ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಕರ್ತವ್ಯ ನಿರ್ಲಕ್ಷ.
ಪಾವಗಡ : ತಾಲ್ಲೂಕಿನ ನಿಡಗಲ್ ಹೋಬಳಿ ಕೊಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು
ನ 29 ರಂದು ಬಿಸಿ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಇಂದಿಗೆ ನಾಲ್ಕು ದಿನ ಕಳೆದಿದೆ.
ಘಟನೆ ನಡೆದ ನಂತರ ಡಿ ಡಿ ಪಿ ಐ ಗಿರಿಜಾ, ಶಿಕ್ಷಣ ಅಧಿಕಾರಿ ರಾಜಣ್ಣ ಮಾತ್ರ ಭೇಟಿ ನೀಡಿದ್ದು.
ಅಕ್ಷರ ದಾಸೋಹದ ಜಿಲ್ಲಾ ಮಟ್ಟದ ಅಧಿಕಾರಿ ಘಟನೆ ನಡೆದ ಸ್ಥಳಕ್ಕೆ ಗೈರು ಹಾಜರಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಪಂಚಾಯತಿಯ ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಸುಧಾಕರ್ ಘಟನೆ ನಡೆದು ನಾಲ್ಕು ದಿನವಾದರೂ ಪಾವಗಡ ತಾಲ್ಲೂಕಿನ ಕೋಣನ ಕುರಿಕೆ ಪ್ರಾಥಮಿಕ ಶಾಲೆಗೆ ಹೋಗದೆ ಇರುವುದು ಮೇಲಾಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸರ್ಕಾರಿ ಶಾಲೆಗಳ ಬಗ್ಗೆ ಮೇಲಾಧಿಕಾರಿಗಳ
ಕಾರ್ಯವೈಖರಿಯೇ ಈ ರೀತಿ ಆದರೆ ಕೆಳಹಂತದ ಅಧಿಕಾರಿಗಳ ಕಾರ್ಯ ವೈಖರಿ ಇನ್ನು ಯಾವ ರೀತಿ ಇರುತ್ತದೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಯ ಅಂಶವಾಗಿದೆ.
ಈಗಲಾದರೂ ಮೇಲಾಧಿಕಾರಿಗಳು ಘಟನೆ ಬಗ್ಗೆ ಎಚ್ಚೆತ್ತು ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಬೇಕೆಂಬುದು ತಾಲ್ಲೂಕಿನ ಜನರ ಆಶಯವಾಗಿದೆ.
ವರದಿ: ಶ್ರೀನಿವಾಸಲು .ಎ