IMG 20230205 WA0031

ಕರ್ನಾಟಕ ರಣಧೀರರ ವೇದಿಕೆಯ ನೂತನ ಕೇಂದ್ರ ಕಚೇರಿ ಉದ್ಘಾಟನೆ

DISTRICT NEWS ಬೆಂಗಳೂರು

ಕರ್ನಾಟಕ ರಣಧೀರರ ವೇದಿಕೆಯ ನೂತನ ಕೇಂದ್ರ ಕಚೇರಿ ಉದ್ಘಾಟನೆ

ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಕೇಂದ್ರ ಕಚೇರಿ ಉದ್ಘಾಟನೆ.

ನೆಲಮಂಗಲ : ನಗರಸಭೆ ವ್ಯಾಪ್ತಿಯಲ್ಲಿ ಬರುವ ಜಕ್ಕಸಂದ್ರದ ಬ್ರಹ್ಮಣರ ಬೀದಿಯಲ್ಲಿ ಕರ್ನಾಟಕ ರಣಧೀರ ವೇದಿಕೆಯ ನೂತನ ಕೇಂದ್ರ ಕಚೇರಿಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಆರ್ ಶಂಕರ್ ಗೌಡ್ರು ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು..

ಇದೇ ಸಂದರ್ಭದಲ್ಲಿ ನಾಡಿನ ಒಳಿತಿಗಾಗಿ ನಾಡ ದೇವತೆಯಾದ ಶ್ರೀ ಭುವನೇಶ್ವರಿ ದೇವಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳೊಂದಿಗೆ ವಿವಿಧ ಹೋಮ ಹವನಗಳನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳಲಾಗಿತ್ತು..

ರಾಜ್ಯದ ವಿವಿಧ ಭಾಗಗಳಿಂದ ಕರ್ನಾಟಕ ರಣಧೀರರ ವೇದಿಕೆಯ ಕಾರ್ಯಕರ್ತರು ಈ ಶುಭ ಸಂದರ್ಭದಲ್ಲಿ ಹಾಜರಾಗಿ ತಾಯಿ ಭುವನೇಶ್ವರಿ ದೇವಿಯ ಕೃಪೆಗೆ ಪಾತ್ರರಾದರು..

ಕಚೇರಿ ಉದ್ಘಾಟನೆಯಾದ ನಂತರ ನೂತನವಾಗಿ ವಿಜಯಪುರ ಜಿಲ್ಲೆಯ ಜಿಲ್ಲಾ ಘಟಕವನ್ನು ಇದೆ ಸಂದರ್ಭದಲ್ಲಿ ಸ್ಥಾಪಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಮಹೇಶ್ ಆಯ್ಕೆಯಾದರು.ಕಾರ್ಯಧ್ಯಕ್ಷರಾಗಿ ಜಾವಿದ್ ಹಾಕಿಯಾದರೂ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು ಆಯ್ಕೆಯಾದ ಎಲ್ಲಾ ಕಾರ್ಯಕರ್ತರಿಗೂ ನೇಮಕಾತಿ ಆದೇಶ ಪತ್ರವನ್ನು ನೀಡಿ ಅಭಿನಂದಿಸಲಾಯಿತು..

ಕಲ್ಯಾಣ ಕರ್ನಾಟಕ ಭಾಗದ ರಾಜ್ಯ ಉಸ್ತುವಾರಿಯಾಗಿ ಬಸವರಾಜ್ ರವರನ್ನು ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಮುಖಂಡರುಗಳ ಸಮ್ಮುಖದಲ್ಲಿ ಆಯ್ಕೆ ಮಾಡಿ ನೇಮಕಾತಿ ಆದೇಶ ಪತ್ರವನ್ನು ನೀಡಿ ಅಭಿನಂದಿಸಲಾಯಿತು..

ನಂತರ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿರವರ ಸಮ್ಮುಖದಲ್ಲಿ ವಿವಿಧ ಭಾಗದ ಜಿಲ್ಲಾಧ್ಯಕ್ಷರುಗಳಿಗೆ ಮತ್ತು ತಾಲ್ಲೂಕು ಅಧ್ಯಕ್ಷರಿಗೆ ಸನ್ಮಾನಿಸಲಾಯಿತು…

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಆರ್ ಶಂಕರ್ ಗೌಡ್ರು ನಾಡಿನ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಹೋರಾಟ ಮಾಡುತ್ತಿದ್ದು ನಾಡು ನುಡಿ ಜಲ ಭಾಷೆಯ ವಿಚಾರವಾಗಿ ಕೆಲಸ ಮಾಡುತ್ತಿದೆ ಹಾಗೂ ನಿರುದ್ಯೋಗಿ ಯುವಕ ಯುವತಿಯರ ಪರ ದಿಟ್ಟ ಧ್ವನಿಯಾಗಿ ಸಂಘಟನೆಯು ಕರ್ತವ್ಯ ನಿರ್ವಹಿಸುತ್ತಿದೆ ಇದರೊಂದಿಗೆ ಹಿಂದಿ ಭಾಷೆಯ ವಿರುದ್ಧವಾಗಿಯೂ ಸಹ ದೊಡ್ಡ ಮಟ್ಟದಲ್ಲಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಇನ್ನು ಮುಂದಿನ ದಿನಗಳಲ್ಲಿ ನಾಡಿನ ಜನತೆಯ ಒಳಿತಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಲು ನಮ್ಮ ಸಂಘಟನೆ ಮುಂದಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು..

ಈ ಸಂದರ್ಭದಲ್ಲಿ ಕನ್ನಡ ರಣಧೀರರ ಪಡೆ ರಾಜ್ಯಾಧ್ಯಕ್ಷರಾದ ಚೇತನ್ ಗೌಡ, ನಾವು ದ್ರಾವಿಡರು ತುಂಬಾ ಸಂಘಟನೆಯ ಅಭಿ ಗೌಡ, ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ರಾಜ್ಯಾಧ್ಯಕ್ಷರು, ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರುಗಳು ಮತ್ತು ಕರ್ನಾಟಕ ರಣಧೀರ ವೇದಿಕೆಯ ವಿವಿಧ ಭಾಗಗಳ ತಾಲ್ಲೂಕು ಮತ್ತು ಜಿಲ್ಲಾಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು