ಕಳಪೆ ಬೀಜ ಮಾರಾಟ : ರೈತರ ಆಕ್ರೋಶ
ವೈ.ಎನ್.ಹೊಸಕೋಟೆ : ಕಲಬೆರಕೆ ಬಿತ್ತನೆ ಬೀಜ ನೀಡಿದ ಪರಿಣಾಮ ಫಸಲು ಕಲಬೆರಕೆಯಾಗಿ ಮಾರಾಟವಾಗದೆ ನಷ್ಟ ಸಂಭವಿಸಿದೆ ಎಂದು ತಿಪ್ಪಗಾನಹಳ್ಳಿಯ ರೈತ ಚಿರಂಜೀವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
YNH ಹೋಬಳಿ ಕೇಂದ್ರದ ಭಾಗಲಕ್ಷ್ಮಿ ಏಜೆನ್ಸೀಸ್‍ನಲ್ಲಿ ರೈತ ಈರುಳ್ಳಿ ಬೀಜ ಖರೀದಿಸಿ ಬಿತ್ತನ ಮಾಡಿದ್ದಾರೆ. ಪಸ್ತುತ ಫಸಲು ಕಟಾವಿಗೆ ಬಂದಿದೆ. ಕಟಾವು ಮಾಡಿ ನೋಡಿದಾಗ ಫಸಲಿನಲ್ಲಿ ಜಾತಿಗೊಂದು ತಳಿಗೊಂದು ಈರುಳ್ಳಿ ಇರುವುದು ಕಂಡುಬಂದಿದೆ. ಇದನ್ನು ಕಂಡ ವ್ಯಾಪಾರಸ್ಥರು ಯಾರೊಬ್ಬರೂ ಫಸಲನ್ನು ಖರೀದಿ ಮಾಡುತ್ತಿಲ್ಲ. ಇದರಿಂದ ನಮಗೆ ನಷ್ಟವಾಗಿದೆ. ಇದಕ್ಕೆಲ್ಲಾ ಕಲಬೆರಕೆ ಬಿತ್ತನೆ ಬೀಜವೇ ಕಾಣವಾಗಿದೆ. ಬೀಜ ಮಾರಾಟಗಾರರು ನಮಗೆ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ರೈತರಾದ ರಾಮಕೃಷ್ಣ, ಮಂಗಳವಾಡ ಮಂಜುನಾಥ ಇತರರು ತಮ್ಮ ಜಮೀನುಗಳಲ್ಲಿರುವ ಫಸಲನ್ನು ಪರೀಕ್ಷಿಸಿದಾಗ ಅದರಲ್ಲೂ ಇದೇ ರೀತಿಯ ಮಿಶ್ರಣ ತಳಿ ಕಂಡುಬಂದಿದೆ. ತಕ್ಷಣ ರೈತರು ಫಸಲನ್ನು ತಂದು ಬೀಜದ ಅಂಗಡಿಯ ಮುಂದೆ ಸುರಿದು ಮೋಸದ ಬಗ್ಗೆ ಆಕ್ರೋಶÀ ವ್ಯಕ್ತಪಡಿಸಿದರು.
ಹೋಬಳಿಯಲ್ಲಿ ಅನೇಕ ಬೀಜದ ಅಂಗಡಿಗಳಿದ್ದು, ಬಹುಭಾಗದ ವ್ಯಾಪಾರಸ್ಥರು ಇದೇ ರೀತಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೆಲವು ರೈತರು ಮೋಸ ಹೋಗಿದ್ದರೂ ಸುಮ್ಮನಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಾಗಲೀ ಇಲಾಖೆಯಾಗಲೀ ಯಾವುದೇ ಕ್ರಮ ಜರುಗಿಸದೆ ಜಾಣಕುರುಡರಂತೆ ವರ್ತಿಸುತ್ತಿದೆ. ಹಾಗಾಗಿ ಪ್ರತಿಯೊಬ್ಬ ವ್ಯಾಪಾರಿಯೂ ರೈತರನ್ನು ಮೋಸ ಮಾಡುತ್ತಿದ್ದಾರೆ ಎಂದು ರೈತ ಹನುಮಂತಪ್ಪ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಯುವಮುಖಂಡÀ ಟಿ.ಜೆ.ವಿಶ್ವನಾಥ ಮತ್ತು ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ವೈ.ಸಿ.ಹನುಮಂತರಾಯ ರೈತರ ಮೋಸದ ಬಗ್ಗೆ ಕಂಪನಿಯವರ ಜೊತೆ ಮಾತನಾಡಿ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ತಾಕೀತು ಮಾಡಿದರು.
ಈ ಬಗ್ಗೆ ಬೀಜ ಪೂರೈಕೆದಾರರಲ್ಲಿ ವಿಚಾರಿಸಿದಾಗ ಇದರಲ್ಲಿ ನಮ್ಮದೇನು ತಪ್ಪಿಲ್ಲ. ಬೆಂಗಳೂರಿನ ಶ್ರೀ ಆರ್ಗೋ ಸೀಡ್ಸ್ ಕಂಪನಿಯವರು ಯಾವರೀತಿ ಪೂರೈಕೆ ಮಾಡಿದ್ದಾರೆಯೋ ಅದೇ ರೀತಿ ನಿಮಗೆ ನೀಡಿದ್ದೇವೆ. ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದೇವೆ. ಅವರು 2-3 ದಿನಗಳಲ್ಲಿ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಬೀಜ ಮಾರಾಟಗಾರರಾದ ರಾಧಾಕೃಷ್ಣ ಸಮಜಾಯಿಶಿ ನೀಡಿದ್ದಾರೆ.
ಇಂತಹ ಅನೇಕ ಘಟನೆಗಳು ಹೋಬಳಿಯಾಧ್ಯಂತ ನಡೆಯುತ್ತಿವೆ. ಮೋಸದ ವಿಚಾರವಾಗಿ ಹಲವಾರು ಬಾರಿ ಜಿಲ್ಲಾ ಮಟ್ಟದ ತನಿಖಾಧಿಕಾರಿಗಳು ನಾಮಕಾವಸ್ಥೆಗೆ ಅಂಗಡಿಗಳ ಪರಿಶೀಲನೆ ನಡೆಸಿ ಬಿತ್ತನಬೀಜ, ಕೀಟನಾಶಕ ಇತ್ಯಾದಿಗಳ ಮಾದರಿಗಳನ್ನು ತನಿಖೆÉಗೆ ತೆಗೆದುಕೊಂಡು ಹೋಗಿರುವುದು ಬಿಟ್ಟರೆ ಯಾವುದೇ ಪ್ರಯೋಜನ ಆಗಿರುವುದಿಲ್ಲ ಎಂದು ರೈತ ನಾರಾಯಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ: ರಾಮಚಂದ್ರ