ವಿವಿಧ ಶಾಲೆಗಳಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮಗಳು….
ವಿಜ್ಞಾನ ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗಬೇಕು ಬೇಕು………
ಪಾವಗಡ.. .ಶಾರದಾ ವಿದ್ಯಾಪೀಠ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮಧುಗಿರಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಅಶ್ವತ್ ನಾರಾಯಣ್ ರವರು ಮಾತನಾಡುತ್ತಾ. ಮಕ್ಕಳಲ್ಲಿರುವ ಸೃಜನಶೀಲತೆಯು ಮತ್ತು ವೈಜ್ಞಾನಿಕ ಪರಿಕಲ್ಪನೆಗಳನ್ನು ಕಲಿಯುವ ಉತ್ಸಾಹ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಲ್ಲಿ ಏರ್ಪಡಿಸಲಾದ ವಸ್ತುಪ್ರದರ್ಶನದಲ್ಲಿ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಧುಗಿರಿ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಟ್ಟಾ ನರಸಿಂಹಮೂರ್ತಿಯವರು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ವಸ್ತು ಪ್ರದರ್ಶನ ಯಶಸ್ವಿಯಾಗಿದೆ ಎಂದರು.ಶಾರದ ವಿದ್ಯಾಪೀಠ ಸಂಸ್ಥೆಯ ಕಾರ್ಯದರ್ಶಿ ಎನ್ ಸಿ ನಾಗಭೂಷಣರವರು ಖಜಾಂಚಿ ಸೂರ್ಯನಾರಾಯಣರವರು ಮುಖ್ಯೋಪಾಧ್ಯಾಯರಾದ ಎಂ. ಗಂಗಾಧರಪ್ಪ ಶಿಕ್ಷಣ ಸಂಯೋಜಕರಾದ ಶಿವಕುಮಾರ್ ಶಿವಮೂರ್ತಿನಾಯಕ್. ಬಿ.ಆರ್.ಪಿ.ಸಾದಿಕ್ ರವರು ಉಪಸ್ಥಿತರಿದ್ದರು.
2.ಕೋಟಗುಡ್ಡದ ಸಹನಾ ಆಂಗ್ಲಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅತ್ಯಂತ ಕ್ರಿಯಾಶೀಲವಾಗಿ ಆಚರಿಸಲಾಯಿತು.
ಮಕ್ಕಳು ಶಿಕ್ಷಕರ ಮತ್ತು ಪೋಷಕರ ಸಹಕಾರದಿಂದ ಅತ್ಯಂತ ಆಕರ್ಷಕ ರೀತಿಯಲ್ಲಿ ಮಾದರಿಗಳನ್ನು ತಯಾರಿಸಿಕೊಂಡು ಬಂದು ಎಲ್ಲರಿಗೂ ವಿಚಾರ ಮಂಡನೆ ಮಾಡಿದರು.
ಜೀವಶಾಸ್ತ್ರ, ರಾಸಾಯನಿಕ ಶಾಸ್ತ್ರ ಮತ್ತು ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಸೌರಮಂಡಲ, ಗ್ರಹಣಗಳು, ಹೈಡ್ರಾಲಿಕ್ಸ್, ಮಾಲಿನ್ಯ ಗಳು, ಸಂಚಾರ ಮಾಧ್ಯಮ, ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಪ್ರಯೋಗ ಇತ್ಯಾದಿ ಪ್ರಯೋಗಗಳು ಮತ್ತು ಮಾದರಿಗಳು ಆಕರ್ಷಕವಾಗಿದ್ದವು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯಾದ ಶ್ರೀನಿವಾಸ್ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು.
ವಿ.ಎಸ್ ಪಬ್ಲಿಕ್ ಶಾಲೆಯಲ್ಲಿ ಸರಳವಾದ ರೀತಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಕಾರ್ಯದರ್ಶಿ ಕೆ.ಅಶ್ವತ್ಥನಾರಾಯಣ ಮಾತನಾಡುತ್ತಾ,ವಿಜ್ಞಾನದಲ್ಲಿ ಸಮಸ್ಯೆ ಗಳಿಗೆ ಪರಿಹಾರವಿದೆ ಆದ್ದರಿಂದ ಮಕ್ಕಳು ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನ ಗಳ ಬಗ್ಗೆ ಹೆಚ್ಚಿನ ಒಲವನ್ನು ಮೂಡಿಸಿಕೊಳ್ಳಬೇಕು, ಇಂದಿನ ಶೈಕ್ಷಣಿಕ ಯುಗದಲ್ಲಿ ತಂತ್ರಜ್ಞಾನವು ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ, ವಿದ್ಯಾರ್ಥಿ ಏನನ್ನು ಕಲಿತರೂ ವೈಜ್ಞಾನಿಕ ಮನೋಭಾವನ್ನು ರೂಢಿಸಿಕೊಳ್ಳಬೇಕು ಎಂದರು. ಮುಖ್ಯ ಶಿಕ್ಷಕರಾದ ಶ್ರೀನಿವಾಸಲು.ಎ ಮಾತನಾಡುತ್ತಾ, ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತನ್ನೇ ನಡೆಸುತ್ತಿದೆ, ವಿಜ್ಞಾನ-ತಂತ್ರಜ್ಞಾನ ಬಳಕೆಯಿಲ್ಲದೆ ನಾವು ಏನನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ, ಅದರಿಂದ ವಿದ್ಯಾರ್ಥಿಗಳು ವಿಜ್ಞಾನದ ವಿಷಯದ ಬಗ್ಗೆ ಬಹಳ ಆಳವಾದ ಜ್ಞಾನವನ್ನು ಹೊಂದಬೇಕು ಎಂದರು. ಹೌದು ವಿಜ್ಞಾನ ಶಿಕ್ಷಕಿಯಾದ ಪ್ರಿಯಾಂಕ ಮಾತನಾಡುತ್ತಾ, 1928 ರಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಚಂದ್ರಶೇಖರ ವೆಂಕಟರಾಮನ್ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಪ್ರಮುಖ ಅವಿಷ್ಕಾರ ಮಾಡಿದರು ನಂತರ ಅದಕ್ಕೆ ರಾಮನ್ ಎಪೆಕ್ಟ್ ಎಂಬ ಹೆಸರನ್ನು ಇಡಲಾಯಿತು ಎಂದು, ಅದರ ಕೆಲಸಕ್ಕಾಗಿ ಸಿವಿ ರಾಮನ್ ರವರಿಗೆ 1930 ರಲ್ಲಿ ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಲಾಯಿತು, ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಕಿರಣ್, ದೀಪಿಕಾ, ನರಸಿಂಹಮೂರ್ತಿ, ರಾಮಕೃಷ್ಣ, ಮುದ್ಧವೀರಪ್ಪ, ಮೇಘಶ್ರೀ, ಪ್ರಿಯಾಂಕ, ಶಬ್ರಿನ್, ಕಾವ್ಯಂಜಲಿ ಇತರರು ಭಾಗವಹಿಸಿದ್ದರು.