ದಲಿತರು ಕೆ ಎನ್ ರಾಜಣ್ಣನವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿದ ಕಾಂಗ್ರೆಸ್ ಮುಖಂಡ ಎಚ್.ಎಂ.ಟಿ ನರಸಿಯಪ್ಪ.,……
ಮಧುಗಿರಿ ತಾಲೂಕಿನ ದಲಿತ ಕಾಲೋನಿಗಳಿಗೆ . ಭೇಟಿ ನೀಡಿದ.ಕಾಂಗ್ರೆಸ್ ಮುಖಂಡರಾದ ಎಚ್ಎಂಟಿ ನರಸಿಯಪ್ಪನವರ ದಲಿತ ಮುಖಂಡರು . ಗ್ರಾಮದ ದಲಿತ ಕಾಲೋನಿಗಳಲ್ಲಿ.2013 ರಿಂದ 2018ರವರೆಗೆ ಕೆ ಎನ್ ರಾಜಣ್ಣನವರು ಶಾಸಕರಾದ ಅವಧಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡುತ್ತಾಮತ್ತು ದಲಿತರಿಗೆ ಇವರ ಅವಧಿನಲ್ಲಿ ಹೆಚ್ಚಿನ ಮನೆಗಳು ಮತ್ತು ಸಾಲ ಮತ್ತು ಸಹಾಯಧನಗಳು ಗಂಗಾ ಕಲ್ಯಾಣ ಕೊಳವೆಬಾವಿಗಳು ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡಿಸಿರುತ್ತಾರೆ ಮತ್ತು ಕಾಲೋನಿಗಳ ಅಭಿವೃದ್ಧಿಗೆ ತುಂಬಾ ಶ್ರಮಿಸಿರುತ್ತಾರೆ. ಹತ್ತು ಹಲವಾರು ಕಾರಣಗಳಿಂದ 2018ರಲ್ಲಿ ಇವರಿಗೆ ಸೋಲಾಗಿತ್ತು. ಆದ್ದರಿಂದ ನಾವುಗಳು ದಲಿತ ಮುಖಂಡರುಗಳು ಏನಿದ್ದೇವೆ, ಇಂದು ನಾವು ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಮತ್ತು ಸೋತ ನಂತರವೂ ಸಹ ಅದೇ ಪ್ರೀತಿ ವಿಶ್ವಾಸ ಅವರು ಏನನ್ನು ಕೇಳಿದರು
ಸಹಾನುಭೂತಿಯಿಂದ ಸಹಕರಿಸಿ.ನಮಗೆ ಕೆಲಸಗಳನ್ನು ಮಾಡಿಕೊಡುತ್ತಾ ಬರುತ್ತಿದ್ದಾರೆ ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕೆ ಎನ್ ರಾಜಣ್ಣನವರಿಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ . ಆದ್ದರಿಂದದಲಿತ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಮನವೊಲಿಸಿ ಕೆ ಎನ್ ರಾಜಣ್ಣ ಪರವಾಗಿ ಮತ ನೀಡುವಂತೆ ತಾವೆಲ್ಲರೂ ಇಂದು ಶ್ರಾವಂಡನಹಳ್ಳಿ. ತೆರಿಯೂರು . ಕಡಗತೂರು. ಕಸಿನಾಯಕನಹಳ್ಳಿ. ದೊಡ್ಡ ಮಾಲೂರು .ಕೊಡಿಗೇನಹಳ್ಳಿ .ತಿಂಗಳೂರು ಗ್ರಾಮಗಳಲ್ಲಿ ಸಭೆಗಳನ್ನು ಮಾಡಿ. ಅತಿ ಹೆಚ್ಚು. ಸಂಘಟನೆಯೊಂದಿಗೆ.ಗೆಲ್ಲಲು ಕಾಣಿಭೂತರಾಗುವಂತೆಸೂಚಿಸಿದರು..
ಈ ಸಂದರ್ಭದಲ್ಲಿ ದೊಡ್ಡ ಮಾಲೂರು ಹಿರಿಯ ಮುಖಂಡರಾದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೆಂಕಟಪ್ಪ. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತ ರಾಯಪ್ಪ ಮಾಜಿ ಗ್ರಾಮ ಪಂಚಾಯತಿರಾದ ನಿಂಗಪ್ಪ ಶ್ರಾವಂಡನಹಳ್ಳಿ. ಅಶ್ವಥ್. ಮಾಜಿ ತಾಲ್ಲೂಕ್ ಪಂಚಾಯತ್ ಸದಸ್ಯರಾದ ಜಿ. ನರಸಿಂಹಯ್ಯ ವಕೀಲರಾದ ಶಿವಣ್ಣ. ಕೊಡಿಗೆನಹಳ್ಳಿ ಆರ್ ಎನ್ ಮೂರ್ತಿ. ಯುವ ಮುಖಂಡರಾದ ಮಹೇಶ್ ಕಸಿನಾಯಕನಹಳ್ಳಿ. ಇನ್ನೂ ಮುಂತಾದವರು ಸಂಘಟನೆಯಲ್ಲಿ ಭಾಗವಹಿಸಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.