ಪಾವಗಡ ತಾಲ್ಲೂಕು ಆಡಳಿತ , ವಾಲ್ಮೀಕಿ ಜಾಗೃತಿ ಮೇದಿಕೆ, ಮದಕರಿ ನಾಯಕ ಸೇನೆವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಆಚರಿಸಲಾಯಿತು.
ಮೊದಲು ಪಟ್ಟಣದ ಕುಮಾರ ಸ್ವಾಮಿ ಬಡಾವಣೆಯಲ್ಲಿರುವ ವಾಲ್ಮೀಕಿ ದೇಗುಲದಲ್ಲಿ ಮಹರ್ಷಿ ವಾಲ್ಮೀಕಿಯವರ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ತಹಶೀಲ್ದಾರ ರ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ರವರು ಪರಿಶಿಷ್ಟ ಪಂಗಡದ ಮೀಸಲಾತಿಯನ್ನ 7.5 ಕ್ಕೆ ಹೆಚ್ಚಿಸಬೇಕು. ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಇದೇ ವೇಳೆ ವಾಲ್ಮೀಕಿ ಜಾಗೃತಿ ವೇದಿಕೆ ವತಿಯಿಂದ ತಹಶೀಲ್ದಾರ ರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ದಂಡಾಧಿಕಾರಿ ನಾಗರಾಜುರವರು, ಸಬ್ ಇನ್ಸ್ಪೆಕ್ಟರ್ ನಾಗರಾಜು ರವರು ಸೇರಿದಂತೆ ಹಲವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿ.ಐ.ನಾಗರಾಜು, ಬಿ.ಇ.ಒ ಸಿದ್ದಗಂಗಯ್ಯ, ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ, ಸಮಾಜದ ಮುಖಂಡರಾದ ಡಿ.ಸಿ.ಸಿ.ಬ್ಯಾಂಕ್ ಸೀನಪ್ಪ, ಮದಕರಿನಾಯಕ ಸೇನೆ ಅಧ್ಯಕ್ಷ ಡಾ.ಓಂಕಾರನಾಯಕ, ಕರಿಯಮ್ಮನಪಾಳ್ಯ ಓಂಕಾರ ನಾಯಕ, ಕನ್ನಮೇಡಿ ಸುರೇಶ್, ಇನ್ನು ಮುಂತಾದವರು ಇದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ*