ಆನೇಕಲ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷ್ಣದೊಡ್ಡಿಯಲ್ಲಿ ಏಳನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಕರೋನ ವಾರಿಯರ್ಸ್ ಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಶ್ರೀಯುತ ವಿಶ್ವನಾಥ್ ವೃತ್ತ ಪೊಲೀಸ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಂಗನವಾಡಿ ಇಲಾಖೆಯ ಯೋಜನಾಧಿಕಾರಿಯಾಗದ ಡಾ. ಕವಿತಾ ಶಿಕ್ಷಕರ ಸಂಘದ ಅಧ್ಯಕ್ಷರು ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಶ್ರೀಯುತ ನಾಗರಾಜುರವರು ಮತ್ತು ಅನೇಕ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು ಪ್ರಾರ್ಥನೆಯನ್ನು ಶಾಲಾಮಕ್ಕಳು ನೆರವೇರಿಸಿದರು. ಶಾಲೆಯ ಶಿಕ್ಷಕರಾದ ಶ್ರೀಮತಿ ದೀಪಾ ಸ್ವಾಗತಿಸಿದರು.ಎಲ್ಲಾ ಗಣ್ಯರು ಉಧ್ಘಾಟನೆಯನ್ನು ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಶ್ರೀಮತಿ ವತ್ಸಲ ಸುರೇಶ್ ಕಾರ್ಯಕ್ರಮದ ಉದ್ದೇಶ ಗಳನ್ನು ಕುರಿತು ಮಾತನಾಡಿದರು. ಕರೋನಾ ದಂತಹ ದುರಿತ ಕಾಲದಲ್ಲಿ ದುಡಿದ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರು, ಆರಕ್ಷಕ ಪಡೆಯ ಕಾರ್ಯ ಶ್ಲಾಘನೀಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದು ವಿಶ್ವನಾಥ್ ಸರ್ ಅಭಿಪ್ರಾಯ ಪಟ್ಟರು
. ಶ್ರೀಯುತ ನಾಗಲೇಖರವರು ಸಭೆಯನ್ನು ಕುರಿತು ಮಾತನಾಡಿದರು. ಗೌರವ ಸಮರ್ಪಿಸಿ ಗಣ್ಯರು ಅಭಿನಂದಿಸಿದರು. ಕಾರ್ಯಕ್ರಮದ ಯೋಜನೆಯನ್ನು ಮಾಡಿದ ಶ್ರೀ ರಾಜಮೋಹನ್ ಹಾಗೂ ಶಾಲಾ ಸಿಬ್ಬಂದಿಗಳನ್ನು ಎಲ್ಲರು ಕೊಂಡಾಡಿದರು. ಕಾರ್ಯಕ್ರಮದ ನೆರವನಿತ್ತ ಉತ್ಸಾಹಿ ಯುವಕ ಶ್ರೀಯುತ ನವೀನ್ ಮತ್ತೆಲ್ಲ ದಾನಿಗಳನ್ನು ಸ್ಮರಿಸಲಾಯಿತು. ನಂತರ ಶಿಕ್ಷಕರನ್ನು ಆಶಾ ಕಾರ್ಯಕರ್ತೆಯರ ನಂಗ ಅಂಗನವಾಡಿ ಕಾರ್ಯಕರ್ತರನ್ನು ಮಹಿಳಾ ಪೊಲೀಸ್ ಪೇದೆಗಳನ್ನು ವೈದ್ಯರನ್ನು ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಅವರು ಸಹ ಭಾಗವಹಿಸಿದ್ದರು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಶ್ರೀ ರಾಜಶೇಖರ ರೆಡ್ಡಿ, ಎಂ.ಸಿ ರಾಜಣ್ಣ ಮತ್ತಿತರರು ಹಾಜರಿದ್ದರು.