- ಶಾಸಕ ವೆಂಕಟೇಶ ಅವರ ಮೌಖಿಕ ಆದೇಶದಂತೆ ವೈದ್ಯ ರ ವರ್ಗ- ಟಿ ಎಚ್ ಒ
- ವೈ.ಎನ್.ಹೊಸಕೋಟೆ ತಾಲ್ಲೂಕಿನ 2ನೇ ದೊಡ್ಡ ಪಟ್ಟಣವಾದ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ..
ಸಮಸ್ಯೆ ಸೃಷ್ಟಿ ಸಿದ ಟಿ.ಎಚ್.ಒ ತಿರುಪತಯ್ಯ : ವೈ ಎನ್ ಹೊಸಕೋಟೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗರಾಜು ಎಂಬ ವೈಧ್ಯರನ್ನು ವಿನಾಕಾರಣ ಕೊಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯುಕ್ತಿ ಗೊಳಿಸುವ ಮೂಲಕ ಇಲ್ಲಿ ವೈಧ್ಯರ ಸಮಸ್ಯೆ ಸೃಷ್ಟಿ ಯಾಗಲು ಟಿ ಎಚ್ ಒ ತಿರುಪತಯ್ಯ ಕಾರಣ ಎನ್ನುತ್ತಿದ್ದಾರೆ ಸ್ಥಳೀಯರು.
ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಧ್ರಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಸುಮಾರು 30-40 ಹಳ್ಳಿಗಳ ರೋಗಿಗಳು ಔಷದೋಪಚಾರಕ್ಕಾಗಿ ಬರುತ್ತಿದ್ದಾರೆ. ಇದನ್ನು ಗಮನಿಸಿರುವ ಸರ್ಕಾರವು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಇಲ್ಲಿ ಹಾಸಿಗೆ ವ್ಯವಸ್ಥೆ, ಆಪರೇಶನ್ ಕೊಠಡಿ, ಚಿಕಿತ್ಸಾ ಕೊಠಡಿ, ಲ್ಯಾಬ್, ಪರೀಕ್ಷ ಕೊಠಡಿಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿನಿತ್ಯ ಸುಮಾರು 300-350 ರೋಗಿಗಳ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಗೆ ಅಗತ್ಯವಿರುವ ವೈದ್ಯರು ಮತ್ತು ಶುಶ್ರೂಷಕರನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲಾ ಇದ್ದರೂ ಉಪಯೋಗವಿಲ್ಲದ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದೆ..
ಜನರಲ್ ಮೆಡಿಸಿನ್ ವೈದ್ಯ ರಿಲ್ಲ…
ಇಲ್ಲಿನ ಕೇಂದ್ರಕ್ಕೆ ಒಬ್ಬ ವೈದ್ಯಾಧಿಕಾರಿ ಮತ್ತು ಇಬ್ಬರು ವೈದ್ಯರ ಅಗತ್ಯ ಇದೆ. ಆದರೆ ಪ್ರಸ್ತುತ ಮಕ್ಕಳ ವೈದ್ಯರು ಮತ್ತು ತರಬೇತಿ ವೈದ್ಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಂತೆ ಆರು ಜನ ಶುಶ್ರೂಷಕರು ಅವಶ್ಯಕತೆ ಇದ್ದು, ಕೇವಲ ಮೂರು ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಡಿ ಗ್ರೂಫ್ ನೌಕರರಿಲ್ಲ. ಯಂತ್ರೋಪಕರಣಗಳನ್ನು ನಿರ್ವಹಿಸುವ ಪರಿಣಿತರಿಲ್ಲ. ತುರ್ತು ಸೇವೆಗಳಿಗೆ ಅಗತ್ಯವಾದ ಆಂಬುಲೆನ್ಸ್ ಅಥವಾ 108 ಸೇವೆ ನಿಂತು ಬಹಳಷ್ಟು ದಿನಗಳೇ ಕಳೆದಿವೆ. ಸಮುದಾಯ ಆರೋಗ್ಯ ಕೇಂದ್ರ ಗ್ರಾಮದ ಹೊರವಲಯದಲ್ಲಿದ್ದು, ರಾತ್ರಿ ಉಳಿದುಕೊಳ್ಳುವ ರೋಗಿಗಳನ್ನು ನೋಡಿಕೊಳ್ಳಲು ವೈದ್ಯರ ಅಥವಾ ಶುಶ್ರೂಷಕರ ಕೊರತೆ ಕಾಡುತ್ತಿದೆ. ಮತ್ತು ದೊಡ್ಡ ಕಟ್ಟಡವನ್ನು ಕಾಯುವ ಕಾವಲುಗಾರ ವ್ಯವಸ್ಥೆಯ ಅಳವಡಿಕೆಯಾಗಿಲ್ಲ. ಇಂತಹ ಹತ್ತು ಹಲವು ಕಾರಣಗಳಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸೊರಗುತ್ತಿದೆ.
ಬಡ ರೋಗಿಗಳಿಗೆ ಶಾಪವಾಗಿ ಪರಿಣಮಿಸಿದೆ. ಈ ಹಿಂದೆ ಉತ್ತಮ ಚಿಕಿತ್ಸೆ ಮಾಡುತ್ತಿದ್ದ ಡಾ.ಲಿಂಗರಾಜು ರವರನ್ನು ಕೋಟಗುಡ್ಡಕ್ಕೆ ಸ್ಥಳಾಂತರಿಸಿದ್ದು, ಇಲ್ಲಿನ ರೋಗಿಗಳು ಕೋಟಗುಡ್ಡಕ್ಕೆ ಹೋಗಿ ತೋರಿಸಿಕೊಂಡು ಬರುತ್ತಿರುವುದು ಅನಿವಾರ್ಯವಾಗಿದೆ ಎಂದು ಗುರುಪ್ರಸಾದ್, ತಿಪ್ಪೇಸ್ವಾಮಿ, ಈರಪ್ಪ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ
ಸಮುದಾಯ ಆರೋಗ್ಯ ಕೇಂದ್ರದ ಈ ಸ್ಥಿತಿಗೆ ತಾಲ್ಲೂಕು ಆರೋಗ್ಯ ಅಧಿಕಾರಿಯೇ ನೇರ ಹೊಣೆಗಾರರಾಗಿದ್ದು, ಸಿಬ್ಬಂದಿಯ ನೇಮಕ, ಮೇಲುಸ್ತುವಾರಿ, ಇನ್ನಿತರೆ ವಿಷಯಗಳಲ್ಲಿ ನಿರ್ಲಕ್ಷ ಧೋರಣೆ ಹೊಂದಿದ್ದು, ಈ ಭಾಗದ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತೊಂದರೆ ಉಂಟುವಾಗುವ ಸ್ಥಿತಿ ತಂದಿದ್ದಾರೆ. ಸಮುದಾಯದ ಆರೋಗ್ಯ ಕಾಳಜಿ ಇಲ್ಲದ ಇಂತಹ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಅನಿವಾರ್ಯವಾಗಿ ಧರಣಿ ಅಥವಾ ಪ್ರತಿಭಟನೆ ಮಾಡಬೇಕಾಗಬಹುದು ಎಂದು ಬಿ.ಹೊಸಹಳ್ಳಿ ನಾಗರಾಜು, ಎಲ್.ಕೆ.ರಘು, ದರ್ಶನ್, ತೇಜ ತಮ್ಮ ಅಗ್ರಹವನ್ನು ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಶಾಸಕರು ಹಾಗೂ ಗ್ರಾಮಪಂಚಾಯಿತಿಯ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿಯನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಿ ಎಚ್ ಒ ಪ್ರತಿಕ್ರಿಯೆ :
ಪಾವಗಡ ಟಿ ಎಚ್ ಒ ತಿರುಪತಯ್ಯ ಅವರನ್ಬು ಸಪ್ತಸ್ವರ ಪತ್ರಿಕೆಯಿಂದ ಸಂಪರ್ಕ ಮಾಡಿ ವೈ ಎನ್ ಹೊಸಕೋಟೆ ಆರೋಗ್ಯಯ ಕೇಂದ್ರ ದ ವೈದ್ಯ ರ ಸಮಸ್ಯೆಯನ್ನು ತಿಳಿಸಿದಾಗ. ಮೊದಲು ಲಂಗರಾಜು ವೈದ್ಯ ರನ್ನು 3 ದಿನ ವೈ ಎನ್ ಹೊಸಕೋಟೆ ಗೆ ಇನ್ನು 3 ದಿನ ಕೊಟಗುಡ್ಡ ಕ್ಕೆ ನಿಯುಕ್ತಿ ಗೊಳಿಸುತ್ತೇನೆ ಎಂದು ತಿಳಿಸಿದ್ದರು.
ಸೂಮಾರು 15 ದಿನ ಕಳೆದರು. ಇಲ್ಲಿಯ ವರೆಗು ವೈದ್ಯ ರು ಬಂದಿಲ್ಲ ಮತ್ತೆ ಸಂಪರ್ಕಿಸಿದರೆ ಬೇಜವಬ್ದಾರಿ ಉತ್ತರ ನೀಡುತ್ತಾರೆ. ಮಕ್ಕಳ ವೈದ್ಯರಿದ್ದಾರೆ ಅವರೆ ರೋಗಿಗಳನ್ನು ನೋಡುತ್ತಾರೆ ಎನ್ನುತ್ತಾರೆ.
ಶಾಸಕ ವೆಂಕಟೇಶ ಅವರು ಪೋನ್ ಮಾಡಿ ಹೇಳಿದ್ದರಿಂದ ವೈದ್ಯ ಲಿಂಗರಾಜು ಅವರನ್ನು ಕೊಟಗುಡ್ಡ ಕ್ಕೆ ಬದಲಾಯಿಸಿದ್ದೇನೆ ಎನ್ಬುವ ಮೂಲಕ ಶಾಸಕರತ್ತ ಬೆಟ್ಟು ಮಾಡುವ ಮೂಲಕ ಹೊಸ ನಾಟಕ ಮಾಡುತ್ತಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆಗಳು………
ತಾಲ್ಲೂಕಿನಲ್ಲಿ ಸುಮಾರು ಎಂಟು ವರ್ಷಗಳಿಂದ ನೆಲೆಯೂರಿಕೊಂಡಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತಿರುಪತಯ್ಯ ಹೆಚ್ಚಿನ ನಿರ್ಲಕ್ಷ ಧೋರಣೆ ಹೊಂದಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮಾಹಿತಿ ನೀಡಿ ಆಸ್ಪತ್ರೆಗಳಲ್ಲಿ ಲೋಪಧೋಷಗಳಿದ್ದು ಸರಿಪಡಿಸಿ ಎಂದು ತಿಳಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ಅವರಿಂದ ಲಭಿಸದೆ ತಾಲ್ಲೂಕಿನ ಆಸ್ಪತ್ರೆಗಳ ವ್ಯವಸ್ಥೆ ಹಾಳಾಗುತ್ತಿದೆ. ಯಾವುದೇ ಆಸ್ಪತ್ರೆಗಳಿಗೆ ಭೇಟಿ ನೀಡುವುದಿಲ್ಲ. ಆದಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಇಂತಹ ನಿರ್ಲಕ್ಷವಹಿಸುತ್ತಿರುವ ಅಧಿಕಾರಿಯನ್ನು ತಾಲ್ಲೂಕಿನಿಂದ ವರ್ಗ ಮಾಡಿ ಉತ್ತಮ ಅಧಿಕಾರಿಯನ್ನು ನೇಮಕ ಮಾಡಬೇಕು ಎನ್ನುತ್ತಾರೆ ಲಕ್ಷ್ಮಣ ಮೂರ್ತಿ, ಜಿಲ್ಲಾಧ್ಯಕ್ಷ, ಮಾಹಿತಿಹಕ್ಕು ಕಾರ್ಯಕರ್ತರ ವೇದ
ಪಟ್ಟಣದಲ್ಲಿ ಇರುವು ಒಂದೆರಡು ಖಾಸಗಿ ಆಸ್ಪತ್ರೆಯಾಗಿದ್ದು, ಬೆಳಿಗಿನಿಂದ ಸಂಜೆಯವರೆಗೆ ಮಾತ್ರ ಇಲ್ಲ ಶುಶ್ರೂಷೆ ಲಭ್ಯ. ರಾತ್ರಿಯಾದರೆ ಸರ್ಕಾರಿ ಆಸ್ಪತ್ರೆಯೇ ರೋಗಿಗಳಿಗೆ ಅನಿವಾರ್ಯ ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿಯ ವೇಳೆ ವೈದ್ಯರು ಲಭ್ಯವಾಗುವುದಿಲ್ಲ. ಆದಾಗಿ ಇದರಿಂದ ರೋಗಿಗಳಿಗೆ ತುಂಭಾ ತೊಂದರೆಯಾಗುತ್ತಿದ್ದು, ತಕ್ಷಣ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ವೈದ್ಯರನ್ನು ನೇಮಕ ಮಾಡುವ ವ್ಯವಸ್ಥೆಯಾಗಬೇಕು ಎಂದು ಎಸ್ .ಟಿ.ನಾಗರಾಜು ತಿಳಿಸುತ್ತಾರೆ
ಜನಸಂಖ್ಯೆ ಆಧಾರದಲ್ಲಿ ವೈದ್ಯ ರನ್ನು ಯಾವ ರೀತಿ ನಿಯುಕ್ತಿ ಗೊಳಿಸಬೇಕು ಎಂಬ ಸಾಮನ್ಯ ಜ್ಞಾನ ವಿಲ್ಲದಂತ ಟಿ ಎಚ್ ಒ ಪಾವಗಡ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಜನತೆಯ ದೌರ್ಬಾಗ್ಯವಲ್ಲದೆ ಮತ್ತೇನು….!
- ವರದಿ: ರಾಮಚಂದ್ರ- ವೈ ಎನ್ ಎಚ್.