ಕವಿ ದಿನವಾಗಬೇಕು ಎಲ್ಲರಲ್ಲೂ ಕವಿಯೊಬ್ಬ ಅಡಗಿರುತ್ತಾನೆ ಅದನ್ನ ಸೂಕ್ಷ್ಮವಾಗಿ ನೋಡಿದಾಗ ಕವಿತೆಯೊಂದು ಹೊರಬರುತ್ತದೆ ಯುವ ಪೀಳಿಗೆ ಕಥೆ ಕವನಗಳನ್ನು ಬರೆದಾಗ ಸಮಾಜ ತಾನಾಗಿಯೇ ಸರಿದಾರಿಗೆ ಬರುತ್ತದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಕನ್ನಡ ಪರ ಹಿರಿಯ ಹೋರಾಟಗಾರರಾದ ಬಿಎಂಆರ್ ಕಿತಗಾನಹಳ್ಳಿ ಶಿವಪ್ಪ ಹರೀಶ್ ತಿಲಕ್ ಧಾರ್ಮಿಕ ಗುರುಗಳಾದ ಶ್ಯಾಮ್ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕೇಶ್ ಕವಿಗಳಾದ ಆನೇಕಲ್ ಭೈರಪ್ಪ ಮಹೇಶ್ ಊಗಿನಹಳ್ಳಿ ವಿಶಾಲಾಆರಾಧ್ಯ ಶ್ರೀವಳ್ಳಿ ಶೇಷಾದ್ರಿ ವಿಭಾ ಪುರೋಹಿತ್ ನಾಗರತ್ನ ಚುಟುಕುಶಂಕರ್ ಜಿಗಣಿ ಭಾಗ್ಯಮ್ಮ ಗಾಯಕರಾದ ರಾಮಚಂದ್ರ ಪ್ರಭಾಕರ್ ರೆಡ್ಡಿ ಮೇಘನಾ ಮನೋಹರ್ ಟಿಎಸ್ ಮುನಿರಾಜು ಮಹೇಂದ್ರ ಬೇಬಿಯಮ್ಮ ಕನಮನಹಳ್ಳಿ ಕುಮಾರ ವಿಜಯಕುಮಾರ್ ಪಿ ಪರ್ವೀನ್ ತಾಜ್ ಫೌಜಿಯ ಸುಲ್ತಾನ್ ಪೂರ್ಣಿಮಾ ಎನ್ ನಯನ ವೈ ಎಸ್ ಕಾವ್ಯಾ ಡಿ ಪ್ರಗತಿ ಉಪಾಧ್ಯಾಯ ಯಶೋಧ ಎಸ್ ಹಾಜರಿದ್ದರು