IMG 20231125 WA0009

ಪಾವಗಡ: ಮತದಾರ ರ ಪಟ್ಟಿ ಸೇರ್ಪಡೆ ಗೆ ಜಾಗೃತಿ ಜಾಥ…!

DISTRICT NEWS ತುಮಕೂರು

ನಾವು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ತಹಶೀಲ್ದಾರ್ ವರದರಾಜು.

ಪಾವಗಡ : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ತುಮಕೂರು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿ ಮಾತನಾಡಿದರು.

18 ವರ್ಷ ತುಂಬಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.
ಯುವ ವಿದ್ಯಾವಂತ ಮತದಾರರು ನಿಮ್ಮ ಮನೆಯ ನೆರೆಹೊರೆಯವರಲ್ಲೂ ಸಹ ಜಾಗೃತಿ ಮೂಡಿಸ ಬೇಕು, ರಾಜ್ಯದಾದ್ಯಂತ ಚುನಾವಣಾ ಆಯೋಗ ದ ಆದೇಶದಂತೆ ಯುವ ಮತದಾರರ ನೊಂದಣಿ ಕಾರ್ಯಕ್ಕೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು. ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಯುವ ಮತದಾರರ ನು ಕಡ್ಡಾಯವಾಗಿ ನೋಂದಣೆ ಮಾಡಿಸಿ ಎಂದರು.

ನಂತರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್ ಕೆ.ಓ. ರವರು ಮಾತನಾಡಿ ಗ್ರಾಮೀಣಾ ಭಾಗದಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸಿ ಮತದಾನ ಪರಿಷ್ಕರಣೆ ನಡೆಸಲಾಗುತ್ತಿದೆ. ಗ್ರಾಮೀಣಾ ಭಾಗದಲ್ಲಿ ಶಾಲಾ ಶಿಕ್ಷಕರು ಮತ್ತು ಅಂಗನವಾಡಿ, ಆಶಾಕಾರ್ಯಕರ್ತೆಯರು ಮೂಲಹೆಚ್ಚು ಹೆಚ್ಚು ನೂತನ ಮತದಾರರನ್ನು ಗುರ್ತಿಸಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮವಹಿಸಲಾಗಿದೆ.ಎಂದರು.
ತಾಲ್ಲೂಕು ಕಂದಾಯ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದೊಂದಿಗೆ ಪಟ್ಟಣದ ಕೆಜಿಬಿವಿ, ಜಿ.ಜೇಸಿ. ಮತ್ತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಮತದಾನ ಮಾಡಿದವನೇ ಮಹಾಶೂರ, ಮತದಾನ ನಮ್ಮ ಹಕ್ಕು, ನಮ್ಮ ಮತ ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗುತ್ತಾ
ಪಟ್ಟಣದ ಗುರುಭವನದಿಂದ ಶನಿಮಹಾತ್ಮ ವೃತ್ತದ ವರೆಗೆ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ, ಬಿ .ಆರ್. ಸಿ ವೆಂಕಟೇಶ್ ಪಿ.ಇ.ಒ ಬಸವರಾಜ್, ಇ.ಸಿ.ಓ ಶಿವಕುಮಾರ್ ಇ.ಸಿ.ಓ ವೇಣುಗೋಪಾಲ ರೆಡ್ಡಿ, ಮಾರುತೇಶ್ , ಕಂದಾಯಅಧಿಕಾರಿ ರಾಜಗೋಪಾಲ್
ತಾಲ್ಲೂಕು ಯೋಜನಾಧಿಕಾರಿ ಮಲ್ಲಿಕಾರ್ಜುನ ಪುರಸಭೆ ಮುಖ್ಯ ಅಧಿಕಾರಿ, ಶಂಷುದ್ದೀನ್ ಮತ್ತು ವಿವಿಧ ಇಲಾಖೆಗಳ ತಾಲ್ಲೂಕು‌ಮಟ್ಟದ ಅಧಿಕಾರಿ ಗಳು, ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ