IMG 20211121 WA0019

ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ…!

DISTRICT NEWS ತುಮಕೂರು

* ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ*

*ಜನಶಕ್ತಿ, ರೈತ ಶಕ್ತಿಗೆ ಹೆದರಿ ಕೇಂದ್ರ ಸರಕಾರ ಯೂಟರ್ನ್*

ತುಮಕೂರು ನ 21 :-  ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಈ ದೇಶಕ್ಕೆ ಸಲ್ಲಿಸಿರುವ ಸೇವೆಗೆ ದೊಡ್ಡ ಇತಿಹಾಸವಿದೆ. ಈ ದೇಶದ ಧ್ವಜದ ಮೂಲ ಹಕ್ಕುದಾರರು ನಾವು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಸೇವೆ ಅನುಪಮ.

ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ನಾವೆಲ್ಲ ಪಕ್ಷದ ನಾಯಕರು ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ.

ಕಳೆದ 15 ದಿನಗಳಿಂದ ನೀವೆಲ್ಲ ಗಮನಿಸುತ್ತಿದ್ದೀರಿ. ಈ ದೇಶದ ಜನರ ಶಕ್ತಿ, ರೈತರ ಶಕ್ತಿ, ರೈತರ ಹೋರಾಟ 400 ಸೀಟುಗಳಿರುವ ಕೇಂದ್ರದ ಬಿಜೆಪಿ ಸರಕಾರ ತನ್ನ ನಿಲುವುಗಳಿಂದ ಯೂಟರ್ನ್ ತೆಗೆದುಕೊಳ್ಳುವಂತೆ ಮಾಡಿದೆ.

IMG 20211121 WA0017

ನನಗೊಂದು ನಂಬಿಕೆ. ಈ ದೇಶದ ಯುವಕರು, ರೈತರು, ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು, ಕಾರ್ಮಿಕರು, ಜನ ಸಾಮಾನ್ಯರು ಹೋರಾಟಕ್ಕೆ ಇಳಿದರೆ ಅದರ ವಿರುದ್ಧ ಯಾವ ಸರಕಾರವೂ ನಿಲ್ಲಲು ಸಾಧ್ಯವಿಲ್ಲ. ಮಾಡಿದ ತಪ್ಪು ತಿದ್ದಿಕೊಳ್ಳದೆ ಆ ಸರಕಾರಕ್ಕೆ ವಿಧಿಯಿಲ್ಲ.

ಜನ ಎದ್ದು ನಿಂತರೆ, ಹೋರಾಟ ಶುರು ಮಾಡಿದರೆ ಇಂತಹ ಬಲಿಷ್ಟ ಬಿಜೆಪಿ ಸರಕಾರವನ್ನೂ ಬದಲಾವಣೆ ಮಾಡಲು ಸಾಧ್ಯ. ಯಾರೂ ಈ ಶಕ್ತಿ ಮುಂದೆ ನಿಲ್ಲಲು ಸಾಧ್ಯವಿಲ್ಲ.

ಹಾನಗಲ್ ಸೇರಿದಂತೆ ಉಪಚುನಾವಣೆಗಳ ಫಲಿತಾಂಶ, ರೈತರ ಹೋರಾಟಕ್ಕೆ ಕೇಂದ್ರ ಸರಕಾರ ಮಣಿದಿರುವುದೇ ಇದಕ್ಕೆ ಸಾಕ್ಷಿ.

ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಜನಶಕ್ತಿಯ ಜಯ ಅಂದರೆ ಇದೇ.

ಒಂದು ವರ್ಷ ಕಳೆದರೂ ಕೃಷಿ, ಮನೆ-ಮಠ ಬಿಟ್ಟು, ಪ್ರಾಣದ ಹಂಗು ತೊರೆದು ಬೀದಿಗಿಳಿದು ಹೋರಾಟ ಮಾಡಿದ ರೈತರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

IMG 20211121 WA0011

*ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ*

ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ತಲಾ 5 ಎಕರೆ ಜಮೀನನ್ನು ಉಚಿತವಾಗಿ ಕೊಡಬೇಕು. ಜತೆಗೆ ಆರ್ಥಿಕ ಪರಿಹಾರವನ್ನೂ ಕೊಡಬೇಕು.

ಇಲ್ಲೊಂದು ಮಾತು ನೆನಪಿಸುತ್ತೇನೆ. ಕೇಂದ್ರ ಸರಕಾರ ಹಿಂದೆ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತಂದಾಗ ರೈತರ ಆದಾಯ ಡಬಲ್ ಆಗುತ್ತದೆ ಎಂದಿತ್ತು. ಯಾವ ರೈತರದಾದರೂ ವ್ಯಾಪಾರ, ವಹಿವಾಟು, ಆದಾಯ ಡಬಲ್ ಆಗಿದೆಯಾ? ಉಹುಂ.. ಯಾರಿಗೂ ಇಲ್ಲ.

ಹಿಂದೆ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ, ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರ ಇದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ 352 ರುಪಾಯಿ ಇತ್ತು. ಈಗ 952 ರುಪಾಯಿ ಆಗಿದೆ. ಹೆಣ್ಣು ಮಕ್ಕಳು, ನನ್ನ ಸಹೋದರಿಯರು ಪಡಬಾರದ ಪಾಡು ಪಡುತ್ತಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ದಿನ ನಿಮ್ಮ ಪಿಕ್ ಪ್ಯಾಕೆಟ್ ಮಾಡುತ್ತಿತ್ತು. ಡೀಸೆಲ್, ಪೆಟ್ರೋಲ್ ಬೆಲೆ ದಿನಾ ಜಾಸ್ತಿ ಆಯ್ತು. ಎಷ್ಟು ಹೋರಾಟ ಮಾಡಿದರೂ ಜಗ್ಗಲಿಲ್ಲ. ಉಪಚುನಾವಣೆ ಫಲಿತಾಂಶ ಬಂತು. ರಾತ್ರೋ ರಾತ್ರಿ ಬೆಲೆ ಕಡಿಮೆ ಆಯ್ತು.

ನಮ್ಮ ಸಿದ್ದರಾಮಯ್ಯನೋರು ಒಂದು ಮಾತು ಹೇಳ್ತಾ ಇರ್ತಾರೆ. ಪೆಟ್ರೋಲ್, ಡೀಸೆಲ್ ಮೇಲೆ 50 ರು. ಟ್ಯಾಕ್ಸ್ ಹಾಕ್ತಾ ಇದ್ದಾರೆ. ಕಚ್ಚಾತೈಲ ಬೆಲೆಗೆ ಹೋಲಿಸಿದರೆ ಡೀಸೆಲ್ ರೇಟ್ 60 ರು. ಇರಬೇಕು. ಆದರೆ ಇವತ್ತು ಅದರ ಬೆಲೆ ಎಷ್ಟಿದೆ?

ಹೀಗಾಗಿ ನಮ್ಮ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಅದು ನಿಮ್ಮ ಗಮನದಲ್ಲಿರಬೇಕು.

*ಎಪಿಎಂಸಿ, ಭೂಸುಧಾರಣೆ ತಿದ್ದಪಡಿ ಕಾಯ್ದೆ ರಾಜ್ಯದಲ್ಲೂ ರದ್ದಾಗಬೇಕು*

ರಾಜ್ಯ ಸರಕಾರ ಎಪಿಎಂಸಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು. ಈ ಬಗ್ಗೆ ಕಾಂಗ್ರೆಸ್ ಹೋರಾಟ ಕುರಿತು ಮೂರ್ನಾಲ್ಕು ದಿನದಲ್ಲಿ ಚರ್ಚೆ ಮಾಡಿ ಸಂದೇಶ ಕೊಡುತ್ತೇವೆ.

ಈಗಾಗಲೇ ವಿಧಾನಸೌಧದ ಒಳಗೆ, ಹೊರಗೆ ಹೋರಾಟ ಮಾಡಿದ್ದೇವೆ. ಧ್ವನಿ ಎತ್ತಿದ್ದೇವೆ. ಮುಂದೆ ಯಾವ ರೀತಿ ಅಭಿಯಾನ ಎಂದು ಸದ್ಯದಲ್ಲೇ ತಿಳಿಸುತ್ತೇವೆ.

IMG 20211121 WA0020

*ಪಿಎಂ, ಸಿಎಂ ಉತ್ತರಿಸಲಿ*

ಮಾಧ್ಯಮಗಳಲ್ಲಿ ಮತ್ತೊಂದು ವರದಿ ಬಂದಿದೆ. ಯಾವ, ಯಾವ ಇಲಾಖೆಯಲ್ಲಿ ಮಂತ್ರಿಗಳು, ಅಧಿಕಾರಿಗಳು ಮತ್ತಿತರರಿಗೆ ಎಷ್ಟೆಷ್ಟು ಪರ್ಸೆಂಟೇಜ್ ಲಂಚ ಹೋಗುತ್ತಿದೆ ಎಂದು ವರದಿ ಆಗಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಆಯಾ ಇಲಾಖೆಗಳ ಮಂತ್ರಿಗಳು ಉತ್ತರ ಕೊಡಬೇಕು.

ಈ ದೇಶದಲ್ಲಿ ಎಲ್ಲ ವರ್ಗದ ಜನರಿಗೆ ಅನುಕೂಲ ಆಗಬೇಕು. ಕೊರೋನಾ ಸಂದರ್ಭದಲ್ಲಿ ಜನರಿಗೆ ಪರಿಹಾರ ಸಿಕ್ಕಿಲ್ಲ. ಅನುಕೂಲ ಆಗಿಲ್ಲ. ಅವರಿಗೆ ಪರಿಹಾರ ಸಿಗಬೇಕು.

ನಾನು ಸಿಂಧಗಿ, ಹಾನಗಲ್ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೇಳಿದ್ದ ಪ್ರಶ್ನೆಯನ್ನೇ ನಿಮಗೂ ಕೇಳುತ್ತೇನೆ. ನಿಮ್ಮ ಆದಾಯ ಡಬಲ್ ಆಯ್ತಾ? ಪರಿಹಾರ ಸಿಕ್ಕಿತಾ? ನಿಮ್ಮ ಅಕೌಂಟ್ ಗೆ 15 ಲಕ್ಷ ಬಂತಾ? ಕಾರ್ಮಿಕರು, ನೇಕಾರರು, ದರ್ಜಿಗಳು, ಅಗಸರು, ಬೀದಿ ವ್ಯಾಪಾರಿಗಳಿಗೆ ಪರಿಹಾರ ಸಿಕ್ಕಿತಾ?

ಕೇಂದ್ರದ 20 ಲಕ್ಷ ಕೋಟಿ ರು., ರಾಜ್ಯದ 19000 ಕೋಟಿ ರು. ಪರಿಹಾರ ಘೋಷಣೆಯಿಂದ ಯಾರಿಗಾದರೂ ಸಹಾಯ ಆಯ್ತಾ? ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

ಕೊರೋನಾ ಸಂದರ್ಭದಲ್ಲಿ ಎಲ್ಲದರಲ್ಲೂ ಲಂಚ ತಾಂಡವವಾಡಿತು. ಲಾಕ್ ಡೌನ್ ಆಯ್ತು. ಸೀಲ್ ಡೌನ್ ಆಯ್ತು. ಆಗ ಕಾಂಗ್ರೆಸ್ ನಿಮ್ಮ ನೆರವಿಗೆ ಬಂತು. ಒಂದು ಕೋಟಿ ಚೆಕ್ ಕೊಟ್ಟು ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಸಿತು.

IMG 20211121 WA0012

*ಹೋಲಿಕೆ ಮಾಡಿ ನೋಡಿ*

ಕಾಂಗ್ರೆಸ್ ಸರಕಾರ ಇದ್ದಾಗ ಜನರಿಗೆ ಏನು ಅನುಕೂಲವಾಗಿತ್ತು. ಈಗ ಬಿಜೆಪಿ ಸರಕಾರದಿಂದ ಯಾವ ಅನಾನುಕೂಲವಾಗಿದೆ ಎಂಬುದನ್ನು ನೀವೇ ಹೋಲಿಸಿ ನೋಡಿ. ಕಾಂಗ್ರೆಸ್ ಎಲ್ಲ ವರ್ಗದವರ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ನೀವು ಅಧಿಕಾರಕ್ಕೆ ಬಂದಂತೆ. ಹೀಗಾಗಿ ಈ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ನೀವೆಲ್ಲ ಸಂಕಲ್ಪ ಮಾಡಬೇಕು.

ಜನಜಾಗೃತಿ ಅಭಿಯಾನವನ್ನು ನಾಡಿನ ಮೂಲೆ, ಮೂಲೆಗಳಲ್ಲೂ ಮಾಡಬೇಕು. ಜನರನ್ನು ಎಚ್ಚರಿಸಬೇಕು. ಬದಲಾವಣೆ ಬಯಸಿರುವ ಅವರಿಗೆ ಶಕ್ತಿ ತುಂಬಬೇಕು.

*ಸದಸ್ಯತ್ವ ನೋಂದಣಿ ಪರಿಣಾಮಕಾರಿಯಾಗಲಿ*

ಕಾಂಗ್ರೆಸ್ ಸದಸ್ಯತ್ವ ನೋಂದಣಿ ದಾಖಲೆ ಪ್ರಮಾಣದಲ್ಲಿ ಆಗಬೇಕು. ಎಲ್ಲರೂ ಇದರಲ್ಲಿ ಕಾಯಾ, ವಾಚಾ, ಮನಸಾ ಪಾಲ್ಗೊಳ್ಳಬೇಕು. ಇದು ಕೂಡ ಬದಲಾವಣೆಯ ಮುಖ್ಯ ಭಾಗವಾಗಬೇಕು.