ಮಧುಗಿರಿ : ಪಕ್ಷಾತೀತಾವಾಗಿ ಸೌಲಭ್ಯಗಳನ್ನು ಆರ್ಹ ಜನರಿಗೆ ಪ್ರಮಾಣಿಕವಾಗಿ ತಲುಪಿಸಿದ್ದೇನೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶ ಹೊಂದಿರಲ್ಲಿಲ್ಲವೆಂದು ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಐ ಡಿ ಹಳ್ಳಿ ಹೋಬಳಿಯ ಚೆನ್ನ ಮಲ್ಲೇನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರು ರಾಜ್ಯದ ಎಲ್ಲಾ ವರ್ಗದವರ ಅನೂಕೂಲಕ್ಕಾಗಿ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಿದರು.
ನನ್ನ ಅಧಿಕಾರಾವಧಿಯಲ್ಲಿ ಬರಗಾಲ ಪೀಡಿತ ಪ್ರದೇಶವಾದ ಈ ತಾಲೂಕಿನ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಪ್ರತಿಯೊಬ್ಬರಿಗೂ ಪಡಿತರ ವ್ಯವಸ್ಥೆ , ಶಾಲಾ ಮಕ್ಕಳಿಗೆ ಬಸ್ ಪಾಸ್ ಹಾಗೂ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿಸಲಾಯಿತು. ಪೋಷಕರು ಹಾಗೂ ವಿದ್ಯಾರ್ಥಿಗಳ ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಶಾಲೆಗಳಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಿಗೆ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು. ಗುಡಿಸಲು ಮುಕ್ತ ತಾಲೂಕುನನ್ನಾಗಿ ಮಾಡಲು ಸುಮಾರು 16 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡೆ ಆದರೆ ಕಳೆದ 5 ವರ್ಷಗಳಲ್ಲಿ ಎಷ್ಟು ಮನೆಗಳು ನಿರ್ಮಾಣವಾಗಿದೆ ಎಂಬುದನ್ನು ಇಲ್ಲಿನ ಜನರೆ ತಿಳಿಸಬೇಕು..?
2023 ರ ಚುನಾವಣೆಯಲ್ಲಿ ಬಹುತೇಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟವಾದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.
ನಾನು ಶಾಸಕನಾಗಿದ್ದಾಗ ನೀವುಗಳು ಸ್ಪಷ್ಟ ಬಹುಮತ ನೀಡಿರಲಿಲ್ಲ ಅದರೂ ಸಹ ಉತ್ತಮ ಗುಣಮಟ್ಟದ ರಸ್ತೆ ಹಾಗೂ ಅನೇಕ ಸೌಲಭ್ಯಗಳನ್ನು ಮಂಜೂರು ಮಾಡಿ ಕೊಟ್ಟಿದ್ದೆ.
ಇಲ್ಲಿನ ಗ್ರಾಮಸ್ಥರು ಇಷ್ಟೂ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಎಂದು ಮಾಡಿರಲಿಲ್ಲ ಆದರೆ ಇಂದೂ ಗ್ರಾಮದ ಎಲ್ಲಾರೂ ಒಗ್ಗಟ್ಟಿನಿಂದ ಸೇರಿ ನನಗೆ ಬೆಂಬಲಿಸುತ್ತಿರುವುದಕ್ಕೆ ನಾ ಅಬಾರಿ ಯಾಗಿದ್ದೇನೆ.
ತಾಲೂಕಿನ ವಿದ್ಯಾವಂತ ಯುವಕರಿಗೆ ಹಾಗೂ ದುಡಿಯುವ ಕೈಗಳು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲಾಗುವುದು ಹಾಗೂ ಗ್ರಾಮಸ್ಥರ ಬೇಡಿಕೆಯಂತೆ ಡಿಜಿಟಲ್ ಲೈಬ್ರೆರಿ ಹಾಗೂ ರಸ್ತೆ , ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಮಾಜಿ ತಾ.ಪಂ ಸದಸ್ಯ ಹಾಗೂ ವಕೀಲ ಕೆ.ಎ.ರಾಜು ಮಾತನಾಡಿ ನಮ್ಮ ಗ್ರಾಮದಲ್ಲಿ ಕಳೆದ ಚುನಾವಣೆಯಲ್ಲಿ ಬಹುಮತಗಳಿಸಲು ಸಾಧ್ಯವಾಗಲಿಲ್ಲ ಅಂತಹ ಸಂಧರ್ಭದಲ್ಲಿಯು ರಾಜಣ್ಣನವರು ನಮ್ಮ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದರು.ಮುಂದಿನ ವಿಧಾನ ಸಭೆಗೆ ಎಲ್ಲಾರೂ ಸೇರಿ ಅವರನ್ನು ಮತ್ತೊಮ್ಮೆ ಬಹುಮತ ನೀಡುವುದರ ಮೂಲಕ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಕೆ.ಎನ್ ರಾಜಣ್ಣ ನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಜಿ.ಪಂ ಸದಸ್ಯ ಜಿ.ಜೆ.ರಾಜಣ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್ .ಮಲ್ಲಿಕಾರ್ಜುನಯ್ಯ , ಮಾಜಿ ತಾ.ಪಂ ಅಧ್ಯಕ್ಷೆ ಇಂದಿರಾದೇನನಾಯ್ಕ , ರಾಜ ಮೋಹನ್. ವಕೀಲ ತಿಮ್ಮರಾಜು , ಗ್ರಾ.ಪಂ ಸದಸ್ಯರಾದ ಶಂಕರ್ ಯಾದವ್ ಹನುಮಂತ, ರಾಜು , ಗೋವಿಂದರಾಜು , ರಮೇಶ್ ಮುಖಂಡರಾದ ಪಿ.ಟಿ.ಗೋವಿಂದಯ್ಯ , ಜಿ.ಟಿ. ವೆಂಕಟರವಣಪ್ಪ , ಗರಣಿ ರಾಮಾಂಜಿ , ಡೈರಿ ಅಧ್ಯಕ್ಷ ರಾಜು , ಬಿಎಂಟಿ ಸಿ ರಾಜು , ಚೆಲುವರಾಜು , ನೀಲಿಹಳ್ಳಿ ಶ್ರೀನಿವಾಸ್ , ಬ್ರಹ್ಮಸಮುದ್ರ ಸುರೇಶ್ , ದೊಡ್ಡನರಸಪ್ಪ , , ಬ್ರಹ್ಮ ಸಮುದ್ರ ದೇವರಾಜು , ರಾಮಣ್ಣ , ಪುಲಮಾಚಿ ಮೂರ್ತಣ್ಣ , ನಾಗರಾಜು , ನೂರಾರು ಜನ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ,ಕಾರ್ಯಕರ್ತರು ಇದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು