IMG 20231125 WA0001

ಪಾವಗಡ : ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು….!

DISTRICT NEWS ತುಮಕೂರು

ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು.
ಬಲರಾಮ್.
ಪಾವಗಡ: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು, ಸಾಧಿಸುವ ಗುರಿ, ಮನಸ್ಸು, ಇಚ್ಛೆ, ಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ಹೊಂದಿರಬೇಕೆಂದು ಸೋಲಾರ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಬಲರಾಮ್ ತಿಳಿಸಿದರು.
ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶನಿವಾರ ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿಗೆ ಸೋಲಾರ್ ಬರಲು ಮೊದಲು 5 ಊರಿನ ರೈತರು ಜಮೀನು ನೀಡಿದ್ದು ಹೆಚ್ಚು ಅನುಕೂಲವಾಯಿತೆಂದು.
ತನಗೆ ದೊರೆತಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ತಾಲ್ಲೂಕಿನ ಜನತೆಗೆ ಅರ್ಪಿಸುವುದಾಗಿ ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ಆರ್ ಪಿ ಸಾಂಬಸದಾಶಿವರೆಡ್ಡಿ ಮಾತನಾಡಿ,
ದಾನಿಗಳು, ಪದಾಧಿಕಾರಿಗಳು, ಸಂಘದ ಸದಸ್ಯರು ನೀಡಿದ ದೇಣಿಗೆಯಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೇವೆ ಎಂದು, ವಿದ್ಯಾರ್ಥಿ ವೇತನದಿಂದಾಗಿ ಹಲವಾರು ಬಡ ಪ್ರತಿಭಾವಂತ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಆರ್ ಕೃಷ್ಣಪ್ಪ ಮಾತನಾಡಿ,
ಶಿಕ್ಷಣಕ್ಕೋಸ್ಕರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಮಾತನಾಡಿ, ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮೂಲಕ ಅತಿಥಿ ಶಿಕ್ಷಕರನ್ನು ನೇಮಿಸಿ, ತಾಲೂಕಿನಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಿ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿಕೊಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ ಆರ್ ಸಿ ವೆಂಕಟೇಶ್, ವಿಶಾಲಾಕ್ಷಿ, ಆರ್ ಟಿ.ಖಾನ್ ,ವಿ. ದಾಸಣ್ಣ,
ಡಾಕ್ಟರ್ ಬಿ.ಎ ವೆಂಕಟೇಶುಲು. ಡಾಕ್ಟರ್. ಡಿ. ಗೋವಿಂದಪ್ಪ,, ನರಸಿಂಹಪ್ಪ,
ವೈ. ನಾಗರಾಜ್ , ಇನ್ನು ಮುಂತಾದವರು ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ