IMG 20220510 WA0034

ಪಾವಗಡ:ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ…

DISTRICT NEWS ತುಮಕೂರು

ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ…

ಪಾವಗಡ….. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಎಸ್ಸಿ.ಎಸ್ಟಿ. ಜನಾಂಗದ ಯುವಕರ ಜೋಡಿ ಕೊಲೆ ಪ್ರಕರಣವನ್ನು ಶೀಘ್ರ ತನಿಖೆ ಕೈಗೊಳ್ಳಬೇಕೆಂದು ಇಂದು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ವರದರಾಜು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು .

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಡಿ.ಜೆ.ಎಸ್. ನಾರಾಯಣಪ್ಪನವರು ಮಾತನಾಡುತ್ತಾ, ಸ್ವತಂತ್ರ ಬಂದು ವರ್ಷಗಳು ಕಳೆದರೂ ಎಸ್ಸಿ ಎಸ್ಟಿ ಜನಾಂಗದ ಮೇಲಿನ ದಬ್ಬಾಳಿಕೆಯು ಕಡಿಮೆಯಾಗಿಲ್ಲ ವೆಂದು. ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪಿ.ಎಂ. ಗಿರೀಶ್ ಹಾಗೂ ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರೀಶ್ ಇಬ್ಬರು ಯುವಕರನ್ನು ಕೊಲೆ ಮಾಡಿದ ಕೊಲೆಗಡುಕರನ್ನು ಕೂಡಲೇ ಬಂದಿಸಿ ತನಿಖೆಯನ್ನು ಸಿಐಡಿಗೆ ನೀಡಿ, ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

ನಂತರ ದಲಿತ ಮುಖಂಡ ಕಡಲಕೆರೆ ಹನುಮಂತರಾಯಪ್ಪ ಮಾತನಾಡುತ್ತಾ, ಸರ್ಕಾರ ಈ ಕೂಡಲೇ ಮೃತರ ಕುಟುಂಬಕ್ಕೆ 5 ಎಕರೆ ಜಮೀನು ನೀಡಿ , ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರುಗಳಾದ ಬೋವಿ ಸಮಾಜದ ಬಂಗಾರಪ್ಪ ವಕೀಲರಾದ ಶೇಷ ನಂದನ್ ಎ.ಪಿ.ಎಂ.ಸಿ. ಶಿವಮೂರ್ತಿ ಪ್ರಾಂಶುಪಾಲರಾದ ಮಾರಪ್ಪ. ಶಿಕ್ಷಕರ ಸಂಘದ ನಿರ್ದೇಶಕರಾದ ರಾಮಾಂಜನೇಯ .ಪಾಳೇಗಾರ್ ಲೋಕೇಶ್.ಅರ್.ಎನ್. ಲಿಂಗಪ್ಪ ಗ್ರಾಮ ಪಂಚಾಯಿತಿ ಸದಸ್ಯ ಲಿಂಗ ನಾಯಕ ಮಂಜುನಾಥ್ . ಮುಖಂಡರಾದ ವಳ್ಳೋರು ನಾಗೇಶ್. ರಾಜೇಶ್ ಕೆ.ಟಿ .ಹಳ್ಳಿ. ರಮೇಶ್ ಬಾಬು ರಾಥೋಡ್. ರೋಪಿತಾಶ್ವನಾಯ್ಕ. ಗೋವಿಂದ ನಾಯ್ಕ. ವೆಂಕಟನಾಯ್ಕ. ಹನುಮಂತರಾಯ.ಬಿ.ಎಸ್.ಪಿ. ಭಾಸ್ಕರ ನಾಯಕ .ಅನಂತಯ್ಯ. ಓಂಕಾರ್ ನಾಯಕ. ಕನ್ನಡಿ ಮೇಡಿ ಸುರೇಶ್. .ಮುಖಂಡರಾದ ಅಂಬಿಕಾ ರಮೇಶ್. ಸರೋಜಮ್ಮ ಪಾವಗಡ. ಬಲರಾಮ್ ಬೆಳ್ಳಿಬಟ್ಟಲು. ಈರಣ್ಣ ಕೆ.ಟಿ.ಹಳ್ಳಿ. ಮುಂತಾದವರು ಭಾಗವಹಿಸಿದ್ದರು

ವರದಿ: ಶ್ರೀನಿವಾಸಲು ಎ