IMG 20241211 WA0046

ಪಾವಗಡ : ಲಾರಿಗೆ ಬೊಲೆರೋ ಡಿಕ್ಕಿ: ಚಾಲಕ ಸಾವು…..!

DISTRICT NEWS ತುಮಕೂರು

ಲಾರಿಗೆ ಬೊಲೆರೋ ಡಿಕ್ಕಿ: ಚಾಲಕ ಸಾವು.

ಪಾವಗಡ : ಪಟ್ಟಣದ ತುಮಕೂರು ರಸ್ತೆಯ
ಎಸ್ ಆರ್ ಎಸ್ ಪೆಟ್ರೋಲ್ ಬಂಕ್ ಬಳಿ. ಚಲಿಸುತ್ತಿರುವ ಲಾರಿಯ ಹಿಂಬದಿಗೆ ಬೊಲೆರೋ ಡಿಕ್ಕಿ ಯಾಗಿ. ಬೊಲೆರೋ ವಾಹನ ಚಾಲಕ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೃತ ಚಾಲಕ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನ ಹಳ್ಳಿಯಿ ಗಿರೀಶ್( 21 ) ಎಂದು ತಿಳಿದುಬಂದಿದೆ.ಇದ್ದಕ್ಕಿದ್ದಂತೆ ಓಮನಿಯೊಂದು ತುಮಕೂರು ರಸ್ತೆಯ ಎಸ್ ಆರ್ ಎಸ್ ಪೆಟ್ರೋಲ್ ಬಂಕ್ ಕಡೆ ಯು ಟರ್ನ್ ಮಾಡಿದಾಗ.

ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ವೇಗ ಕಡಿಮೆ ಮಾಡಿ ಓಮನಿಗೆ ಡಿಕ್ಕಿಯಾಗಿದೆ.ಆದರೆ ಲಾರಿಯ ಹಿಂದೆ ಬರುತ್ತಿದ್ದ ಬೊಲೆರೋ ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ಬೋಲೇರೋ ಚಾಲಕ ಸ್ಥಳದಲ್ಲಿಯೇ ಮೃತ್ಪಟ್ಟಿದ್ದಾನೆ.

ವಿಷಯ ತಿಳಿದ ನಂತರ ಪೊಲೀಸ್ ಠಾಣೆಯ
ಎಸ್ ಐ ಗುರುನಾಥ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ವರದಿ. ಶ್ರೀನಿವಾಸಲು. A

Leave a Reply

Your email address will not be published. Required fields are marked *