IMG 20240703 WA0028

ಪಾವಗಡ: ಬೆಳೆ ವಿಮೆ ಮಾಡಿಸುವಂತೆ ರೈತರಲ್ಲಿ ಮನವಿ….!

DISTRICT NEWS ತುಮಕೂರು

ಬೆಳೆ ವಿಮೆ ಮಾಡಿಸುವಂತೆ ರೈತರಲ್ಲಿ ಮನವಿ.
.
ಪಾವಗಡ : ರೈತರು ಬೆಳೆ ವಿಮೆ ಮಾಡಿಸಿಕೊಂಡು ಮುಂದೆ ಆಗಬಹುದಾದ ನಷ್ಟವನ್ನು ತಡೆಯಬಹುದು ಎಂದು ಕೃಷಿ ಅಧಿಕಾರಿ ವೇಣುಗೋಪಾಲ್ ತಿಳಿಸಿದರು.

ತಾಲ್ಲೂಕಿನ ಬ್ಯಾಡನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳೆ ವಿಮೆಯ ಅರಿವು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಬೆಳೆ ಸಮೀಕ್ಷೆಯನ್ನು ರೈತರೇ ತಮ್ಮ ಜಮೀನಿನ ಮಾಹಿತಿಯನ್ನು ರೈತರ ಬೆಳೆ ಸಮೀಕ್ಷೇ ಆಪ್ ನಲ್ಲಿ ಅಪ್ಲೋಡ್ ಮಾಡುವುದು.
ಮತ್ತು ವಿಮೆ ಕಟ್ಟಿ ಬರ, ಪ್ರವಾಹ, ನೆರೆ, ಅಕಾಲಿಕ ಅವಿಕಲ್ಲು ಮಳೆ ಇತರೆ ಸಂಕಷ್ಟದಿಂದ ಪಾರಾಗಬಹುದು ಎಂದು ತಿಳಿಸಿದರು.

ಶೆಂಗಾ ಬೆಳೆಗೆ ಎಕರೆಗೆ 441 ರೂ, ತೊಗರಿ 388ರೂ ಬೆಳೆವಿಮೆ ಕಟ್ಟಿ, ಬೆಳೆ ಸಮೀಕ್ಷೆಯಲ್ಲಿ ಅಪ್ಲೋಡ್ ಮಾಡುವುದು.
ಪಿಎಂಕಿಸಾನ್ ಯೋಜನೆಯ ekyc ಮಾಡದಿದ್ದಲ್ಲಿ ಮುಂದಿನ ಕಂತಿನ ಹಣ ಪಾವತಿ ಆಗುವುದಿಲ್ಲ ಅದ್ದರಿಂದ ಕೂಡಲೇ ಮಾಡಿಸಿಕೊಳ್ಳಲು ಸೂಚಿಸಿದರು. ಇದೆ ರೀತಿ ಎಲ್ಲಾ ಪಂಚಾಯತ್ ಮಟ್ಟದಲ್ಲೂ ಮಾಹಿತಿ ನೀಡುತ್ತಿದ್ದೇವೆ ಎಲ್ಲಾ ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಬೆಳೆ ವಿಮೆ, ಬೆಳೆ ಸಮೀಕ್ಷೆ ಪಿಎಂಕಿಸಾನ್ ekyc ಕುರಿತು ಕೃಷಿ ಅಧಿಕಾರಿ ವೇಣುಗೋಪಾಲ್ ರೈತರಿಗೆ ಮಾಹಿತಿ ನೀಡಿದರು.

ಕಂದಾಯ ಅಧಿಕಾರಿ ಗಿರೀಶ್ ಮಾತನಾಡಿ ಪೌತಿ ಖಾತೆ ಆಂದೋಲನದ ಬಗ್ಗೆ ಮಾಹಿತಿ ನೀಡಿ ತ್ವರಿತವಾಗಿ ಪೌತಿ ಖಾತೆ ಮಾಡಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಯಾಡನೂರ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ವರದಿ. ಶ್ರೀನಿವಾಸಲು. A