ಮಂಡ್ಯ ಮೇ ೨೧ :- ಸಕ್ಕರೆ ನಾಡಲ್ಲಿ ದ್ವಿಶತಕ ಬಾರಿಸಿದ ಕೊರೋನಾ ವಲಸಿಗರ ಆವಳಿಗೆ ಅಕ್ಷರ ಸಹಾ ಮಂಡ್ಯ ತತ್ತರಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು ೨೦೧ ಪ್ರಕರಣಗಳು ದಾಖಲಾಗಿವೆ. ಕೆ.ಆರ್.ಪೇಟೆ ೧೨, ನಾಗಮಂಗಲ ೧, ಮಳವಳ್ಳಿ ೧, ಹಾಗೂ ಪಾಂಡವಪುರ ೧ ಪ್ರಕರಣಗಳು ಕೆ.ಆರ್.ಪೇಟೆ ತಾಲ್ಲೂಕಿನ ೧೨ ಜನರು ಮುಂಬೈ ಪ್ರಯಾಣ ಬೆಳೆಸಿದ್ದವರು. ಮುಂಬೈನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದ ಇವರು ಮೇ 14 ನಂತರ ಮುಂಬೈ ಬಿಟ್ಟು ಆನೆಗೊಳ ಚೆಕ್ ಪೋಸ್ಟ್ ಮೂಲಕ ಆಗಮಿಸಿದ್ದರು. ಇವರಿಗೆಲ್ಲಾ ಪಾಜಿಟೀವ್ ಪ್ರಕರಣಗಳು ಬಂದಿದೆ
ಇಲ್ಲಿಯವರೆಗೂ ತಬ್ಲಿಘಿ, ನಂಜನಗೂಡು ಜುಬ್ಲಿಯಂಟ್ ಕಾರ್ಖಾನೆಯವರು ಮತ್ತು ಮುಂಬೈ ವಲಸಿಗರಲ್ಲಿ ಕೊರೋನಾ ಬಂದಿದೆ ಸ್ಥಳೀಯವಾಗಿ ಮಂಡ್ಯದಲ್ಲಿ ಪ್ರಕರಣಗಳು ಬಂದಿಲ್ಲಾ ಆದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್ ಮಂಡ್ಯ ಜನರಲ್ಲಿ ಮನವಿ ಮಾಡಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ 350 ಬೆಡ್ ವ್ಯವಸ್ಥೆ ಮತ್ತು ಮಂಡ್ಯ ಒಕ್ಕಲಿಗರ ಭವನವನ್ನ ಕೊವಿಡ್ ಕೇಂದ್ರವಾಗಿ ಮಾಡಲಾಗಿದೆ ಇತರೆ ಆಸ್ಪತ್ರೆಗಳ ಜೊತೆ ಸಂಪರ್ಕ ಇದ್ದೇವೆ ಎಂದು ತಿಳಿಸಿದರು.