ಇಂದು ಪಾವಗಡ ತಹಶಿಲ್ದಾರ್ ಕೆ.ಆರ್ ನಾಗರಾಜ್ ಮತ್ತು. ಸಿಬ್ಬಂದಿಯವರು ಮಳೆಯಿಂದ ಹಾನಿಗೊಳಗಾದ ಕಡಮಲಕುಂಟೆ ಗ್ರಾಮದ ಆಂಜನಪ್ಪ ಅವರ ಮನೆಗೆ ಭೇಟಿ ನೀಡಿ ಮಳೆಯಿಂದ ಸಂಪೂರ್ಣವಾಗಿ ಬಿದ್ದು ಹೋಗಿರುವ ಮನೆಯನ್ನು ಪರಿಶೀಲಿಸಿದರು.
ಅಂಜಿನಪ್ಪ ಮತ್ತು ಅವರ ಹೆಂಡತಿ ಓಬಳಮ್ಮ ಕಡಮಲಕುಂಟೆಯ ಗ್ರಾಮದಲ್ಲಿ ಸುಮಾರು ವರ್ಷಗಳ ವಾಸವಿದ್ದು. ಅವರಿಗೆ ವಾಸಿಸಲು ಯೋಗ್ಯ ಮನೆಯು ಇಲ್ಲದಂತಾಗಿದೆ. ಎಷ್ಟೇ ಸರ್ಕಾರಗಳು ಬಂದು ಹೋದರು . ಬಡಜನರ ಮಾತ್ರ ಇಂದಿಗೂ ಬಡವರಾಗಿಯೇ ಉಳಿದಿದ್ದಾರೆ ಎಂಬುದಕ್ಕೆ ಆಂಜಿನಪ್ಪನವರ ಕುಟುಂಬ ಜೀವಂತ ಉದಾಹರಣೆಯಾಗಿದೆ.
ಈ ವೃದ್ಧ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರು ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಹೋಗಿದ್ದು. ಈ ಮಹಾ ಮಳೆಯಿಂದಾಗಿ ಇದ್ದ ಒಂದು ಮನೆಯೂ ಸಹ ಹಾನಿಗೀಡಾಗಿದ್ದು ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಓಬಳಮ್ಮನಿಗೆ ಬರುವ ವೃದ್ಧಾಪ್ಯ ವೇತನ ದಿಂದ ಜೀವನ ಸಾಗಿಸಬೇಕಾಗಿದೆ. ದಂಪತಿಗಳಿಗೆ ಸರ್ಕಾರದ ಯಾವುದೋ ಒಂದು ಯೋಜನೆ ಅಡಿಯಲ್ಲಿ ಸೂರು ಕಲ್ಪಿಸಿಕೊಡಬೇಕೆಂದು. ಕಡಮಲಕುಂಟೆಯ ಜನರ ಒತ್ತಾಯವಾಗಿದೆ.
ವರದಿ: ಶ್ರೀನಿವಾಸುಲು ಎ