ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳುವಂತೆ ವಾಸವಿ ಲಲಿತ ಶಾಲೆ ಅಧ್ಯಕ್ಷರಾದ ಶ್ರೀಮತಿ ಉಮಾ ರಾಜ್ ಕರೆ…..
ಪಾವಗಡ… ಇಂದು ಪಟ್ಟಣದ ಶ್ರೀ ಆಂಜನೇಯ ಶೆಟ್ಟಿ ಕಲ್ಯಾಣದಲ್ಲಿ ವಾಸವಿ ಮಂಡಳಿಯ 33ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶ್ರೀಮತಿ ಉಮಾ ರಾಜ್ ಮಾತನಾಡುತ್ತಾ, ವಾಸವಿ ದೇವಿ ಕುಲ ಮರ್ಯಾದೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಉದಾರಗುಣ ಮಕ್ಕಳಿಗೆ ತಿಳಿಸಿ, ವರ್ಣಸಂಕರ ವಾಗದಂತೆ ಮಕ್ಕಳಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ನಂತರ ಶ್ರೀಮತಿ ಸಿರಿಶ ಎನ್ ಸತೀಶ್ ಮಾತನಾಡುತ್ತಾ, ಕರೋನಾ ಭೀತಿಯಿಂದ ಶಾಂತ ಗೊಂಡಿರುವ ಇಡೀ ವಿಶ್ವದ ಶಾಂತಿಗಾಗಿ ಎಲ್ಲ ಆರ್ಯವೈಶ್ಯ ಮಹಿಳೆಯರಲ್ಲಿ ಪುನಶ್ಚೇತನ ಉಂಟಾಗಲಿ ಎಂಬ ಶುಭ ಸಂಕಲ್ಪದಿಂದ ವಾಸವಿ ವ್ರತವನ್ನು ಆಯೋಜಿಸಲಾಗಿದೆ ಎಂದರು. ನಂತರ ಮಂಡಳಿಯ ಸದಸ್ಯರು ಏಕರೂಪದ ವಸ್ತ್ರವನ್ನು ಧರಿಸಿ ವಾಸವಿ ಮಾತೆಯ ದೈವತ್ವದ ಬಗ್ಗೆ ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕನಿಕಾಪರಮೇಶ್ವರಿ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್, ಅಶೋಕ್ ಕುಮಾರ್ , ಜ್ಯೋತಿ ಮರಳಿ, ಎಸ್ ಎಸ್ ಕೆ ನಿರ್ದೇಶಕ ಶ್ರೀನಿವಾಸ್, ಶಾಂತ ಪ್ರಕಾಶ್, ಕವಿತಾ ಕಮಲ್, ಲಕ್ಷ್ಮಿ ಪ್ರಸನ್ನ, ಟಿಎಲ್ ಸಾಗರ್, ವಾಣಿ ಅಶ್ವತ್, ಇನ್ನು ಮುಂತಾದ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ